ಯಶ್ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. ಆದರೆ, ಅವರ ಹೆಚ್ಚಾಗಿ ಸಕ್ರಿಯವಾಗಿರುವುದಿಲ್ಲ. ಅದರಲ್ಲೂ ತಮ್ಮ ವೈಯಕ್ತಿಕ ವಿಷಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ವಿರಳ. ಆದರೆ ಆಗಾಗ ತಮ್ಮ ಮಕ್ಕಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಲಾಕ್ಡೌನ್ನಲ್ಲಣತೂ ಮಕ್ಕಳೊಂದಿಗೆ ಕಾಲ ಕಳೆದ ರಾಕಿಂಗ್ ದಂಪತಿ, ಸದ್ಯ ಮಕ್ಕಳ ಪಾಲನೆಯ ಮಾಡುವ ಪ್ತಿ ಹಂತವನ್ನೂ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದು ಅವರ ಸಾಮಾಜಿಕ ಜಾಲತಾಣ ನೋಡಿದರೆ ಅರ್ಥವಾಗುತ್ತದೆ. ಇನ್ನು, ಕೆಜಿಎಫ್ ಚಾಪ್ಟರ್ 2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ, ಸಿಗುವ ಕೊಂಚ ಸಮಯವನ್ನು ಕುಟುಂಬ ಹಾಗೂ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾರೆ. ಮಕ್ಕಳೊಂದಿಗೆ ಕಳೆಯುವ ಅಮೂಲ್ಯವಾದ ಸಮಯವನ್ನು ಆಗಾಗ ಕ್ಯಾಮೆರಾದಲ್ಲಿ ಸೆರೆ ಹಿಡಿಟ್ಟುಕೊಳ್ಳುತ್ತಿರುತ್ತಾರೆ. ಅಂತಹ ವಿಡಿಯೋಗಳಲ್ಲಿ ಕೆಲವನ್ನು ರಾಧಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಯಶ್ ಆಗೊಂದು ಈಗೊಂದು ಪೋಸ್ಟ್ ಮಾಡುತ್ತಿರುತ್ತಾರೆ.
ಈಗಲೂ ಸಹ ಯಶ್ ತಮ್ಮ ಮಗಳೊಂದಿಗೆ ಕಳೆದ ಸಖತ್ ಫನ್ನಿ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೌದು, ಮಗಳು ಐಸ್ ಕ್ರೀಂ ತಿನ್ನುವಾಗ ತನಗೆ ಕೊಡುವಂತೆ ಯಶ್ ಕೇಳುತ್ತಾರೆ. ಎಷ್ಟು ಸಲ ಕೇಳಿದರೂ ಆಯ್ರಾ ಮಾತ್ರ ಯಾರಿಗೂ ಕಡದೆ ಆಟವಾಡಿಸುತ್ತಾಳೆ. ಅಪ್ಪ-ಮಗಳ ಈ ಮುದ್ದಾದ ವಿಡಿಯೋವನ್ನು ರಾಧಿಕಾ ಪಂಡಿತ್ ವಿಡಿಯೋ ಮಾಡಿದ್ದಾರೆ.
View this post on Instagram
Sharing is caring... not when it comes to ICE CREAM 😜 (Getting a dose of my own medicine here 😄)
View this post on Instagram
View this post on Instagram
Waves can't be stopped but you can learn to sail.. After a long break.. Rocky sets sail from today.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ