ತಮಿಳುನಾಡಿನಲ್ಲಿ ಅಣ್ತಮ್ಮಂದೇ ಹವಾ; ಏರಿಕೆ ಆಯ್ತು ಚಿತ್ರಮಂದಿರಗಳ ಸಂಖ್ಯೆ

ಮೊದಲ ದಿನ ತಮಿಳುನಾಡಿನಲ್ಲಿ 50 ಚಿತ್ರಮಂದಿರಗಳಲ್ಲಿ ‘ಕೆಜಿಎಫ್​’ ಪ್ರದರ್ಶನ ಕಂಡರೆ, ಎರಡನೇ ದಿನ ಅದು 64ಕ್ಕೆ ಏರಿಕೆ ಆಗಿತ್ತು. ಭಾನುವಾರ ಕೆಜಿಎಫ್​ 100 ಥಿಯೇಟರ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

Rajesh Duggumane | news18
Updated:December 24, 2018, 2:05 PM IST
ತಮಿಳುನಾಡಿನಲ್ಲಿ ಅಣ್ತಮ್ಮಂದೇ ಹವಾ; ಏರಿಕೆ ಆಯ್ತು ಚಿತ್ರಮಂದಿರಗಳ ಸಂಖ್ಯೆ
ಕೆಜಿಎಫ್​ ಚಿತ್ರದಲ್ಲಿನ ಯಶ್​ ಲುಕ್​
  • News18
  • Last Updated: December 24, 2018, 2:05 PM IST
  • Share this:
ತಮಿಳು ಸಿನಿಮಾಗಳು ಕರ್ನಾಟಕದಲ್ಲಿ ತೆರೆಕಾಣುತ್ತವೆ ಎಂದಾದರೆ ಅದಕ್ಕೆ ತೀವ್ರ ವಿರೋಧ ವ್ಯಕ್ಯವಾಗುತ್ತದೆ. ಇತ್ತೀಚೆಗೆ ತೆರೆಕಂಡ ರಜನಿಕಾಂತ್​ ನಟನೆಯ ‘2.0’ ಸಿನಿಮಾ ವಿರುದ್ಧ ಕನ್ನಡ ಪರ ಸಂಘಟನೆಗಳು ಅಪಸ್ವರ ಎತ್ತಿದ್ದವು. ಇನ್ನು ಕನ್ನಡದ ಚಿತ್ರಗಳು ತಮಿಳುನಾಡಿನಲ್ಲಿ ಬಿಡುಗಡೆ ಆಗುತ್ತವೆ ಎಂದರೂ ಇದೇ ಹಾಡು. ಆದರೆ, ‘ಕೆಜಿಎಫ್​’ ಚಿತ್ರದ ವಿಚಾರದಲ್ಲಿ ಮಾತ್ರ ಹಾಗಾಗಿಲ್ಲ. ತಮಿಳಿನಲ್ಲಿ ಡಬ್​ ಆಗಿ ತೆರೆಕಂಡಿರುವ ಕನ್ನಡ ಚಿತ್ರಕ್ಕೆ ಭಾರಿ ಬೇಡಿಕೆ ಬಂದಿದ್ದು, ದಿನ ಕಳೆದಂತೆ ತಮಿಳುನಾಡಿನಲ್ಲಿ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತಿದೆ.

‘ಕೆಜಿಎಫ್​’ ಚಿತ್ರ ತಮಿಳಿನಲ್ಲಿ ತೆರೆಕಾಣುತ್ತದೆ ಎಂದಾಗ ಅಲ್ಲಿಯವರು ವಿರೋಧ ವ್ಯಕ್ಯಪಡಿಸಿದ್ದರು. ‘ಕೆಜಿಎಫ್​’ ಬೆಂಬಲಕ್ಕೆ ನಿಂತ ತಮಿಳು ನಟ ವಿಶಾಲ್​ ಬಂಧನ ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಆದರೆ, ‘ಕೆಜಿಎಫ್​’ ಹವಾ ಇದೆಲ್ಲವನ್ನೂ ಮೆಟ್ಟಿ ನಿಂತಿದೆ. ತಮಿಳುನಾಡಿನಲ್ಲಿ ‘ಕೆಜಿಎಫ್​’ಗೆ ದಿನದಿಂದ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚುತ್ತಿದೆ.

ಇದನ್ನೂ ಓದಿ: ‘ಕೆಜಿಎಫ್’​ ಚಿತ್ರದ ನಿರ್ಮಾಪಕರಿಗೆ ಪೈಸಾ ವಸೂಲ್​!; ಶತಕೋಟಿ ಗಳಿಕೆಯ ಸನಿಹದಲ್ಲಿ ಯಶ್​ ಸಿನಿಮಾ

ಮೊದಲ ದಿನ ತಮಿಳುನಾಡಿನಲ್ಲಿ 50 ಚಿತ್ರಮಂದಿರಗಳಲ್ಲಿ ‘ಕೆಜಿಎಫ್​’ ಪ್ರದರ್ಶನ ಕಂಡರೆ, ಎರಡನೇ ದಿನ ಅದು 64ಕ್ಕೆ ಏರಿಕೆ ಆಗಿತ್ತು. ಭಾನುವಾರ 'ಕೆಜಿಎಫ್​' 100 ಥಿಯೇಟರ್​ಗಳಲ್ಲಿ ಪ್ರದರ್ಶನ ಕಂಡಿದೆ. ಚೆನ್ನೈನಲ್ಲೂ ಶೋಗಳ ಸಂಖ್ಯೆ ಏರಿಕೆ ಆಗಿದೆ. ಚೆನ್ನೈನಲ್ಲಿ ಮೊದಲ ದಿನ ‘ಕೆಜಿಎಫ್​’ 14 ಶೋ ಪ್ರದರ್ಶನ ಕಂಡಿತ್ತು. ನಾಲ್ಕನೇ ದಿನಕ್ಕೆ ಇದು 36ಕ್ಕೆ ಏರಿಕೆ ಆಗಿರುವುದು ವಿಶೇಷ.

‘ಕೆಜಿಎಫ್​’ ಚಿತ್ರ ನಾಲ್ಕು ಭಾಷೆಗಳಲ್ಲಿ ಡಬ್​ ಆಗಿ ರಿಲೀಸ್ ಆಗಿದೆ. ಇದಾದ ಬೆನ್ನಲ್ಲೇ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್​ ಬೇಕೆ ಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಕನ್ನಡ ಚಿತ್ರ ತಮಿಳಿನಲ್ಲಿ ಡಬ್​ ಆಗಿ ತೆರೆಕಾಣುತ್ತದೆ ಎಂದಾದರೆ, ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್​ ಆಗಿಯೇ ತೆರೆಕಾಣಬೇಕು ಎಂದು ಡಬ್ಬಿಂಗ್​ ಪರ ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ: ‘ಕೆಜಿಎಫ್​’ ನೋಡಿ ಮನಸೋತ ಬಾಲಿವುಡ್​ ಮಂದಿ; ಏರುತ್ತಲೇ ಇದೆ ಚಿತ್ರದ ಕಲೆಕ್ಷನ್​

First published: December 24, 2018, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading