ಕೆಜಿಎಫ್ 2 ಸಿನಿಮಾ ನಂತ್ರ ರಾಕಿಂಗ್ ಸ್ಟಾರ್ ಯಶ್ ಹವಾ ನಮ್ಮ ನುಡಿ ಮತ್ತು ಗಡಿ ಎರಡನ್ನು ದಾಟಿ ನಿಂತಿದೆ. ಈಗ ಯಶ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯ ಕಿಂಗ್ ಆಗಿ ದರ್ಬಾರ್ ಮಾಡ್ತಿದ್ದಾರೆ. ಕನ್ನಡದ (Kannada) ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಸಿನಿಮಾ (Cinema) ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗ (Indian Film Industry) ಥಂಡಾ ಹೊಡೆದಿದೆ. ಅದರಲ್ಲೂ ಬಾಲಿವುಡ್ ದಾಖಲೆಗಳನ್ನು (Bollywood Records) ‘ರಾಕಿ ಭಾಯ್’ ಉಡೀಸ್ ಮಾಡುತ್ತಿದ್ದಾನೆ. ಸಲಾಂ ರಾಕಿ ಭಾಯ್ (Salaam Rocky Bhai).. ಇದು ಕೇವಲ ಒಂದಿಬ್ಬರು ಹೇಳುತ್ತಿರುವ ಮಾತಲ್ಲ. ಇಡೀ ವಿಶ್ವವೇ ರಾಕಿ ಭಾಯ್ ಆರ್ಭಟ ಕಂಡು ಈ ಮಾತು ಹೇಳುತ್ತಿದ್ದಾರೆ. ಇಡೀ ವಿಶ್ವದಲ್ಲೇ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹೆಸರು ಫೇಮಸ್ ಆಗಿದೆ.
ದಂಗಲ್ ದಾಖಲೆ ಊಡೀಸ್ ಮಾಡಿದ ಕೆಜಿಎಫ್ 2!
ಪ್ರಶಾಂತ್ ನೀಲ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ 'ಕೆಜಿಎಫ್–2' ಸಿನಿಮಾ ಬಾಕ್ಸ್ಆಫೀಸ್ ಲೆಕ್ಕಾಚಾರದಲ್ಲಿ ಮತ್ತೊಂದು ದಾಖಲೆ ಬರೆದಿದೆ. ಈ ಸಿನಿಮಾದ ಹಿಂದಿ ಅವತರಣಿಕೆ ಬರೋಬ್ಬರಿ ₹391.65 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಇದರೊಂದಿಗೆ ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೊಂದೆ ದಾಖಲೆಯನ್ನು ಉಡೀಸ್ ಮಾಡುತ್ತಾ ಬಂದ 'ಕೆಜಿಎಫ್ 2', ಇಂದು ಅತಿ ಹೆಚ್ಚು ಗಳಿಕೆ ಕಂಡ ಭಾರತದ ಎರಡನೇ ಚಿತ್ರ ಎನಿಸಿಕೊಂಡಿದೆ.
ಆಮಿರ್ ಖಾನ್ ಆತಂಕ ಕೊನೆಗೂ ನಿಜವಾಯ್ತು!
ಈ ಮೊದಲು ಕೆಜಿಎಫ್ 2 ಸಿನಿಮಾದ ಎದುರು ಆಮಿರ್ ಖಾನ್ ತೊಡೆತಟ್ಟಿದ್ದರು. ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾವನ್ನು ಕೆಜಿಎಫ್ 2 ರಿಲೀಸ್ ಆದ ದಿನವೇ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಇದಾದ ಕೆಲ ದಿನಗಳ ಬಳಿಕ ಈ ಘೋಷಣೆಯನ್ನು ಚಿತ್ರತಂಡ ಹಿಂಪಡೆದುಕೊಂಡಿತ್ತು. ಯಾಕೆಂದರೆ ಕೆಜಿಎಫ್ 1 ಎದುರು ಬಂದಿದ್ದ ಶಾರುಖ್ ಖಾನ್ ಸಿನಿಮಾ ಜೀರೋ ಮಕಾಡೆ ಮಲಗಿತ್ತು. ಈ ಭಯದಿಂದ ಆಮಿರ್ ಖಾನ್ ಹಿಂದೆ ಸರಿದಿದ್ದರು. ಆದರೂ ಅವರ ಆತಂಕ ನಿಜವಾಗಿದೆ. ದಂಗಲ್ ದಾಖಲೆಯನ್ನೇ ರಾಕಿ ಭಾಯ್ ಊಡೀಸ್ ಮಾಡಿದ್ದಾರೆ.
ಇದನ್ನೂ ಓದಿ: ಮುದ್ದಾಗಿ ಸಲಾಂ ರಾಕಿ ಭಾಯ್ ಎಂದ ಐರಾ, ಮಗಳ ವಿಡಿಯೋ ಕಂಡು ಯಶ್ ಫುಲ್ ಖುಷ್!
ಹಿಂದಿಯಲ್ಲಿ ₹391.65 ಕೋಟಿ ಗಳಿಸಿದ ಕೆಜಿಎಫ್ 2!
ಈ ಕುರಿತು ಸಿನಿಮಾ ಉದ್ಯಮ ವಿಶ್ಲೇಷಕ ತಾರಕ್ ಆದರ್ಶ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ಹಣ ಗಳಿಕೆಯಲ್ಲಿ 'ದಂಗಲ್’ ಸಿನಿಮಾವನ್ನು ಕೆಜಿಎಫ್–2 ಹಿಂದಿಕ್ಕಿದೆ. ಇದೀಗ ಅತಿಹೆಚ್ಚು ಗಳಿಕೆ ಕಂಡ ಹಿಂದಿಯ ಎರಡನೇ ಸಿನಿಮಾ ಎನಿಸಿದೆ. ಒಟ್ಟು ₹391.65 ಕೋಟಿ ಗಳಿಸಿದೆ' ಎಂದು ಅವರು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಜಿಂದಾ ಹೈ' ₹339.16 ಕೋಟಿ, ಅಮೀರ್ ಖಾನ್ ನಟನೆಯ 'ಪಿಕೆ' ₹ 340.8, ರಣಬೀರ್ ಕಪೂರ್ ಬಣ್ಣ ಹಚ್ಚಿದ್ದ 'ಸಂಜು' ₹ 342.53 ಕೋಟಿ ಗಳಿಕೆ ಮಾಡಿದ್ದವು.
ಇದನ್ನೂ ಓದಿ: ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ಯಶ್! 'ಗುಟ್ಕಾ ಗ್ಯಾಂಗ್' ಸೇರ್ಲಿಲ್ಲ ರಾಕಿ, ನೀವೇ ನಿಜವಾದ ಸುಲ್ತಾನ
ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ಚಿತ್ರ ₹ 510.99 ಗಳಿಸಿದೆ ಎನ್ನಲಾಗಿದೆ. ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ₹ 387.38 ಕೋಟಿ ಸಂಪಾದಿಸಿ ನಂತರದ ಸ್ಥಾನದಲ್ಲಿತ್ತು. ಇದೀಗ ಈ ದಾಖಲೆಯನ್ನು ಯಶ್ ಬ್ರೇಕ್ ಮಾಡಿದ್ದಾರೆ.100 ದಿನಗಳ ಕಾಲ ಕೆಜಿಎಫ್ 2 ಹೀಗೆ ತನ್ನ ಓಟ ಮುಂದುವರೆಸಿದರೆ, ಬಾಹುಬಲಿ 2 ದಾಖಲೆಯನ್ನು ಮೀರಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ