Yash: ವೈರಲ್​ ಆಗುತ್ತಿದೆ ರಾಕಿಂಗ್​ ಸ್ಟಾರ್ ಯಶ್ ಹಂಚಿಕೊಂಡ ಲೆಟೆಸ್ಟ್​ ವಿಡಿಯೋ..!

ಕೆ.ಜಿ.ಎಫ್​ 2 ಸಿನಿಮಾ ಕುರಿತಂತೆ ಏನಾದರೂ ಅಪ್ಡೇಟ್​ ಕೊಡುವಂತೆ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಹೀಗಿರುವಾಗಲೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಯಶ್ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

Anitha E | news18-kannada
Updated:August 4, 2020, 6:55 PM IST
Yash: ವೈರಲ್​ ಆಗುತ್ತಿದೆ ರಾಕಿಂಗ್​ ಸ್ಟಾರ್ ಯಶ್ ಹಂಚಿಕೊಂಡ ಲೆಟೆಸ್ಟ್​ ವಿಡಿಯೋ..!
ಯಶ್
  • Share this:
ಸ್ಯಾಂಡಲ್​ವುಡ್​ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆಜಿ.ಎಫ್​ ಚಾಪ್ಟರ್ 2ಗಾಗಿ ಕನ್ನಡ ಸೇರಿದಂತೆ ಇತರೆ ಭಾಷೆಯ ಸಿನಿ ಪ್ರಿಯರೂ ಕಾತರರಾಗಿ ಕಾಯುತ್ತಿದ್ದಾರೆ. ಆದರೆ ಲಾಕ್​ಡೌನ್​ನಿಂದಾಗಿ ಇದರ ಬಾಕಿ ಇರುವ ಭಾಗದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ.

ಈ ಮಧ್ಯೆ ಸಿನಿಮಾ ಕುರಿತಂತೆ ಏನಾದರೂ ಅಪ್ಡೇಟ್​ ಕೊಡುವಂತೆ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಹೀಗಿರುವಾಗಲೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಯಶ್ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

Yash shared a latest video with his sister on raksha bandhan
ಯಶ್​ ಹಾಗೂ ನಂದಿನಿ


ಹೌದು, ಅಭಿಮಾನಿಳಿಗಾಗಿಯೇ ಯಶ್​ ಈ ವಿಡಿಯೋ ಹಂಚಿಕೊಂಡಿದ್ದಾರೆ. ಯಶ್​ ಹಂಚಿಕೊಂಡಿರುವ ಈ ಭಾವನಾತ್ಮಕ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ. ತಮ್ಮ ತಂಗಿ ಜೊತೆ ಕಳೆದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ನಿನ್ನೆ ರಾಖಿ ಹಬ್ಬ. ಅದಕ್ಕಾಗಿಯೇ ಯಶ್​, ಹಾಸನದಲ್ಲಿರುವ ತಮ್ಮ ತಂಗಿ ನಂದಿನಿ ಅರುಣ್​ ಕುಮಾರ್ ಅವರ ಮನೆಗೆ ಹೋಗಿದ್ದಾರೆ. ನಂದಿನಿ ಕೈಲ್ಲಿ ರಾಖಿ ಕಟ್ಟಿಸಿಕೊಂಡು, ಗಿಫ್ಟ್​ ಕೊಟ್ಟು ಖುಷಿಪಟ್ಟಿದ್ದಾರೆ. ಆ ವಿಡಿಯೋವನ್ನು ಯಶ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
View this post on Instagram

RAKSHABHANDANA celebrations at Hassan farm house 😀👫


A post shared by Nandiniarunkumar (@nandiniarunkumar21) on


ಇನ್ನು ಅಣ್ಣನ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದ ನಂದಿನಿ ಸಹ, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ನಿನ್ನೆ ಸಂಜೆ ರಾಧಿಕಾ ಪಂಡಿತ್ ಸಹ ಮಗಳ ಮೊದಲ ರಾಖಿ ಹವ್ಬವನ್ನು ಸರಳವಾಗಿ ಸಂಭ್ರಮಿಸಿದ್ದಾರೆ.
View this post on Instagram

Their first Rakshabandan 🥰 The precious bond between siblings is just priceless!! ❤ #radhikapandit #nimmaRP


A post shared by Radhika Pandit (@iamradhikapandit) on


ಅಭಿಮಾನಿಗಳಿಗೆ ಸಂಜೆ ಸರ್ಪ್ರೈಸ್​ ಕೊಡುವುದಾಗಿ ಹೇಳಿದ್ದ ಅವರು, ಮಕ್ಕಳ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಜೊತೆಗೆ ಸಹೋದರನಿಗೆ ಈ ಸಲ ರಾಖಿ ಕಳುಹಿಸಲಾಗಲಿಲ್ಲವೆಂದು ಸಾಮಾಜಿಕ ಜಾಲತಾಣದ ಮೂಲಕವೇ ವಿಶ್​ ಮಾಡಿದ್ದಾರೆ.

ಇದನ್ನೂ ಓದಿ: Radhe Shyam: ಪ್ರಭಾಸ್​ ನಟನೆಯ ರಾಧೆ ಶ್ಯಾಮ್​ ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ ಎ.ಆರ್​. ರೆಹಮಾನ್​..!

ಇನ್ನು ಯಶ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆ.ಜಿ.ಎಫ್​ ಚಾಪ್ಟರ್​ 2 ವಿಷಯಕ್ಕೆ ಬಂದರೆ, ಇದರ ಚಿತ್ರೀಕರಣವನ್ನು ಆಗಸ್ಟ್​ 15ರಿಂದ ಆರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ. ಎರಡು ಹಂತದಲ್ಲಿ ಬಾಕಿ ಇರುವ ಭಾಗದ ಶೂಟಿಂಗ್​ ನಡೆಯಲಿದೆಯಂತೆ. ಅದಕ್ಕಾಗಿ ಮಿನರ್ವ ಮಿಲ್​ನಲ್ಲಿ ಸೆಟ್​ ಸಹ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
Published by: Anitha E
First published: August 4, 2020, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading