KGF Chapter 2: ಯಶ್ ನಟನೆಯ ಹಳೆಯ ಸಿನಿಮಾ ನಿರ್ಮಾಪಕರಿಗೆ ಕೆಜಿಎಫ್​ನಿಂದ ಒಲಿಯಿತು ಅದೃಷ್ಟ!

ಕನ್ನಡದಲ್ಲಿ ಸಿನಿಮಾ ರಿಲೀಸ್​ ಆದ ಬಳಿಕ ಈ ಸಿನಿಮಾಗಳು ಹಿಂದಿಗೆ ಡಬ್​ ಆಗಿ ಯೂಟ್ಯೂಬ್​ನಲ್ಲಿ ತೆರೆ ಕಾಣುತ್ತವೆ. ಯಶ್​ ನಟನೆಯ ಅನೇಕ ಕನ್ನಡ ಸಿನಿಮಾಗಳು ಇದೇ ರೀತಿ ರಿಲೀಸ್​ ಆಗಿವೆ.

Rajesh Duggumane | news18-kannada
Updated:October 11, 2019, 1:25 PM IST
KGF Chapter 2: ಯಶ್ ನಟನೆಯ ಹಳೆಯ ಸಿನಿಮಾ ನಿರ್ಮಾಪಕರಿಗೆ ಕೆಜಿಎಫ್​ನಿಂದ ಒಲಿಯಿತು ಅದೃಷ್ಟ!
ನಟ ಯಶ್
  • Share this:
ಕೆಜಿಎಫ್​ 2 ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಸಿನಿಮಾದ ಪ್ರಮುಖ ಖಳ ಸಂಜಯ್​ ದತ್​ ಚಿತ್ರದ ಸೆಟ್​​ ಸೇರಿಕೊಂಡಿದ್ದಾರೆ. ಈ ಮಧ್ಯೆ ‘ಕೆಜಿಎಫ್​’ ಸಿನಿಮಾದಿಂದ ಒಂದಷ್ಟು ನಿರ್ಮಾಪಕರ ಬಾಳು ಹಸನಾಗಿದೆ! ಅದು ಹೇಗೆ ಅಂತಿರಾ? ಅದಕ್ಕೆ ಈ ಸ್ಟೋರಿ ಓದಿ.

‘ಕೆಜಿಎಫ್​’ ಸಿನಿಮಾ ಯಶ್​ ವೃತ್ತಿ ಬದುಕಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಹೊಸ ಮೈಲೇಜ್​ ತಂದುಕೊಟ್ಟ ಸಿನಿಮಾ. ಈ ಚಿತ್ರ ಕೇವಲ ಕನ್ನಡ ಮಾತ್ರವಲ್ಲ ಬಾಲಿವುಡ್​ನಲ್ಲೂ ಹೆಸರು ಮಾಡಿತ್ತು. ಯಶ್​ ಕೆಲವೇ ದಿನಗಳಲ್ಲಿ ಬಾಲಿವುಡ್​ಗೂ ಪರಿಚಯವಾಗಿ ಬಿಟ್ಟರು. ಯಶ್​ ಸ್ಟೈಲ್​, ಅವರ ಗಡ್ಡವನ್ನು ನೋಡಿ ಬಾಲಿವುಡ್​ನ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಹಿಂದಿಗೆ ಡಬ್​ ಆಗಿ ತೆರೆಕಂಡ ಯಶ್​ ಹಳೆಯ ಸಿನಿಮಾಗಳು ಈಗ ಮೈಲೇಜ್​ ಪಡೆದುಕೊಳ್ಳುತ್ತಿವೆ.

ಕನ್ನಡದಲ್ಲಿ ಸಿನಿಮಾ ರಿಲೀಸ್​ ಆದ ಬಳಿಕ ಈ ಸಿನಿಮಾಗಳು ಹಿಂದಿಗೆ ಡಬ್​ ಆಗಿ ಯೂಟ್ಯೂಬ್​ನಲ್ಲಿ ತೆರೆ ಕಾಣುತ್ತವೆ. ಯಶ್​ ನಟನೆಯ ಅನೇಕ ಕನ್ನಡ ಸಿನಿಮಾಗಳು ಇದೇ ರೀತಿ ರಿಲೀಸ್​ ಆಗಿವೆ. ಯಶ್​ ನಟನೆಯ ‘ಗೂಗ್ಲಿ’, ‘ಮಾಸ್ಟರ್​ ಪೀಸ್​ ’ ಸಿನಿಮಾಗಳು 7-8 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಇದಕ್ಕೆ ಕಾರಣ ‘ಕೆಜಿಎಫ್​’.

ಹೌದು, ಕೆಜಿಎಫ್​ ಸಿನಿಮಾ ಹಿಟ್​ ಆದ ನಂತರದಲ್ಲಿ ಬೇರೆ ಭಾಷೆಯ ಜನರು ಯಶ್​ ಹಳೆಯ ಸಿನಿಮಾಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಇದು ಡಬ್ಬಿಂಗ್ ಹಕ್ಕನ್ನು ಪಡೆದಿರುವವರಿಗೆ ಲಾಭದಾಯಕವಾಗಿ ಪರಿಣಮಿಸಿದೆ. ಇನ್ನು, ಯಶ್​ ಹಳೆಯ ಸಿನಿಮಾಗಳಿಗೆ ಡಬ್ಬಿಂಗ್​ಗೆ ಬೇಡಿಕೆ ಬರುತ್ತಿದೆ. ಯಶ್​ ಅಭಿನಯದ ‘ಮಾಸ್ಟರ್​ ಪೀಸ್​’ ಸಿನಿಮಾ ಈಗ ತಮಿಳಿಗೆ ಡಬ್​ ಆಗುತ್ತಿದೆ. ಇದರಿಂದ ಯಶ್​ ಸಿನಿಮಾದ ನಿರ್ಮಾಪಕರು ಸಖತ್​ ಖುಷಿಯಾಗಿದ್ದಾರೆ.

First published:October 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading