• Home
  • »
  • News
  • »
  • entertainment
  • »
  • Rocking Star Yash: ಮಕ್ಕಳ ಜೊತೆ ಅನಿಮಲ್ ಪಾರ್ಕ್ ವಿಸಿಟ್ ಮಾಡಿದ ಯಶ್, ವಿಡಿಯೋ ಫುಲ್ ವೈರಲ್

Rocking Star Yash: ಮಕ್ಕಳ ಜೊತೆ ಅನಿಮಲ್ ಪಾರ್ಕ್ ವಿಸಿಟ್ ಮಾಡಿದ ಯಶ್, ವಿಡಿಯೋ ಫುಲ್ ವೈರಲ್

ರಾಧಿಕಾ ಪಂಡಿತ್

ರಾಧಿಕಾ ಪಂಡಿತ್

Radhika Pandit: ಕಳೆದ ಕೆಲ ದಿನಗಳ ಹಿಂದೆ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಮಕ್ಕಳು ಹಾಗೂ ಪ್ರಾಣಿ ಪಕ್ಷಿಗಳ ಜೊತೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಪಕ್ಷಿಗಳನ್ನು ಹಿಡಿದುಕೊಂಡಿದ್ದ ರಾಧಿಕಾ ಅವರ ಕ್ಯೂಟ್​ ರಿಯಾಕ್ಷನ್ ಫುಲ್ ವೈರಲ್ ಆಗಿತ್ತು.

  • Share this:

ರಾಕಿಂಗ್ ಸ್ಟಾರ್ (Rocking Star Yash) ಯಶ್ ನಟನೆಯ `ಕೆಜಿಎಫ್ 2′ (KGF)  ಬಿಡುಗಡೆಯಾಗಿ ಭಾರೀ ಸಕ್ಸಸ್​ ಪಡೆದುಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಗಳಿಕೆ ಮಾಡಿದ್ದು, ಹಲವಾರು ಸಿನಿಮಾಗಳ ದಾಖಲೆಯನ್ನು ಧೂಳಿಪಟ ಮಾಡಿದೆ. ಸಿನಿಮಾ (Film) ಸಕ್ಸಸ್ ನಂತರ ರಾಕಿಭಾಯ್ ಫ್ಯಾಮಿಲಿ ಜೊತೆ ಬ್ಯುಸಿ ಇದ್ದಾರೆ. ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ರಾಕಿ ಇತ್ತೀಚೆಗೆ ಅನಿಮಲ್ ಪಾರ್ಕ್‌ಗೆ (Animal Park) ಭೇಟಿ ಕೊಟ್ಟಿದ್ದರು. ಈಗ ಅದರ ವಿಡಿಯೋವನ್ನು ಹಂಚಿಕೊಂಡಿದ್ದು, ಫುಲ್ ವೈರಲ್ ಆಗುತ್ತಿದೆ. 


ವಿಡಿಯೋ ಶೇರ್ ಮಾಡಿಕೊಂಡ ಯಶ್ 


ಕಳೆದ ಕೆಲ ದಿನಗಳ ಹಿಂದೆ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಮಕ್ಕಳು ಹಾಗೂ ಪ್ರಾಣಿ ಪಕ್ಷಿಗಳ ಜೊತೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಪಕ್ಷಿಗಳನ್ನು ಹಿಡಿದುಕೊಂಡಿದ್ದ ರಾಧಿಕಾ ಅವರ ಕ್ಯೂಟ್​ ರಿಯಾಕ್ಷನ್ ಫುಲ್ ವೈರಲ್ ಆಗಿತ್ತು. ಅಲ್ಲದೇ, ರಾಧಿಕಾ ನಾವು ಯಾವ ಸ್ಥಳಕ್ಕೆ ಹೋಗಿದ್ದೇವೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಸಹ ಹೇಳಿದ್ದರು. ಇದೀಗ ಯಶ್​ ವಿಡಿಯೋ ಶೇರ್ ಮಾಡಿದ್ದಾರೆ.


ಯಶ್ ಮತ್ತು ರಾಧಿಕಾ ಪಂಡಿತ್, ಮುದ್ದು ಪುಟಾಣಿಗಳಾದ ಐರಾ, ಯಥರ್ವ್, ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್, ಯಶ್ ಸಹೋದರಿ ನಂದಿನಿ ಸೇರಿದಂತೆ ಕುಟುಂಬದವರೆಲ್ಲರೂ ಇತ್ತೀಚೆಗಷ್ಟೇ ಕನಕಪುರ ರೋಡ್​ನಲ್ಲಿರುವ ಅನಿಮಲ್ ಪಾರ್ಕ್​ಗೆ ಹೋಗಿ ಫುಲ್ ಎಂಜಾಯ್ ಮಾಡಿದ್ದರು. ಅಲ್ಲಿನ ವಿಡಿಯೋವನ್ನು ಯಶ್​ ಈಗ ಹಂಚಿಕೊಂಡಿದ್ದು, ಮಕ್ಕಳ ಆಟವನ್ನು ನೋಡಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ವಿಡಿಯೋ ಜೊತೆ ಈ ಅನಿಮಲ್ ಪಾರ್ಕ್ ನಡೆಸುತ್ತಿರುವ ಸಂಜೀವ್ ಅವರ ಬಗ್ಗೆ ಸಹ ಮೆಚ್ಚುಗೆಯ ಮಾತುಗಳನ್ನು ಸಹ ಬರೆದಿದ್ದಾರೆ.


ಇದನ್ನೂ ಓದಿ: ಮತ್ತೆ ಬರುತ್ತಿದೆ ಕಾಫಿ ವಿತ್ ಕರಣ್, ಈ ಬಾರಿ ಬಾಲಿವುಡ್ ಶೋ ಮ್ಯಾನ್ ಜೊತೆ ಯಾರೆಲ್ಲ ಹರಟೆ ಹೊಡೆಯಲಿದ್ದಾರೆ?


ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡ್ತಿದ್ದಾರೆ ಯಶ್ 


ಇನ್ನು ಕೆಜಿಎಫ್ 2 ನಂತರ ಯಶ್​ ಯಾವ ಸಿನಿಮಾ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯದ ಸುದ್ದಿ ಪ್ರಕಾರ ಯಶ್​ ಅವರ 19 ನೇ ಸಿನಿಮಾದ ತಯಾರಿ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಯಶ್ ಮುಂದಿನ ಸಿನಿಮಾಗೆ ತಯಾರಿ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.


ಮಕ್ಕಳ ಜೊತೆ ಯಶ್​ ವಿಡಿಯೋ ನೋಡಿ

View this post on Instagram


A post shared by Yash (@thenameisyash)

ಕೆಜಿಎಫ್ 2 ಸಿನಿಮಾ ಬಹಳ ದೊಡ್ಡ ಯಶಸ್ಸು ನೀಡಿದೆ. ವಿಶ್ವದಾದ್ಯಂತ ದಾಖಲೆಗಳನ್ನು ಮಾಡಿದೆ. ಸರಿ ಸುಮಾರು 1500 ಕೋಟಿ ಗಳಿಗೆ ಮಾಡಿದೆ. ಇದು ನಿಜಕ್ಕೂ ಸಾಮಾನ್ಯವಾದ ವಿಚಾರವಲ್ಲ. ಕನ್ನಡ ಒಂದು ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೇ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಹಾಗಾಗಿ ಈ ಸಿನಿಮಾಗಳ ನಂತರ ಯಶ್​ ಇಡುವ ಪ್ರತಿ ಹೆಜ್ಜೆಯೂ ಬಹಳ ನಾಜೂಕಿರಬೇಕು. ಆಯ್ಕೆ ಮಾಡುವ ಸಿನಿಮಾ, ಕತೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಯಶ್​ ಸಿನಿಮಾ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಬ್ಯಾಟ್​ ಹಿಡಿದು ಮೈದಾನಕ್ಕಿಳಿದ ಸುದೀಪ್, ಪೊಲೀಸರ ಜೊತೆ ಕಿಚ್ಚನ ಕ್ರಿಕೆಟ್​


ಅಲ್ಲದೇ, ಯಶ್​ ಸುಮ್ಮನೆ ಯಾವುದೋ ಕಥೆಗಳನ್ನು ಒಪ್ಪಿಕೊಂಡಿಲ್ಲ, ಹಾಗಾಗಿ ತುಂಬಾ ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ಅವರ ಸಿನಿಮಾದ ಬಗ್ಗೆ ಯಾವುದೇ ಅಪ್​ಡೇಟ್​ ಇಲ್ಲ. ಆದರೆ ಮಾಹಿತಿಯ ಪ್ರಕಾರ ಯಶ್​ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ಆರಂಭಿಸಿದ್ದಾರಂತೆ.  ರಾಕಿಂಗ್ ಸ್ಟಾರ್ ತಮ್ಮ 19ನೇ ಸಿನಿಮಾಗಾಗಿ ಕಸರತ್ತು ಮಾಡುತ್ತಿದ್ದಾರಂತೆ. ಈ ಬಗ್ಗೆ ಯಶ್ ಅವರ ಟ್ರೈನರ್ ಪಾನಿಪುರಿ ಕಿಟ್ಟಿ ರಿವೀಲ್ ಮಾಡಿದ್ದು, ನಟ ತೂಕ ಇಳಿಸಲು ಸಾಕಷ್ಟು ವರ್ಕ್​ಔಟ್​ ಮಾಡುತ್ತಿದ್ದಾರಂತೆ.

Published by:Sandhya M
First published: