ಕೊರೋನಾದಿಂದ ಎಲ್ಲರಿಗೂ ಬಲವಂತದ ರಜೆ ನೀಡಲಾಗಿದೆ. ಸೋಂಕು ಹರಡದಂತೆ ತಡೆಯಲು ಮಾರ್ಚ್ 31ರವರೆಗೆ ಇಡೀ ದೇಶವೇ ಸ್ತಬ್ಧಗೊಂಡಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 38ಕ್ಕೇರಿದರೆ, ದೇಶಾದ್ಯಂತ 10 ಮಂದಿ ಸಾವನ್ನಪ್ಪಿದ್ದಾರೆ.
ಸಾಂಕ್ರಾಮಿಕವಾಗಿ ಕೊರೋನಾವನ್ನು ತಡೆಯುವ ಸಲುವಾಗಿ ಜನರನ್ನು ಮನೆಗಳಿಂದ ಹೊರ ಬರದಂತೆ ಸರ್ಕಾರ ಆದೇಶ ಹೊರಡಿಸಿದೆ. ಇರಿಂದಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವಂತಾಗಿದೆ. ಇದಕ್ಕೆ ಯಾವ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಸಹ ತಮ್ಮ ಇಬ್ಬರು ಮಕ್ಕಳು ಹಾಗೂ ಹೆಂಡತಿಯೊಂದಿಗೆ ಸೆಲ್ಫ್ ಐಸೋಲೇಶನ್ನಲ್ಲಿದ್ದಾರೆ.
ಅವರು ಕೊರೋನಾ ಎಫೆಕ್ಟ್ನಿಂದಾಗಿ ಯಶ್ ಸಹ ತಮ್ಮ ಮನೆಯಲ್ಲೇ ಗೃಹ ಬಂಧನಕ್ಕೊಳಗಾಗಿದ್ದಾರೆ. ಖುಷಿಯಾಗಿ ತಮ್ಮ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಮಗಳು ಆಯ್ರಾಗೆ ಮುದ್ದು ಮಾಡುತ್ತಾ ಊಟ ಮಾಡಿಸುತ್ತಾ... ಅವಳೊಂದಿಗೆ ಆಟವಾಡುತ್ತಾ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
View this post on Instagram
ಇದನ್ನೂ ಓದಿ: Pranitha Subash: ಸೋಶಿಯಲ್ ಡಿಸ್ಟೆನ್ಸಿಂಗ್ ಕುರಿತಾಗಿ ಜಾಗೃತಿ ಮೂಡಿಸುತ್ತಿರುವ ಕನ್ನಡತಿ ಪ್ರಣೀತಾ..!
ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬ್ಯುಸಿಯಾಗಿದ್ದ ಯಶ್ಗೆ ಕೊರೋನಾದಿಂದಾಗಿ ಕೊಂಚ ಬ್ರೇಕ್ ಸಿಕ್ಕಿದೆ. ಮಗಳೊಂದಿಗಿರುವ ವಿಡಿಯೋವನ್ನು ಯಶ್ ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು, ನಿನ್ನೆ ಪೋಸ್ಟ್ ಮಾಡಿರುವ ವಿಡಿಯೋಗೆ 8 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.
Kiara Advani: ಅರೆನಗ್ನರಾಗಿ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದ ಕಿಯಾರಾ ಈಗ ಅಂಗಿಯ ಬಟನ್ ತೆಗೆದು ಸುದ್ದಿಯಲ್ಲಿದ್ದಾರೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ