Rashmika Mandanna: ರಶ್ಮಿಕಾ ಮಂದಣ್ಣ ಪರ ನಿಂತ ಕೆಜಿಎಫ್ ತಂಡದವನ ವಿರುದ್ಧ ಆಕ್ರೋಶವೋ ಆಕ್ರೋಶ

‘777 ಚಾರ್ಲಿ’ ಸಿನಿಮಾದ ನಿರ್ದೇಶಕ ಕಿರಣ್​ರಾಜ್​ ಕೆ ರಶ್ಮಿಕಾರನ್ನು ಬೆಂಬಲಿಸಿ ಟ್ವೀಟ್​ ಮಾಡಿದ್ದರು. ಈ ಟ್ವೀಟ್​ಅನ್ನು ರಿಟ್ವೀಟ್​ ಮಾಡಿದ್ದ ಕಾರ್ತಿಕ್​ ಗೌಡ, ಈ ಮಾತನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ, ಅನೇಕರು ಕಾರ್ತಿಕ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Rajesh Duggumane | news18-kannada
Updated:November 8, 2019, 3:03 PM IST
Rashmika Mandanna: ರಶ್ಮಿಕಾ ಮಂದಣ್ಣ ಪರ ನಿಂತ ಕೆಜಿಎಫ್ ತಂಡದವನ ವಿರುದ್ಧ ಆಕ್ರೋಶವೋ ಆಕ್ರೋಶ
ರಶ್ಮಿಕಾ-ಯಶ್
Rajesh Duggumane | news18-kannada
Updated: November 8, 2019, 3:03 PM IST
ನಟಿ ರಶ್ಮಿಕಾ ಮಂದಣ್ಣ ಟ್ರೋಲಿಗರ ವಿರುದ್ಧ ಸಿಡಿದೆದ್ದಿದ್ದಾರೆ. ಅವಾಚ್ಯ ಶಬ್ದಗಳ ಬಳಕೆ ಸಲ್ಲ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ. ಸ್ಯಾಂಡಲ್​ವುಡ್​ನ ಕೆಲ ಕಲಾವಿದರು ರಶ್ಮಿಕಾ ಪರ ನಿಂತಿದ್ದಾರೆ. ಇದಕ್ಕೆ ‘ಕೆಜಿಎಫ್’​ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಕೂಡ ಹೊರತಾಗಿಲ್ಲ. ಅಚ್ಚರಿ ಎಂದರೆ, ರಶ್ಮಿಕಾ ಪರ ನಿಂತ ಕಾರ್ತಿಕ್​ ವಿರುದ್ಧ ಆಕ್ರೋಶಗಳ ಸುರಿ ಮಳೆ ಹರಿದು ಬಂದಿದೆ.

‘777 ಚಾರ್ಲಿ’ ಸಿನಿಮಾದ ನಿರ್ದೇಶಕ ಕಿರಣ್​ರಾಜ್​ ಕೆ ರಶ್ಮಿಕಾರನ್ನು ಬೆಂಬಲಿಸಿ ಟ್ವೀಟ್​ ಮಾಡಿದ್ದರು. “ಕೆಲವು ಟ್ರೋಲ್ ಪೇಜ್​​ಗಳು ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂಬುದು ಈ ಪೋಸ್ಟ್ ನೋಡಿದ್ರೆ ಗೊತ್ತಾಗುತ್ತೆ. ನಿಮ್ಮ ಅಭಿಪ್ರಾಯಗಳು ಏನೇ ಇದ್ರೂ ಅವರ ಸಿನಿಮಾಗಳಿಗೆ ಸೀಮಿತವಾಗಿರಲಿ. ಅದನ್ನು ಬಿಟ್ಟು ಅವರ ವೈಯುಕ್ತಿಕ ಜೀವನವನ್ನು ನಿಂದಿಸುವ, ಅಸಹ್ಯವಾಗಿ ಟ್ರೋಲ್ ಮಾಡೋ ಹಕ್ಕು ಯಾರಿಗು ಇಲ್ಲ,” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಎರಡನೇ ಮಗು ಜನಿಸಿದ ಬೆನ್ನಲ್ಲೇ ಯಶ್- ರಾಧಿಕಾ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ!

ಈ ಟ್ವೀಟ್​ಅನ್ನು ರಿಟ್ವೀಟ್​ ಮಾಡಿದ್ದ ಕಾರ್ತಿಕ್​ ಗೌಡ, ಈ ಮಾತನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ, ಅನೇಕರು ಕಾರ್ತಿಕ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳು ಸಿಟ್ಟಾಗಲು ಕಾರ್ತಿಕ್​ ಅವರು ರಶ್ಮಿಕಾರನ್ನು ಬೆಂಬಲಿಸಿದ್ದು ಕಾರಣವಲ್ಲ. ಬದಲಿಗೆ ‘ಕೆಜಿಎಫ್​ 2’ ಬಗ್ಗೆ ಯಾವುದೇ ಅಪ್ಡೇಟ್ಸ್​​ ನೀಡುತ್ತಿಲ್ಲ ಎನ್ನುವುದೇ ಇದಕ್ಕೆ ಕಾರಣ.

Loading...



“ಅವಳ ವಿಷಯ ಬಿಟ್ಟಾಕು ಗುರು, ಅವಳ ಬಗ್ಗೆ ಎಲ್ಲರಿಗೂ ಗೊತ್ತು. ಅವಳ ಬಗ್ಗೆ ತಲೆಕೆಡಿಸಿಕೊಳ್ಳೋದು ಬಿಟ್ಟು ಕೆಜಿಎಫ್​ ಬಗ್ಗೆ ಅಪ್ಡೇಟ್​ ಕೊಡು,” ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, “ಗುರು ಉಳಿದ ವಿಷಯ ಎಲ್ಲದೂ ಹೇಳ್ತೀಯಾ, ಕೆಜಿಎಫ್​ 2 ಫಸ್ಟ್​ ಲುಕ್​ ಯಾವಾಗ ಅಂತ ಹೇಳು,” ಎಂದು ಕೆಲವರು ಬರೆದುಕೊಂಡಿದ್ದಾರೆ.





First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...