• Home
  • »
  • News
  • »
  • entertainment
  • »
  • ಬಾಲಿವುಡ್​ನಲ್ಲಿ ಮುಂದುವರಿದ 'ಕೆಜಿಎಫ್ ಪಾರುಪತ್ಯ'; ಹಿಂದಿ ಭಾಷೆಯಲ್ಲಿ 30 ಕೋಟಿ ರೂ. ಗಳಿಕೆ!

ಬಾಲಿವುಡ್​ನಲ್ಲಿ ಮುಂದುವರಿದ 'ಕೆಜಿಎಫ್ ಪಾರುಪತ್ಯ'; ಹಿಂದಿ ಭಾಷೆಯಲ್ಲಿ 30 ಕೋಟಿ ರೂ. ಗಳಿಕೆ!

ಕೆಜಿಎಫ್​ ಪೋಸ್ಟರ್​

ಕೆಜಿಎಫ್​ ಪೋಸ್ಟರ್​

ವಿಶ್ವಾದ್ಯಂತ ಈ ಚಿತ್ರ 160 ಕೋಟಿ ರೂ. ದಾಟಿದೆ ಎಂಬುದು ಬಾಲಿವುಡ್​ ತಜ್ಞರ ಅಭಿಪ್ರಾಯ. ಇನ್ನು, ಹಿಂದಿ ಅವತರಣಿಕೆಯಿಂದಲೇ ಚಿತ್ರಕ್ಕೆ 30 ಕೋಟಿ ರೂ. ಸಂದಾಯವಾಗಿರುವುದು ವಿಶೇಷ.

  • News18
  • Last Updated :
  • Share this:

ದಕ್ಷಿಣ ಭಾರತದ ಸಿನಿಮಾಗಳು ಹಿಂದಿಗೆ ಡಬ್​ ಆಗಿ ತೆರೆಕಂಡರೆ ಅವುಗಳಿಗೆ ಮೈಲೇಜ್​ ಸಿಗುವುದು ತೀರಾ ಅಪರೂಪ. ಆದರೆ, ಯಶ್​ ನಟನೆಯ ‘ಕೆಜಿಎಫ್​’ ಚಿತ್ರ ಮಾತ್ರ ಇದಕ್ಕೆ ಅಪವಾದ. ಕಾರಣ ಈ ಸಿನಿಮಾ ಹಿಂದಿ ಭಾಷೆಯಲ್ಲಿ ಬರೋಬ್ಬರಿ 30 ಕೋಟಿ ರೂ. ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.

ಕ್ರಿಸ್​ಮಸ್​ ಪ್ರಯುಕ್ತ ಡಿ.21ರಂದು ‘ಕೆಜಿಎಫ್​’ ಚಿತ್ರ ತೆರೆಕಂಡಿತ್ತು. ಚಿತ್ರ ಕನ್ನಡ ಸೇರಿ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಎಲ್ಲ ಭಾಷೆಗಳಲ್ಲಿ ಚಿತ್ರಕ್ಕೆ ಮೆಚ್ಚುಗೆ ಕೇಳಿ ಬಂದಿದೆ. ಹಾಗಾಗಿ ಸಿನಿಮಾ ಬಾಕ್ಸ್​ ಆಫೀಸ್​ ಕಲೆಕ್ಷನ್​ ಕೂಡ ಹೆಚ್ಚುತ್ತಿದೆ.ವಿಶ್ವಾದ್ಯಂತ ಈ ಚಿತ್ರ 160 ಕೋಟಿ ರೂ. ದಾಟಿದೆ ಎಂಬುದು ಬಾಲಿವುಡ್​ ತಜ್ಞರ ಅಭಿಪ್ರಾಯ. ಇನ್ನು, ಹಿಂದಿ ಅವತರಣಿಕೆಯಿಂದಲೇ ಚಿತ್ರಕ್ಕೆ 30 ಕೋಟಿ ರೂ. ಸಂದಾಯವಾಗಿರುವುದು ವಿಶೇಷ.ಶಾರುಖ್​ ಖಾನ್​ ನಟನೆಯ ‘ಝೀರೋ’ ಹಾಗೂ ‘ಕೆಜಿಎಫ್​’ ಚಿತ್ರ ಒಟ್ಟಿಗೆ ತೆರೆಕಂಡಿತ್ತು. ಆದರೆ, ‘ಝೀರೋ’ ಚಿತ್ರಕ್ಕೆ ಋಣಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಬಾಕ್ಸ್​​ ಆಫೀಸ್​  ಗಳಿಕೆಯಲ್ಲಿ ಇಳಿಕೆ ಕಾಣುತ್ತಿದೆ.  ಕಳೆದ ವಾರಾಂತ್ಯದ ಗಳಿಕೆಯಲ್ಲಿ ಶಾರುಖ್​ ಚಿತ್ರವನ್ನು ಯಶ್​ ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ಗೆದ್ದು ಬೀಗಿದ ‘ಸಿಂಬಾ’; ರಣವೀರ್ ಸಿಂಗ್​ ಅಭಿಮಾನಿಗಳಿಗೆ ಡಬಲ್ ಧಮಾಕ!

ಇನ್ನು, ‘ಕೆಜಿಎಫ್​’ ಚಿತ್ರ 200 ಕೋಟಿ ಗಳಿಕೆ ದಾಟಲಿದೆಯೇ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 160 ಕೋಟಿ ರೂ. ಗಡಿ ತಲುಪಿರುವುದರಿಂದ ಸಿನಿಮಾ ದ್ವಿಶತಕ ಬಾರಿಸಲಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಇದು ಘಟಿಸಿದರೆ ಸ್ಯಾಂಡಲ್​ವುಡ್​ನಲ್ಲಿ ‘ಕೆಜಿಎಫ್​’ ಹೊಸ ದಾಖಲೆ ಮಾಡಿದಂತಾಗುತ್ತದೆ.


First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು