ಗಲ್ಲಿ ಗಲ್ಲಿಯಲ್ಲಿ ಗಲಿ ಗಲಿ ಹವಾ; 10 ಕೋಟಿ ಬಾರಿ ವೀಕ್ಷಣೆ ಕಂಡ ಕೆಜಿಎಫ್​ ಹಾಡು

ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡು ಸದ್ದು ಮಾಡಿತ್ತು. ಆದರೆ, ಕೆಜಿಎಫ್​ ಹಿಂದಿ ಅವತರಣಿಕೆಯಲ್ಲಿ ಮಾತ್ರ 1989ರಲ್ಲಿ ಬಿಡುಗಡೆಯಾಗಿದ್ದ ‘ತ್ರಿದೇವ್​’ ಚಿತ್ರದ ‘ಗಲಿ ಗಲಿ ಮೇ ಫಿರ್ತಾ ಹೈ” ಹಾಡನ್ನು ಮರುಸೃಷ್ಟಿ ಮಾಡಲಾಗಿತ್ತು.

Rajesh Duggumane | news18
Updated:January 23, 2019, 4:17 PM IST
ಗಲ್ಲಿ ಗಲ್ಲಿಯಲ್ಲಿ ಗಲಿ ಗಲಿ ಹವಾ; 10 ಕೋಟಿ ಬಾರಿ ವೀಕ್ಷಣೆ ಕಂಡ ಕೆಜಿಎಫ್​ ಹಾಡು
ಕೆಜಿಎಫ್​ ಪೋಸ್ಟರ್​
  • News18
  • Last Updated: January 23, 2019, 4:17 PM IST
  • Share this:
‘ರಾಕಿಂಗ್ ಸ್ಟಾರ್​’ ಯಶ್​ ನಟನೆಯ​ ‘ಕೆಜಿಫ್’​ ಚಿತ್ರ ತೆರೆಕಂಡು ತಿಂಗಳಾಗಿದೆ. ಚಿತ್ರಮಂದಿರಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. ಆದರೆ, ಚಿತ್ರದ ಮೇಲಿನ ಕ್ರೇಜ್​ ಮಾತ್ರ ಇನ್ನೂ ಕಡಿಮೆ ಆದಂತೆ ಕಾಣುತ್ತಿಲ್ಲ. ಕಾರಣ, ‘ಕೆಜಿಎಫ್​’ ಬಗ್ಗೆ ನಿತ್ಯ ಒಂದಿಲ್ಲೊಂದು ವಿಚಾರ ಹರಿದಾಡುತ್ತಲೇ ಇದೆ. ಇವತ್ತಿನ ವಿಚಾರ ಏನೆಂದರೆ, ‘ಕೆಜಿಎಫ್​’ನ ‘ಗಲಿ ಗಲಿ…’ ಹಾಡು ಬರೋಬ್ಬರಿ 10 ಕೋಟಿ ಬಾರಿ ವೀಕ್ಷಣೆ ಕಂಡಿದೆ.

ಕ್ರಿಸ್​ಮಸ್​ ಪ್ರಯುಕ್ತ ‘ಕೆಜಿಎಫ್​’ ಡಿ.21ರಂದು ತೆರೆಕಂಡಿತ್ತು. ಭಾರೀ ನಿರೀಕ್ಷೆಗಳೊಂದಿಗೆ ತೆರೆಕಂಡಿದ್ದ ಚಿತ್ರ, ಆ ನಿರಿಕ್ಷೇಯನ್ನು ಹುಸಿ ಮಾಡಲಿಲ್ಲ. ಕೇವಲ ಕನ್ನಡದ ಮಂದಿ ಮಾತ್ರವಲ್ಲ ಪರಭಾಷಿಗರೂ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಯಿತು. ಈ ಚಿತ್ರದ ವಿಶೇಷ ಹಾಡು ಈಗ ಹೊಸ ದಾಖಲೆ ಬರೆದಿದೆ.

ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡು ಸದ್ದು ಮಾಡಿತ್ತು. ಆದರೆ, ಕೆಜಿಎಫ್​ ಹಿಂದಿ ಅವತರಣಿಕೆಯಲ್ಲಿ ಮಾತ್ರ 1989ರಲ್ಲಿ ಬಿಡುಗಡೆಯಾಗಿದ್ದ ‘ತ್ರಿದೇವ್​’ ಚಿತ್ರದ ‘ಗಲಿ ಗಲಿ ಮೇ ಫಿರ್ತಾ ಹೈ” ಹಾಡನ್ನು ಮರುಸೃಷ್ಟಿ ಮಾಡಲಾಗಿತ್ತು. ಮೌನಿ ರಾಯ್​ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಮೂಲಕ ಅವರು ಯುವಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದರು. ಸದ್ಯ ಈ ಹಾಡು ಇಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡಿರುವುದು ಕನ್ನಡಿಗರ ಪಾಲಿಗೆ ಖುಷಿಯ ವಿಚಾರ.

ಇದನ್ನೂ ಓದಿ: ರವಿಚಂದ್ರನ್​ 'ದಶರಥ'ನಿಗೆ 'ಚಾಲೆಂಜಿಂಗ್​ ಸ್ಟಾರ್​' ದರ್ಶನ್​ ಧ್ವನಿ!

‘ಕೆಜಿಎಫ್​’ ಚಿತ್ರದ ಜೊತೆಗೆ ತಮಿಳಿನ ‘ಮಾರಿ 2’ ಕೂಡ ತೆರೆಕಂಡಿತ್ತು. ಧನುಷ್​ ಈ ಚಿತ್ರದ ನಾಯಕ. ಈ ಸಿನಿಮಾದ ‘ರೌಡಿ ಬೇಬಿ’ ಹಾಡು ಬರೋಬ್ಬರಿ 10 ಕೋಟಿ ಬಾರಿ ವೀಕ್ಷಣೆ ಕಂಡಿತ್ತು. ಈಗ ಕನ್ನಡದವರು ನಿರ್ಮಾಣ ಮಾಡಿದ ಸಿನಿಮಾ ಕೂಡ ಇದೇ ಮಟ್ಟಕ್ಕೆ ಸದ್ದು ಮಾಡಿರುವುದು ಖುಷಿಯ ವಿಚಾರ.

'ಕೆಜಿಎಫ್​' ಚಿತ್ರದಲ್ಲಿ ಯಶ್​ ಹಾಗೂ ಶ್ರೀನಿಧಿ ಶೆಟ್ಟಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅಚ್ಯುತ್​ ಕುಮಾರ್​ ಸೇರಿ ಅನೇಕರು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನ ಇರುವ ಈ ಚಿತ್ರದಕ್ಕೆ ಹೊಂಬಾಳೆ ಫಿಲ್ಮ್ಸ್​​ ಅಡಿಯಲ್ಲಿ ವಿಜಯ್​ ಕಿರಗಂದೂರು ಬಂಡವಾಳ ಹೂಡಿದ್ದಾರೆ.

First published: January 23, 2019, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading