ಬಾಹುಬಲಿ 2 ದಾಖಲೆಯನ್ನು ಮುರಿಯಲಿದೆ ಕೆಜಿಎಫ್​; ಎಲ್ಲೆಲ್ಲೂ ಅಣ್ತಮ್ಮಂದೇ ಹವಾ

ಯಶ್​ ಚಿತ್ರಕ್ಕೆ ಕನ್ನಡದಲ್ಲಿ ದೊರೆತಷ್ಟು ಪ್ರಚಾರ ಬಾಲಿವುಡ್​ನಲ್ಲಿ ಸಿಕ್ಕಿರಲಿಲ್ಲ. ಆದಾಗ್ಯೂ ಈ ಚಿತ್ರ ಹಿಂದಿ ಭಾಷೆಯಲ್ಲಿ ದಿನೇ ದಿನೇ ಕಲೆಕ್ಷನ್​ ಹೆಚ್ಚಿಸಿಕೊಳ್ಳುತ್ತಿದೆ.

Rajesh Duggumane | news18
Updated:December 26, 2018, 12:55 PM IST
ಬಾಹುಬಲಿ 2 ದಾಖಲೆಯನ್ನು ಮುರಿಯಲಿದೆ ಕೆಜಿಎಫ್​; ಎಲ್ಲೆಲ್ಲೂ ಅಣ್ತಮ್ಮಂದೇ ಹವಾ
ಕೆಜಿಎಫ್​ನಲ್ಲಿ ಯಶ್​
  • News18
  • Last Updated: December 26, 2018, 12:55 PM IST
  • Share this:
ರಾಕಿಂಗ್​ ಸ್ಟಾರ್​ ನಟನೆಯ ‘ಕೆಜೆಎಫ್​’ ಚಿತ್ರ ತೆರೆಕಂಡು ಒಂದು ವಾರವಾಗುತ್ತಾ ಬಂದರೂ ಸಿನಿಮಾದ ಹವಾ ಮಾತ್ರ ಇನ್ನೂ ನಿಂತಿಲ್ಲ. ಚಿತ್ರಕ್ಕೆ ಎಲ್ಲಕಡೆಗಳಿಂದ ಮೆಚ್ಚುಗೆ ಕೇಳಿ ಬರುವುದರ ಜೊತೆಗೆ, ಬಾಕ್ಸ್​ ಆಫೀಸ್​ ಕಲೆಕ್ಷನ್​ನಲ್ಲೂ ಏರಿಕೆ ಆಗುತ್ತಿದೆ. ಅಚ್ಚರಿ ಎಂದರೆ, ಗಳಿಕೆ​ ವಿಚಾರದಲ್ಲಿ ಕಳೆದ ವರ್ಷ ತೆರೆಕಂಡಿದ್ದ​ ‘ಬಾಹುಬಲಿ 2’ ಚಿತ್ರ ಮಾಡಿದ ದಾಖಲೆ ಮುರಿಯಲು ‘ಕೆಜಿಎಫ್’​ ಸಿದ್ಧವಾಗಿದೆ.

‘ಬಾಹುಬಲಿ’ ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡಿತ್ತು. ‘ಬಾಹುಬಲಿ 2’ ಚಿತ್ರಕ್ಕೆ ಮೈಲೇಜ್​ ಸಿಗಲು ಇದೂ ಒಂದು ಕಾರಣ. ಇನ್ನು ಸಿನಿಮಾದ ಮೇಕಿಂಗ್​, ಹಿನ್ನೆಲೆ ಸಂಗೀತ ಹೀಗೆ ಅನೇಕ ವಿಚಾರಗಳು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿತ್ತು. ಹಾಗಾಗಿ ‘ಬಾಹುಬಲಿ 2’ ಚಿತ್ರಕ್ಕೆ ಕರ್ನಾಟಕದಲ್ಲೂ ಒಳ್ಳೆಯ ಮಾರುಕಟ್ಟೆ ಸಿಕ್ಕಿತ್ತು. ಈ ಸಿನಿಮಾ ನಮ್ಮ ರಾಜ್ಯದಲ್ಲಿ ಭರ್ಜರಿ ಕಮಾಯಿ ಮಾಡಿತ್ತು.

ವಿಶ್ವ ಮಟ್ಟದಲ್ಲಿ ‘ಕೆಜಿಎಫ್​’ 100 ಕೋಟಿ ರೂ. ಗಳಿಕೆ ಮಾಡಿದೆ ಎಂಬುದು ಬಾಕ್ಸ್​ ಆಫೀಸ್​ ತಜ್ಞರ ಲೆಕ್ಕಾಚಾರ. ಸ್ಯಾಂಡಲ್​ವುಡ್​ನಲ್ಲೂ ಚಿತ್ರದ ಹವಾ ಜೋರಾಗಿದೆ. ಕನ್ನಡದಲ್ಲಿ ಯಾವ ಚಿತ್ರವೂ ಮಾಡದಷ್ಟು ಕಲೆಕ್ಷನ್ ‘ಕೆಜಿಎಫ್’​ ಚಿತ್ರ ಮಾಡುತ್ತಿದೆ. ಹಾಗಾಗಿ ಕನ್ನಡದ ನೆಲದಲ್ಲಿ 'ಬಾಹುಬಲಿ 2' ಮಾಡಿದ ದಾಖಲೆಯನ್ನು ‘ಕೆಜಿಎಫ್’​ ಪುಡಿಗಟ್ಟಲಿದೆ ಎಂಬುದು ಗಾಂಧಿನಗರದ ಮಾತು.ಯಶ್​ ಚಿತ್ರಕ್ಕೆ ಕನ್ನಡದಲ್ಲಿ ದೊರೆತಷ್ಟು ಪ್ರಚಾರ ಬಾಲಿವುಡ್​ನಲ್ಲಿ ಸಿಕ್ಕಿರಲಿಲ್ಲ. ಆದಾಗ್ಯೂ ಈ ಚಿತ್ರ ಹಿಂದಿ ಭಾಷೆಯಲ್ಲಿ ದಿನೇ ದಿನೇ ಕಲೆಕ್ಷನ್​ ಹೆಚ್ಚಿಸಿಕೊಳ್ಳುತ್ತಿದೆ. ಮಂಗಳವಾರ 4.35 ಕೋಟಿ ರೂ. ಗಳಿಸುವ ಮೂಲಕ ಬಾಲಿವುಡ್​ನಲ್ಲಿ ಚಿತ್ರದ ಒಟ್ಟು ಕಲೆಕ್ಷನ್​ 16.45 ಕೋಟಿ ರೂ. ತೆಕ್ಕೆಗೆ ಹಾಕಿಕೊಂಡಿದೆ.‘ಕೆಜಿಎಫ್​’ಗೆ ಪ್ರಶಾಂತ್​ ನೀಲ್​ ಅವರ ನಿರ್ದೇಶನವಿದೆ. ಶ್ರೀನಿಧಿ ಶೆಟ್ಟಿ ಯಶ್​ಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್​ ಕುಮಾರ್​, ವಸಿಷ್ಠ ಸಿಂಹ ಮೊದಲಾದವರು ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಚಿತ್ರಕ್ಕೆ ಎಲ್ಲ ಕಡೆಗಳಿಂದ ಪ್ರಶಂಸೆ

'ಕೆಜಿಎಫ್​' ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್​, ಪುನೀತ್​ ರಾಜ್​ಕುಮಾರ್​, ಬಾಲಿವುಡ್​ ನಟಿ ರವೀನಾ ಠಂಡನ್​,  ಸುಮಲತಾ ಅಂಬರೀಶ್​, ಜಗ್ಗೇಶ್​ ಸೇರಿ ಅನೇಕರು ಚಿತ್ರಕ್ಕೆ ಶುಭಕೋರಿದ್ದಾರೆ.

First published: December 26, 2018, 11:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading