ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಅಂದ್ರೆ ಅದು ಸ್ಯಾಂಡಲ್ವುಡ್ ಸಿಂಡ್ರೆಲಾ. ಹೌದು, ಯಶ್ ಆಗೊಂದು ಈಗೊಂದು ಅಂತ ಬಹಳ ಗ್ಯಾಪ್ ನಂತರ ವಿಡಿಯೋ ಫೋಟೋಗಳನ್ನು ಹಂಚಿಕೊಂಡರೆ, ರಾಧಿಕಾ ಮಾತ್ರ ಸಾಕಷ್ಟು ಪೋಸ್ಟ್ಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಮಗಳು ಹಾಗೂ ಮಗನ ಕುರಿತಾದ ಅಪ್ಡೇಟ್ಗಳನ್ನು ನೀಡುತ್ತಾ, ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಯಶ್ ಹಾಗೂ ರಾಧಿಕಾ ತಮ್ಮ ಮಗನ ನಾಮಕರಣದ ವಿಡಿಯೋವನ್ನು ಹಂಚಿಕೊಂಡಿದ್ದರು. ಅದು ಸಖತ್ ವೈರಲ್ ಆಗಿತ್ತು. ಈಗ ರಾಧಿಕಾ, ಪತಿ ಯಶ್ ಹಾಗೂ ಮಗಳ ಮುದ್ದಾದ ಒಂದು ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ಮಾಡಿದ್ದಾರೆ. ಈ ಫೋಟೋದಲ್ಲಿ ಯಶ್, ಮಗಳ ಕೈಯಿಂದ ಕರುವಿಗೆ ಬಾಳೆಹಣ್ಣು ತಿನ್ನಿಸುತ್ತಿದ್ದಾರೆ. ಈ ಫೋಟೋವನ್ನು ಯಶ್ ಅವರ ತೋಟದಲ್ಲಿ ತೆಗೆಯಲಾಗಿದೆ.
ಅಷ್ಟಕ್ಕೂ, ಫೋಟೋವನ್ನು ಯಾವಾಗ ತೆಗೆಯಲಾಗಿದೆ ಎಂದು ಎಲ್ಲೂ ಉಲ್ಲೇಖಿಸಿಲ್ಲ. ಆದರೆ ಫೋಟೋ ತೆಗೆದಿರುವ ಜಾಗ ನೋಡಿದರೆ, ಯಶ್ ತಮ್ಮ ಮಗನ ನಾಮಕರಣ ಮಾಡಿದ ತೋಟದ ಜಾಗವೇ ಇರಬೇಕು ಎಂದು ಊಹಿಸಲಾಗುತ್ತಿದೆ. ತಮ್ಮ ತೋಟದಲ್ಲೇ ಮಗನ ನಾಮಕರಣಕ್ಕೆ ಮಂಟಪ ನಿರ್ಮಿಸಲಾಗಿತ್ತು. ಅಲ್ಲಿ ರಾಧಿಕಾ ಹಾಗೂ ಯಶ್ ಅವರ ಕುಟುಂಬದವರು ಮಾತ್ರ ಈ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಚಿತ್ರವನ್ನು ನಾಮಕರಣಕ್ಕಾಗಿ ತೋಟಕ್ಕೆ ಹೋಗಿದ್ದಾಗಲೇ ತೆಗೆಯಲಾಗಿದೆ ಎನ್ನಲಾಗುತ್ತಿದೆ. ಇನ್ನು ಈ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಸಖತ್ತಾಗಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೆ ಸ್ಯಾಂಡಲ್ವುಡ್ಗೂ ಡ್ರಗ್ ಮಾಫಿಯಾಗೂ ನಂಟಿದೆ ಎಂದು ಹೇಳಲಾಗುತ್ತಿರುವ ವಿಷಯದ ಬಗ್ಗೆ ಯಶ್ ತಮ್ಮ ಪ್ರತಿಕ್ರಿಯೆ ನೀಡಿದ್ದರು.
View this post on Instagram
ಇನ್ನು ಯಶ್ ಅಭಿನಯದ ಕೆ.ಜಿ.ಎಫ್ ಚಾಪ್ಟರ್ 2 ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರತಂಡ ಮತ್ತೆ ಚಿತ್ರೀಕರಣ ಆರಂಭಿಸಿರುವ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇನ್ನು ಪ್ರಕಾಶ್ ರೈ ಅವರನ್ನು ಸಿನಿಮಾಗೆ ತೆಗೆದುಕೊಂಡಿದ್ದಕ್ಕೆ ಸಾಕಷ್ಟು ಮಂದಿ ಆಕ್ರೋಶ ಸಹ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ