Radhika Pandit: ಈ ದಿನಕ್ಕಾಗಿಯೇ ಕಾಯುತ್ತಿದ್ದರಂತೆ ನಟಿ ರಾಧಿಕಾ ಪಂಡಿತ್​ 

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ರಾಧಿಕಾ ಪಂಡಿತ್​ ಅವರು, ರಾಧಿಕಾ ಪಂಡಿತ್​ ಸಾಮಾಜಿಕ ಜಾಲತಾಣದಲ್ಲಿ ಆದಷ್ಟು ಸಕಾರಾತ್ಮ ಹಾಗೂ ಖುಷಿ ನೀಡುವ ಪೋಸ್ಟ್​ಗಳನ್ನೇ ಮಾಡುವುದಾಗಿ ನೆಟ್ಟಿಗರಿಗೆ ಈ ಹಿಂದೆ ಮಾತು ಕೊಟ್ಟಿದ್ದರು. ಅದರಂತೆ ಕೆಲವು ಪೋಸ್ಟ್​ಗಳನ್ನೂ ಮಾಡುತ್ತಿದ್ದಾರೆ.

ನಟಿ ರಾಧಿಕಾ ಪಂಡಿತ್​ 

ನಟಿ ರಾಧಿಕಾ ಪಂಡಿತ್​ 

  • Share this:
ಸ್ಯಾಂಡಲ್​ವುಡ್​ (Sandalwood) ಸಿಂಡ್ರೆಲಾ ರಾಧಿಕಾ ಪಂಡಿತ್​  (Radhika Pandit)ಸದ್ಯ ತಮ್ಮ ಮಕ್ಕಳ ಆರೈಕೆ ಮಾಡುತ್ತಾ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹೌದು, ಮಕ್ಕಳಾದಾಗಿನಿಂದ ಬಣ್ಣದ ಲೋಕದಿಂದ ಕೊಂಚ ದೂರ ಉಳಿದಿರುವ ನಟಿ ಮಕ್ಕಳಾದ ಆಯ್ರಾ (Ayra) ಹಾಗೂ ಯರ್ಥವ್ (Yatharv)​​ ಜೊತೆ ಸಮಯ ಕಳೆಯೋದರಲ್ಲಿ ಖುಷಿ ಕಂಡುಕೊಂಡಿದ್ದಾರೆ. ಸಿನಿಮಾಗಳಿಂದ ದೂರದಲ್ಲಿದ್ದರೂ ಸಹ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿದ್ದಾರೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಪತಿ ಯಶ್​ಗಿಂತ (Yash) ಹೆಚ್ಚಾಗಿ ಸಕ್ರಿಯವಾಗಿರುವ ರಾಧಿಕಾ ಪಂಡಿತ್ ಇನ್​ಸ್ಟಾಗ್ರಾಂನಲ್ಲಿ ಆಗಾಗ ಪೋಸ್ಟ್​ಗಳನ್ನು ಮಾಡುತ್ತಿರುತ್ತಾರೆ. ಜೊತೆಗೆ ತಮ್ಮ ಹಾಗೂ ಮಕ್ಕಳ ಕುರಿತಾದ ವಿಷಯಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಸಿನಿಮಾ ರಂಗದಿಂದ ದೂರ ಇರುವ ರಾಧಿಕಾ ಅವರು ಈ ಒಂದು ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದರಂತೆ. ಹೀಗೊಂದು ಪೋಸ್ಟ್​ ಅನ್ನು ಇನ್​ಸ್ಟಾಗ್ರಾಂನಲ್ಲಿ ಮಾಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ರಾಧಿಕಾ ಪಂಡಿತ್​ ಅವರು, ರಾಧಿಕಾ ಪಂಡಿತ್​ ಸಾಮಾಜಿಕ ಜಾಲತಾಣದಲ್ಲಿ ಆದಷ್ಟು ಸಕಾರಾತ್ಮ ಹಾಗೂ ಖುಷಿ ನೀಡುವ ಪೋಸ್ಟ್​ಗಳನ್ನೇ ಮಾಡುವುದಾಗಿ ನೆಟ್ಟಿಗರಿಗೆ ಈ ಹಿಂದೆ ಮಾತು ಕೊಟ್ಟಿದ್ದರು. ಅದರಂತೆ ಕೆಲವು ಪೋಸ್ಟ್​ಗಳನ್ನೂ ಮಾಡುತ್ತಿದ್ದಾರೆ.


ರಾಧಿಕಾ ಪಂಡಿತ್ ಅವರು ಕೆಲವು ನಿಮಿಷಗಳ ಹಿಂದೆ ಮಾಡಿರುವ ಈ ಪೋಸ್ಟ್​ನಲ್ಲಿ ತಾನು ಈ ದಿನಕ್ಕಾಗಿ ಕಾಯುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ಈ ದಿನಕ್ಕಾಗಿ ಅಂದರೆ ವಾರಾಂತ್ಯಕ್ಕಾಗಿ ಕಳೆದ ಸೋಮವಾರದಿಂದ ಕಾತರಳಾಗಿ ಕಾಯುತ್ತಿದ್ದೆ. ಅಬ್ಬಾ ವಾರಾಂತ್ಯ ಕೊನೆಗೂ ಬಂತು ಎನ್ನುವ ರೀತಿಯಲ್ಲಿ ಪೋಸ್ಟ್​ ಮಾಡಿದ್ದಾರೆ.
ಮಕ್ಕಳ ಜೊತೆ ಮನೆಯಲ್ಲೇ ಇರುವ ನಟಿಗೆ ವಾರಾಂತ್ಯ ಬಂದತೆಂದರೆ ನಿಜಕ್ಕೂ ಖುಷಿ. ಅವರ ಸಂತಸವನ್ನು ರಾಧಿಕಾ ಮಾಡಿರುವ ಈ ಪೋಸ್ಟ್​ನಿಂದ ತಿಳಿಯಬಹುದಾಗಿದೆ. ಇನ್ನು ರಾಧಿಕಾ ಪಂಡಿತ್​ ಅವರು ಇತ್ತೀಚೆಗಷ್ಟೆ ತಮ್ಮ ಹೊಸ ಮನೆಗೆ ಶಿಫ್ಟ್​ ಆಗಿದ್ದಾರೆ.

ಇದನ್ನೂ ಓದಿ: Raayan Raj Sarja: ಹಿಂದೂ-ಕ್ರೈಸ್ತ್ರ ಸಂಪ್ರದಾಯದಂತೆ ನಡೆಯಿತು ಚಿರು ಸರ್ಜಾ ಮಗನ ನಾಮಕರಣ: ಅರ್ಜುನ್ ಸರ್ಜಾ ಕುಟುಂಬ ಗೈರು

ರೇಸ್​ಕೋರ್ಸ್​ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್​ ಅಪಾರ್ಟ್​ಮೆಂಟ್​ನಲ್ಲಿ ಯಶ್​ ಈ ಹಿಂದೆಯೇ ಮನೆ ಖರೀದಿಸಿದ್ದರು. ಈ ಐಷಾರಾಮಿ ಅಪಾರ್ಟ್​ಮೆಂಟಿನಲ್ಲಿ ಇಂಟಿರಿಯರ್ ಕೆಲಸಗಳು ನಡೆಯುತ್ತಿದ್ದವು. ಹೀಗಾಗಿ ಕೆಲಸಗಳು ಮುಗಿದ ನಂತರ  ಜುಲೈ 1ರಂದು ರಾಕಿಂಗ್​ ದಂಪತಿ ಯಶ್​ ಹಾಗೂ ರಾಧಿಕಾ ಪಂಡಿತ್​ ಅವರು ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದರು. ತಮ್ಮ ಕುಟುಂಬದವರು ಹಾಗೂ ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ಪೂಜೆ ಮಾಡಿ, ಮನೆಗೆ ಕಾಲಿಟ್ಟಿದ್ದರು ಯಶ್​-ರಾಧಿಕಾ. ಇನ್ನುಇದೇ ಅಪಾರ್ಟ್​ಮೆಂಟ್​ನಲ್ಲಿ ಅಂಬರೀಷ್​ ಅವರ ಮನೆ ಸಹ ಇದೆಯಂತೆ.

ಇದನ್ನೂ ಓದಿ: Sidharth Shukla Funeral: ಇಂದು ನಡೆಯಲಿದೆ ನಟ ಸಿದ್ಧಾರ್ಥ್​ ಶುಕ್ಲಾ ಅಂತ್ಯ ಸಂಸ್ಕಾರ

ರಕ್ಷಾ ಬಂಧನ ಹಾಗೂ ಕೃಷ್ಣ ಜನ್ಮಾಷ್ಟಮಿಯಂದು ರಾಧಿಕಾ ಪಂಡಿತ್ ತಮ್ಮ ಮಕ್ಕಳ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಚಿತ್ರಗಳಿಗೆ ನೆಟ್ಟಿಗರಿಗೆ ಮೆಚ್ಚುಗೆ ಸಹ ವ್ಯಕ್ತವಾಗಿತ್ತು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Anitha E
First published: