HOME » NEWS » Entertainment » YASH STARRER KGF CHAPTER 2 MOVIE TEASER GOT MORE THAN 100 MILLION VIEWS IN YOUTUBE AE

ಹೊಸ ದಾಖಲೆ ಮಾಡಿದ KGF Chapter 2 Teaser: 10 ಕೋಟಿ ವೀಕ್ಷಣೆ ಕಂಡ ಪವರ್​ ಫುಲ್​ ಟೀಸರ್​..!

ಕೆಜಿಎಫ್ ಚಾಪ್ಟರ್-2 ಟೀಸರ್​ 100 ಮಿಲಿಯನ್​ ಅಂದರೆ 10 ಕೋಟಿಗೂ ಅಧಿಕ ವೀಕ್ಷಣೆ ಪಡೆಯುವ ಮೂಲಕ ಸಿನಿಮಾದ ಇತಿಹಾಸದಲ್ಲೇ ಹೊಸ ​ದಾಖಲೆ ಮಾಡಿದೆ.

Anitha E | news18-kannada
Updated:January 10, 2021, 8:22 AM IST
ಹೊಸ ದಾಖಲೆ ಮಾಡಿದ  KGF Chapter 2 Teaser: 10 ಕೋಟಿ ವೀಕ್ಷಣೆ ಕಂಡ ಪವರ್​ ಫುಲ್​ ಟೀಸರ್​..!
ಕೆಜಿಎಫ್​ 2 ಟೀಸರ್​ಗೆ ಸಿಕ್ತು 10 ಕೋಟಿ ವೀಕ್ಷಣೆ
  • Share this:
ಕೆಜಿಎಫ್​ ಚಾಪ್ಟರ್​ 1 ಸಿನಿಮಾ ರಿಲೀಸ್​ ಆದ ನಂತರ ಸಾಕಷ್ಟು ಹೊಸ ದಾಖಲೆಗಳನ್ನು ಮಾಡಿತ್ತು. ಆದರೆ ಕೆಜಿಎಫ್​ ಚಾಪ್ಟರ್​ 2 ರಿಲೀಸ್​ಗೆ ಮುನ್ನವೇ ಹಾಲಿವುಡ್​ ಸಿನಿಮಾ ಅವೆಂಜರ್ಸ್​ ಎಂಡ್​ ಗೇಮ್​ ಮಾಡಿದ್ದ ದಾಖಲೆಯನ್ನೇ ಪುಡಿ ಪುಡಿ ಮಾಡಿದೆ. ಹೌದು,  ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್​ ಚಾಪ್ಟರ್​ 2 ಕಳೆದ ಕೆಲವು ದಿನಗಳಿಂದ ಟ್ರೆಂಡಿಂಗ್​ನಲ್ಲಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ KGF Chapter 2 ನದ್ದೇ ಸುದ್ದಿ. ಯಶ್ ಹುಟ್ಟುಹಬ್ಬದಂದು KGF Chapter 2 Teaser ರಿಲೀಸ್​ ಮಾಡುವ ಪ್ಲಾನ್​ ಮಾಡಿಕೊಂಡಿದ್ದ ಚಿತ್ರತಂಡಕ್ಕೆ ಒಂದು ದಿನ ಮುಂಚಿತವಾಗಿಯೇ ಆಘಾತ ಕಾದಿತ್ತು. ಟೀಸರ್ ರಿಲೀಸ್​ಗೂ ಮುನ್ನವೇ ಯಾರೋ ಅದನ್ನು ಹ್ಯಾಕ್​ ಮಾಡಿ ಲೀಕ್ ಮಾಡಿದ್ದರು. ಇದೇ ಕಾರಣದಿಂದ ರಾತ್ರಿ ಅಂದರೆ ಜ.7ರಂದು ರಾತ್ರಿ 9.29ಕ್ಕೆ ಚಿತ್ರತಂಡ ಟೀಸರ್ ರಿಲೀಸ್​ ಮಾಡಿದ್ದರು. ಇದರಿಂದ ಚಿತ್ರತಂಡ ಹಾಗೂ ನಟ ಯಶ್ ಬೇಸರಗೊಂಡಿದ್ದರಾದರೂ, ಅವರಿಗೆ ಅಂದು ರಾತ್ರಿಯೇ ಖುಷಿಯ ಸಂಗತಿಯೊಂದು ಕಾದಿತ್ತು. ಅದೇ ಟೀಸರ್​ ಮಾಡಿದ ದಾಖಲೆ. ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಟೀಕ್​ ಮಾಡಲಾಗಿತ್ತಾದರೂ, ಚಿತ್ರತಂಡ ರಿಲೀಸ್​ ಮಾಡಿರುವ ಟೀಸರ್​ಗೆ ಯೂಟ್ಯೂಬ್​ನಲ್ಲಿ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜೊತೆಗೆ ಈ ಟೀಸರ್​ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ.

ಭಾರತದ ಚಿತ್ರರಂಗದಲ್ಲಿ ಕೆಜಿಎಫ್​2 ಟೀಸರ್​ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಗೊಂಡ 24 ಗಂಟೆಗಳಲ್ಲಿ ಈ ಟೀಸರ್​ 78 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಪಡೆದ ಸಿನಿಮಾ ಟೀಸರ್​ ಇದಾಗಿದೆ. ಜೊತೆಗೆ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದ ಟೀಸರ್​ ಎಂಬ ಖ್ಯಾತಿಗೂ ಪಾತ್ರವಾಗಿದೆ. ಈಗ ಈ ಟೀಸರ್​ 100 ಮಿಲಿಯನ್​ ಅಂದರೆ 10 ಕೋಟಿಗೂ ಅಧಿಕ ವೀಕ್ಷಣೆ ಪಡೆಯುವ ಮೂಲಕ ಸಿನಿಮಾದ ಇತಿಹಾಸದಲ್ಲೇ ಹೊಸ ​ದಾಖಲೆ ಮಾಡಿದೆ.ಟೀಸರ್​ ನೂರು ಮಲಿಯನ್​ ಅಂದರೆ 10 ಕೋಟಿ ವೀಕ್ಷಣೆ ಕಾಣುತ್ತಿದ್ದಂತೆಯೇ ಕೆಜಿಎಫ್​ ಚಿತ್ರತಂಡ ಹಾಗೂ ಹೊಂಬಾಳೆ ಫಿಲಂಸ್​ ಸಾಮಾಜಿಕ ಜಾಲತಾಣದ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವುದರ ಜೊತೆಗೆ ಸಂತಸ ವ್ಯಕ್ತಪಡಿಸಿದೆ.

I am grateful to each & every one of you 🙏

ಇನ್ನು ಟೀಸರ್​ಗೆ ಸಿಗುತ್ತಿರುವ ವೀಕ್ಷಣೆ ಹಾಗೂ ಲೈಕ್ಸ್​ ಹೆಚ್ಚುತ್ತಲೇ ಇದೆ. ಸದ್ಯಕ್ಕೆ 10 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದ್ದು, 59 ಲಕ್ಷ ಲೈಕ್ಸ್​ ಸಿಕ್ಕಿದೆ. ಇನ್ನು ಟೀಸರ್​ನಲ್ಲಿರುವ ಡೈಲಾಗ್​ ಸಹ ಸಖತ್​ ವೈರಲ್​ ಆಗುತ್ತಿದೆ. ಪವರ್​ ಫುಲ್​ ಪೀಪಲ್​ ಮೇಕ್ಸ್ ಪ್ಲೇಸ್​ ಪವರ್​ ಫುಲ್​ ಅನ್ನೋ ಡೈಲಾಗ್​ಗೆ ಪ್ರೇಕ್ಷಕ ಫಿದಾ ಆಗಿದ್ದಾನೆ.

ಆದರೆ, ಇಡೀ ಟೀಸರ್​ಗೆ ಇಂಗ್ಲಿಷ್​ನಲ್ಲಿ ಹಿನ್ನಲೆ ಧ್ವನಿ ನೀಡಲಾಗಿದೆ. ಪ್ರಕಾಶ್​ ರೈ ಇಂಗ್ಲಿಷನ್​ನಲ್ಲಿ ಕಂಠದಾನ ಮಾಡಿದ್ದು, ಈ ಸಲ ಪ್ರೇಕ್ಷಕರು ಅನಂತ್​ ನಾಗ್​ ಅವರ ದನಿಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಕೆಜಿಎಫ್​2 ಟೀಸರ್​ ನೋಡಿದ ಸ್ಯಾಂಡಲ್​ವುಡ್​ ಹಾಗೂ ಪರಭಾಷೆಯ ಸೆಲೆಬ್ರಿಟಿಗಳೂ ವಾಹ್​ ಎನ್ನುತ್ತಿದ್ದಾರೆ. ಸಖತ್ ಪವರ್​ಫುಲ್​ ಟೀಸರ್​ ಎಂದು ಕೊಂಡಾಡುತ್ತಿದ್ದಾರೆ.

ಧೂಳೆಬ್ಬಿಸುತ್ತಿರುವ ಕೆಜಿಎಫ್ ಚಾಪ್ಟರ್-2 ಟೀಸರ್ ರಾಕಿ ಭಾಯ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇನ್ನು ಸಿನಿಮಾ ಟ್ರೇಲರ್​ ಹಾಗೂ ರಿಲೀಸ್​ ದಿನಾಂಕದ ಪ್ರಕಟಣೆಗಾಗಿ ಕಾರತದಿಂದ ಕಾಯುವಂತೆ ಮಾಡಿದೆ ಈ ಟೀಸರ್​ ಎಂದರೆ ತಪ್ಪಾಗದು.
Published by: Anitha E
First published: January 10, 2021, 8:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories