Ayra Bday Video: ಅಭಿಮಾನಿಗಳ ಒತ್ತಾಯದ ಮೇರೆಗೆ ಆಯ್ರಾ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡ ಯಶ್​​

ಅದ್ಧೂರಿಯಾಗಿ ಆಚರಿಸಲ್ಪಟ್ಟ ಯಶ್​ ರಾಧಿಕಾಗೆ, ಮಗಳು ಹುಟ್ಟುಹಬ್ಬದ ವಿಡಿಯೋ ಹಂಚಿಕೊಳ್ಳುವಂತೆ ಅಭಿಮಾನಿಗಳು ಕೋರಿಕೆ ಇಟ್ಟಿದ್ದರು. ಈ ಕೋರಿಕೆ ಆಧಾರದ ಮೇಲೆ ಯಶ್​ ಮೊದಲ ಬಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಯ್ರಾ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡಿದ್ದಾರೆ.

Seema.R | news18-kannada
Updated:December 14, 2019, 1:43 PM IST
Ayra Bday Video: ಅಭಿಮಾನಿಗಳ ಒತ್ತಾಯದ ಮೇರೆಗೆ ಆಯ್ರಾ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡ ಯಶ್​​
ಆಯ್ರಾ ಜನ್ಮದಿನದ ಸಂಭ್ರಮ
  • Share this:
ಸ್ಯಾಂಡಲ್​ವುಡ್​ ರಾಕಿಂಗ್​ ದಂಪತಿ ಯಶ್​-ರಾಧಿಕಾರ ಮುದ್ದಿನ ಮಗಳು ಆಯ್ರಾ ಮೊದಲ ವರ್ಷದ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಲಾಯಿತು. ಇದಕ್ಕಾಗಿ ಫನ್​ವರ್ಲ್ಡ್​ನಲ್ಲಿ ಡಿಸ್ನಿ ವರ್ಲ್ಡ್​​ ಮಾದರಿ ಅದ್ಬುತ ಕಲ್ಪನೆಯಲ್ಲಿ ಸೆಟ್​ ಹಾಕಲಾಗಿತ್ತು.

ಕರೂಸೆಲ್​ ರೈಟ್​ ಥೀಮ್​ನಲ್ಲಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಅನ್ನು ಸಿದ್ಧಪಡಿಸಲಾಗಿತ್ತು. 8 ಅಂತಸ್ತುಗಳ ಕೇಕ್​ ಅನ್ನು ಆಯ್ರಾ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಈ ಸಂಭ್ರಮದ ಮತ್ತೊಂದು ಹೈ ಲೈಟ್​ ಎಂದರೆ ಇಡೀಸ್ಯಾಂಡಲ್​ವುಡ್​ ಮಂದಿ ಅಲ್ಲಿ ಹಾಜರಾಗಿದ್ದರು.

Ayra

ಶಿವಣ್ಣ, ಪುನೀತ್​, ದರ್ಶನ್​, ಸುಮಲತಾ, ಶ್ರೀಮುರುಳಿ ಸೇರಿದಂತೆ ಹಲವು ನಟನಟಿಯರು ಆಯ್ರಾಗೆ ಶುಭಕೋರಿದ್ದರು. ಇನ್ನು ಈ ಹುಟ್ಟುಹಬ್ಬದ ಸಣ್ಣ ಪುಟ್ಟ ವಿಡಿಯೋಗಳು ಕೂಡ ಹರಿದಾಡಿದ್ದವು.

ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿರುವ ಯಶ್​ ರಾಧಿಕಾಗೆ, ಮಗಳು ಹುಟ್ಟುಹಬ್ಬದ ವಿಡಿಯೋ ಹಂಚಿಕೊಳ್ಳುವಂತೆ ಅಭಿಮಾನಿಗಳು ಕೋರಿಕೆ ಇಟ್ಟಿದ್ದರು. ಈ ಕೋರಿಕೆ ಆಧಾರದ ಮೇಲೆ ಯಶ್​ ಮೊದಲ ಬಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಯ್ರಾ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡಿದ್ದಾರೆ.

Yash and Radhika Pandit's Daughter Ayra first birthday video

3.25 ನಿಮಿಷದ ಈ ವಿಡಿಯೋದಲ್ಲಿ ಹುಟ್ಟುಹಬ್ಬ ಹೇಗೆ ನಡೆಯಿತು. ಯಾರೆಲ್ಲಾ ಬಂದಿದ್ದರು. ಸೆಟ್​ ಹೇಗಿತ್ತು ಎಂಬ ಕುರಿತು ಸಂಪೂರ್ಣ ಚಿತ್ರಣ ಕಂಡು ಬರುತ್ತದೆ. ಅದ್ಭುತ ಸಂಗೀತದ ಈ ವಿಡಿಯೋ ಇಲ್ಲಿದೆ ನೋಡಿ.
First published: December 14, 2019, 1:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading