• Home
  • »
  • News
  • »
  • entertainment
  • »
  • Yash: ಬಲವಂತಕ್ಕೆ ಪರ್ಸನಲ್​ ಫೋಟೋಗ್ರಾಫರ್​ ಆಗಬೇಕಾಯಿತು ಎಂದ ರಾಕಿಂಗ್​ ಸ್ಟಾರ್​ ಯಶ್​..!

Yash: ಬಲವಂತಕ್ಕೆ ಪರ್ಸನಲ್​ ಫೋಟೋಗ್ರಾಫರ್​ ಆಗಬೇಕಾಯಿತು ಎಂದ ರಾಕಿಂಗ್​ ಸ್ಟಾರ್​ ಯಶ್​..!

ಯಶ್

ಯಶ್

Radhika Pandith: ಸ್ಯಾಂಡಲ್​ವುಡ್​ ಸ್ಟಾರ್​ ನಾಯಕರಲ್ಲಿ ಯಶ್​ ಸಹ ಒಬ್ಬರು. ಹಿಟ್ ಸಿನಿಮಾಗಳ ಮೂಲಕ ರಾಕಿಂಗ್​ ಸ್ಟಾರ್​ ಎನಿಸಿಕೊಂಡಿರುವ ಯಶ್​ ಬಲವಂತಕ್ಕೆ ಪರ್ಸನಲ್​ ಫೋಟೋಗ್ರಾಫರ್​ ಆಗುವಂತಾಯಿತಂತೆ. ಅದರ ಬಗ್ಗೆ ಅಭಿಮಾನಿಗಳ ಬಗ್ಗೆ ತಮ್ಮ ದುಃಖ ಹಂಚಿಕೊಂಡಿದ್ದಾರೆ.

  • Share this:

ಯಶ್​ ಹಾಗೂ ರಾಧಿಕಾ ಪಂಡಿತ್​ ಇತ್ತೀಚೆಗಷ್ಟೆ ತಮ್ಮ ಮಗನ ನಾಮಕರಣ ಮಾಡಿದ್ದಾರೆ. ಮಗನಿಗೆ ಯಥರ್ವ್​ ಎಂಬ ಹೆಸರನ್ನು ಇಟ್ಟಿದ್ದು, ತೋಟದ ಮನೆಯಲ್ಲಿ ಅದ್ಧೂರಿಯಾಗಿ ಮಂಟಪ ನಿರ್ಮಿಸಿದ್ದರು. ಕೊರೋನಾ ಕಾರಣದಿಂದಾಗಿ ತಮ್ಮ ಮನೆಯವರು ಮಾತ್ರ ಸೇರಿ ಪುಟ್ಟದಾಗಿ ಮಗನ ನಾಮಕರಣ ಕಾರ್ಯ ಮುಗಿಸಿದ್ದಾರೆ. ಈ ವಿಡಿಯೋವನ್ನು ಯಶ್​ ಹಾಗೂ ರಾಧಿಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ವೈರಲ್​ ಆಗಿತ್ತು. ಇನ್ನು ರಾಕಿಂಗ್​ ದಂಪತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ಸಿಂಡ್ರೆಲಾ. ಆಗಾಗ ತಮ್ಮ ಗಂಡ ಹಾಗೂ ಮಕ್ಕಳ ಅಪ್ಡೇಟ್​ ಜೊತೆಗೆ ತಮ್ಮ ಫೋಟೋಗಳನ್ನೂ ಪೋಸ್ಟ್​ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗಷ್ಟೆ ಯಶ್​ ಹಾಗೂ ಆಯ್ರಾ ಕರುವಿಗೆ ಬಾಳೆಹಣ್ಣು ತಿನ್ನಿಸುವ ಫೋಟೋವನ್ನು ಹಂಚಿಕೊಂಡಿದ್ದರು ರಾಧಿಕಾ. ನಂತರ ತಮ್ಮ ಮನೆಯ ಗಾರ್ಡನ್​ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದರು.


ರಾಧಿಕಾ ಪರ್ಫೆಕ್ಟ್​ ಸೆಲ್ಫಿ ತೆಗೆದಯುಕೊಳ್ಳಲು ಯತ್ನಿಸುವಾಗ ಯಶ್​ ಹಾಗೂ ಆಯ್ರಾ ವಿಡಿಯೋ ಮಾಡಿದ್ದರು. ಅದನ್ನು ರಾಧಿಕಾ ಪಂಡಿತ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ಒಂದು ಟಾಸ್ಕ್​ ಇದ್ದಂತೆ ಹೆಣ್ಣುಮಕ್ಕಳಿಗೆ ಎಂದು ರಾಧಿಕಾ ಬರೆದುಕೊಂಡಿದ್ದರು.
ಇದರ ಮುಂದುವರೆದ ಭಾಗವಾಗಿ ರಾಧಿಯಾ, ಆಗ ತೆಗೆದ ಸೆಲ್ಫಿಯನ್ನು ಈಗ ಪೋಸ್ಟ್​ ಮಾಡಿದ್ದಾರೆ. ಆದರೆ ಈ ಸೆಲ್ಫಿಯಲ್ಲಿ ಹಿಂದೆ ಬಾತುಕೋಲಿಗಳಿದ್ದು, ಅವುಗಳನ್ನು ಸರಿಯಾಗಿ ಸೆರೆ ಹಿಡಿಯಲು ಆಗಲಿಲ್ಲ. ನಾನು ಅಷ್ಟು ಪ್ರೊಫೆಷನಲ್​ ಅಲ್ಲ. ಅದಕ್ಕೆ ಯಾವಾಗಲೂ ಪ್ರೊಫೆಸನಲ್​ ಫೋಟೋಗ್ರಾಫರ್​ ಜೊತೆಗಿರಬೇಕು ಎನ್ನುವುದು ಅಂತ ತಮ್ಮ ಪತಿರಾಯನಿಗೆ ಪರೋಕ್ಷವಾಗಿ ಸಂದೇಶ ಕೊಟ್ಟಿದ್ದಾರೆ.
ರಾಧಿಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಡಿರುವ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಯಶ್​, ಪ್ರತಿ ಗಂಡನೂ ಬಲವಂತಾಗಿ ಫೋಟೋಗ್ರಾಫರ್​ ಆಗಿರುತ್ತಾನೆ. ನನ್ನ ಈ ಮಾತನ್ನು ಎಲ್ಲ ಗಂಡಂದಿರು ಹಾಗೂ ಬಾಯ್​ಫ್ರೆಂಡ್ಸ್​ ಒಪ್ಪುತ್ತೀರಲ್ಲವೇ ಎಂದು ಕಮೆಂಟ್​ ಮಾಡಿದ್ದಾರೆ.


Yash, Personal Photographer, sandalwood, Radhika Pandit Selfie video, Radhika Pandit, Taking selfie is a task for radhika pandit, radhika pandit,
ರಾಧಿಕಾ ಪಂಡಿತ್​ ಫೋಟೋಗೆ ಪ್ರತಿಕ್ರಿಯಿಸಿರುವ ಯಶ್​


ರಾಧಿಕಾರ ಈ ಫೋಟೋ ಹಾಗೂ ಯಶ್​ ಅವರ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಾ ಕಮೆಂಟ್​ ಮಾಡುತ್ತಿದ್ದಾರೆ. ಇನ್ನು ಯಶ್​ ಸದ್ಯ ಕೆಜಿಎಫ್​ ಚಾಪ್ಟರ್ 2 ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು, ಪ್ರಕಾಶ್​ ರೈ ಚಿತ್ರತಂಡಕ್ಕೆ ಹೊಸದಾಗಿ ಸೇರಿಕೊಂಡಿದ್ದಾರೆ. ಪ್ರಕಾಶ್​ ರೈ ಅವರ ಎಂಟ್ರಿಯಿಂದ ಗರಂ ಆಗಿರುವ ಸಾಕಷ್ಟು ಮಂದಿ ಸಿನಿಪ್ರಿಯರು, ಅವರನ್ನು ಸಿನಿಮಾದಿಂದ ಕೈ ಬಿಡುವಂತೆ ಒತ್ತಾಯು ಮಾಡುತ್ತಿದ್ದಾರೆ.

Published by:Anitha E
First published: