• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • KGF Chapter 2 Teaser: ದಾಖಲೆ ಬರೆದ ಕೆಜಿಎಫ್​ 2 ಟೀಸರ್: 10 ಗಂಟೆಯೊಳಗೆ ಸಿಕ್ತು 1.59 ಕೋಟಿ ವೀಕ್ಷಣೆ ​..!

KGF Chapter 2 Teaser: ದಾಖಲೆ ಬರೆದ ಕೆಜಿಎಫ್​ 2 ಟೀಸರ್: 10 ಗಂಟೆಯೊಳಗೆ ಸಿಕ್ತು 1.59 ಕೋಟಿ ವೀಕ್ಷಣೆ ​..!

ಕೆಜಿಎಫ್​ ಚಾಪ್ಟರ್​ 2 ಸಿನಿಮಾದಲ್ಲಿ ಯಶ್​

ಕೆಜಿಎಫ್​ ಚಾಪ್ಟರ್​ 2 ಸಿನಿಮಾದಲ್ಲಿ ಯಶ್​

Happy Birthday Yash: ಹೊಂಬಾಳೆ ಯೂಟ್ಯೂಬ್​ ಚಾನಲ್​ನಲ್ಲಿ ಕೆಜಿಎಫ್​ ಚಾಪ್ಟರ್​ 2 ಟೀಸರ್​ ರಿಲೀಸ್ ಆಗುತ್ತಿದ್ದಂತೆಯೇ ಲಕ್ಷ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಟೀಸರ್ ರಿಲೀಸ್​ ಆದ 49 ನಿಮಿಷಕ್ಕೆ 5 ಲಕ್ಷ ಹಾಗೂ ಎರಡು ಗಂಟೆಯೊಳಗೆ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಮುಂದೆ ಓದಿ ...
  • Share this:

ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಸಿನಿಪ್ರಿಯರು ಕಾತರದಿಂದ ಕಾಯುತ್ತಿರುವ ಸಿನಿಮಾ ಕೆಜಿಎಫ್​ ಚಾಪ್ಟರ್​ 2. ಹೊಂಬಾಳೆ ಫಿಲಂಸ್​ ಬ್ಯಾನರ್ ಅಡಿ ವಿಜಯ್​ ಕಿರಗಂದೂರು ನಿರ್ಮಾಣದ  ಕೆಜಿಎಫ್​ ಚಾಪ್ಟರ್​ 2 ಚಿತ್ರ ಅಪ್ಡೇಟ್​ಗಾಗಿ  ಅಭಿಮಾನಿಗಳು ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಯಶ್ ಹುಟ್ಟುಹಬ್ಬದಂದು ಅಂದರೆ ಇಂದು ಬೆಳಿಗ್ಗೆ 10:18ಕ್ಕೆ ಸಿನಿಮಾದ ಟೀಸರ್​ ರಿಲೀಸ್​ ಮಾಡುವುದಾಗಿ ಪ್ರಕಟಿಸಿತ್ತು. ಅದಕ್ಕಾಗಿ ಸಕಲ ರೀತಿಯಲ್ಲೂ ಸಜ್ಜಾಗಿದ್ದ ತಂಡಕ್ಕೆ ನಿನ್ನೆ ಸಂಜೆ ಶಾಕ್​ ಆಗಿತ್ತು. ಹೌದು, ಒಂದು ದಿನ ಮುಂಛಿತವಾಗಿಯೇ ಟೀಸರ್​ ಅನ್ನು ಲೀಕ್​ ಮಾಡಲಾಗಿತ್ತು. ಇದರಿಂದಾಗಿ ಚಿತ್ರತಂಡ ನಿನ್ನೆ ರಾತ್ರಿ 9:29ಕ್ಕೆ ಕೆಜಿಎಫ್​ ಚಾಪ್ಟರ್ 2 ಟೀಸರ್​ ಅನ್ನು ಬಿಡುಗಡೆ ಮಾಡಿತು. ಒಂದು ದಿನ ಮುಂಚಿತವಾಗಿ ಯಶ್ ಅವರ ಟೀಸರ್ ನೋಡಲು ಸಿಕ್ಕ ಖುಷಿ ಒಂದು ಕಡೆಯಾದರೆ, ಟೀಸರ್ ಲೀಕ್​ ಆದ ಬೇಸರ ಮತ್ತೊಂದು ಕಡೆ ಅಭಿಮಾನಿಗಳಲ್ಲಿತ್ತು. 


ಹೊಂಬಾಳೆ ಯೂಟ್ಯೂಬ್​ ಚಾನಲ್​ನಲ್ಲಿ ಕೆಜಿಎಫ್​ ಚಾಪ್ಟರ್​ 2 ಟೀಸರ್​ ರಿಲೀಸ್ ಆಗುತ್ತಿದ್ದಂತೆಯೇ ಲಕ್ಷ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಟೀಸರ್ ರಿಲೀಸ್​ ಆದ 49 ನಿಮಿಷಕ್ಕೆ 50 ಲಕ್ಷ ಹಾಗೂ ಎರಡು ಗಂಟೆಯೊಳಗೆ 1 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.1 hour and 52 minutes 


ಇನ್ನು, ಟೀಸರ್ ರಿಲೀಸ್ ಆಗಿ 10 ಗಂಟೆ ಕಳೆಯುವಷ್ಟರಲ್ಲಿ 1 ಕೋಟಿ 59 ಲಕ್ಷ ವೀಕ್ಷಣೆ ಸಿಕ್ಕಿದೆ. ಟೀಸರ್​ ಲೀಕ್​ ಆದ ನಂತರವೂ ಯೂಟ್ಯೂಬ್​ನಲ್ಲಿ ಕೆಜಿಎಫ್ 2 ಟೀಸರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸದ್ಯದ ಮಾಹಿತಿ ಪ್ರಕಾರ 24 ಗಂಟೆಯೊಳಗೆ ಅತಿ ಹೆಚ್ಚು ವೀಕ್ಷಣೆ ಪಡೆದ ದಕ್ಷಿಣ ಭಾರತದ ಸಿನಿಮಾ ಟೀಸರ್​ಗಳ ಪಟ್ಟಿಯಲ್ಲಿ ಕೆಜಿಎಫ್​ ಚಾಪ್ಟರ್​ 2 ಸಹ ಸ್ಥಾನ ಪಡೆದುಕೊಂಡಿದೆ. ಮಾಸ್ಟರ್ ಹಾಗೂ ಸರ್ಕಾರ್​ ಸಿನಿಮಾಗ ಟೀಸರ್ ಸಹ 10 ಗಂಟೆಯೊಳಗೆ ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡ ಚಿತ್ರಗಳಾಗಿವೆ. ಇನ್ನು ಕಡಿಮೆ ಸಮಯದಲ್ಲಿ ಅಂದರೆ 10 ಗಂಟೆ 30 ನಿಮಿಷದ ಒಳಗೆ  20 ಲಕ್ಷ ಜನ ಲೈಕ್ಸ್​ ಮಾಡಿರುವ ಮೊದಲ ಟೀಸರ್ ಇದಾಗಿದೆಯಮತೆ. ಹೀಗೆಂದು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಟ್ವೀಟ್​ ಮಾಡಿದ್ದಾರೆ.ಇನ್ನು ಟೀಸರ್​ನಲ್ಲಿ ವಿಲನ್​ ಅಧೀರನ ಮುಖ ಪಾತ್ರ ತೋರಿಸಿಲ್ಲ. ಹೌದು, ಸಂಜಯ್​ ದತ್​ ಅವರ ಬ್ಯಾಕ್​ ಪೋಸ್​ ಮಾತ್ರ ತೋರಿಸಲಾಗಿದೆ. ರವೀನಾ ಟಂಡನ್​ ಎಂಟ್ರಿ ಸಖತ್​ ಖಡಕ್​ ಆಗಿದೆ. ಎಲ್ಲ ಭಾಷೆಯ ಪ್ರೇಕ್ಷಕರಿಗೂ ಒಂದೇ ಟೀಸರ್​ ರಿಲೀಸ್ ಮಾಡುವ ಉದ್ದೇಶದಿಂದ ಟೀಸರ್​ಗೆ ಹಿನ್ನಲೆ ಧ್ವನಿ ಇಂಗ್ಲಿಷ್​ನಲ್ಲಿ ನೀಡಲಾಗಿದೆಯಂತೆ.
ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಲಿರುವ ಸಿನಿಮಾದ ರಿಲೀಸ್​ ದಿನಾಂಕದ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ ಚಿತ್ರತಂಡ. ಇನ್ನು ನಿನ್ನೆಯಷ್ಟೆ ಟೀಸರ್​ ರಿಲೀಸ್ ಆಗಿರುವ ಹಿನ್ನಲೆಯಲ್ಲಿ ಚಿತ್ರತಂಡ ಯಶ್​ ಹುಟ್ಟುಹಬ್ಬದಂದು ಮತ್ತೇನಾದರೂ ಸರ್ಪ್ರೈಸ್​ ನೀಡಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಟೀಸರ್​ ರಿಲೀಸ್​ಗೂ ಮುನ್ನ ನಿತ್ಯ ಸಿನಿಮಾ ಹಾಗೂ ಚಿತ್ರದಲ್ಲಿನ ಪಾತ್ರಗಳ ಕುರಿತಾಗಿ ಆಸಕ್ತಿಕರ ಮಾಹಿತಿಯನ್ನು ಕೆಜಿಎಫ್​ ಟೈಮ್ಸ್​ ಮೂಲಕ ಹಂಚಿಕೊಳ್ಳುತ್ತಿದ್ದರು ಪ್ರಶಾಂತ್​ ನೀಲ್. ಒಮ್ಮೆ ಅಧೀರ, ಒಮ್ಮೆ ರಾಕಿ ಬಾಯ್​ ಹೀಗೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವ ಮಾಹಿತಿ ಹಾಗೂ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿದ್ದರು ನಿರ್ದೇಶಕ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು