Samantha: ನಟಿ ಸಮಂತಾಗೆ ಬಂತು ಬಾಲಿವುಡ್ ಬಂಪರ್ ಆಫರ್..! ಕೇಳಿದ್ರೆ ಶಾಕ್ ಆಗ್ತೀರಾ..?
ಈಗಾಗಲೇ ಈ ನಟಿ ‘ದಿ ಫ್ಯಾಮಿಲಿ ಮ್ಯಾನ್ 2’ ಎಂಬ ವೆಬ್ ಸೀರಿಸ್ನಲ್ಲಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿ ಕೊಂಡಿದ್ದಾರೆ. ಸಮಂತಾ ರುತ್ ಪ್ರಭು ಬಾಲಿವುಡ್ನಲ್ಲಿ ಈಗ ಬೇಡಿಕೆಯ ನಟಿಯಾಗಿದ್ದಾರೆ.
ಈ ಚಿತ್ರೋದ್ಯಮವೇ ಹೀಗೆ.. ಇಲ್ಲಿ ಒಂದು ಚಿತ್ರ ಹಿಟ್ ಆದರೆ ಸಾಕು ನಿರ್ದೇಶಕರು ಮತ್ತು ನಿರ್ಮಾಪಕರು(Producers) ಆ ನಟ, ನಟಿಯರನ್ನು ಹಾಕಿಕೊಂಡು ಚಿತ್ರ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗೆಯೇ ಒಂದು ಚಿತ್ರ ಫ್ಲಾಪ್ ಆದರೆ ಸಾಕು ಅಂತಹ ನಟನ ಅಥವಾ ನಟಿಯ ಮುಖ ಸಹ ಚಿತ್ರೋದ್ಯಮ ನೋಡುವುದಿಲ್ಲ. ಇಲ್ಲೊಬ್ಬ ನಟಿಗೆ ಚಿತ್ರಗಳ ಆಫರ್ ಎಲ್ಲಾ ಕಡೆಯಿಂದಲೂ ಹುಡುಕಿಕೊಂಡು ಬರುತ್ತಿವೆ. ತೆಲುಗಿನ ನಟಿ ಸಮಂತಾ (Telugu actress Samantha) ಅವರು ತಮ್ಮ ಅದ್ಭುತ ನಟನಾ ಕೌಶಲ್ಯದಿಂದಾಗಿ ಟಾಲಿವುಡ್ ಚಿತ್ರೋದ್ಯಮದಲ್ಲಿ(Tollywood industry) ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಎಂದು ಹೇಳಬಹುದು. ತನ್ನ ಸುಂದರವಾದ ಮುಖ ಮತ್ತು ನಟನಾ ಕೌಶಲ್ಯದಿಂದಾಗಿ (Amazing Acting) ತುಂಬಾನೇ ಹೆಸರುವಾಸಿಯಾಗಿರುವ ನಟಿ ಎಂದರೆ ತಪ್ಪಾಗುವುದಿಲ್ಲ.
3 ಚಲನಚಿತ್ರಗಳ ಒಪ್ಪಂದ
ಈ ನಟಿ ಮೊದಲು ಬರೀ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದು, ಕ್ರಮೇಣವಾಗಿ ಹಿಂದಿ ಚಿತ್ರರಂಗದಲ್ಲಿಯೂ ಸಹ ಈಗ ತಮ್ಮ ಛಾಪನ್ನು ಮೂಡಿಸಿದ್ದಾರೆ. ಈಗ ಬಾಲಿವುಡ್ನಲ್ಲಿ ಸಮಂತಾಗೆ ಸಿಕ್ಕ ಆಫರ್ ಯಾವುದು ಅಂತ ನೀವು ಕೇಳಿದರೆ ಅಬ್ಬಬ್ಬಾ ಅಂತ ಹೇಳೋದಂತೂ ಗ್ಯಾರಂಟಿ.
ಈಗಾಗಲೇ ಈ ನಟಿ ‘ದಿ ಫ್ಯಾಮಿಲಿ ಮ್ಯಾನ್ 2’ ಎಂಬ ವೆಬ್ ಸೀರಿಸ್ನಲ್ಲಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿ ಕೊಂಡಿದ್ದಾರೆ. ಸಮಂತಾ ರುತ್ ಪ್ರಭು ಬಾಲಿವುಡ್ನಲ್ಲಿ ಈಗ ಬೇಡಿಕೆಯ ನಟಿಯಾಗಿದ್ದಾರೆ. ಚಲನಚಿತ್ರೋದ್ಯಮದ ಇತ್ತೀಚಿನ ಸುದ್ದಿಯ ಪ್ರಕಾರ, ಸಮಂತಾ ರುತ್ ಪ್ರಭು ಅವರನ್ನು ಹಿಂದಿ ಚಿತ್ರರಂಗದ ಜನಪ್ರಿಯ ಯಶ್ ರಾಜ್ ಫಿಲ್ಮ್ಸ್ ಅವರು ಇವರೊಟ್ಟಿಗೆ 3 ಚಲನಚಿತ್ರಗಳ ಒಪ್ಪಂದಕ್ಕಾಗಿ ಸಂಪರ್ಕಿಸಿ ಭಾರಿ ಮೊತ್ತದ ಪೇ ಚೆಕ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಭಾರಿ ಮೊತ್ತದ ಪೇ ಚೆಕ್
ಯಶ್ ರಾಜ್ ಫಿಲ್ಮ್ಸ್ ಅವರು ಹಿಂದಿ ಚಿತ್ರೋದ್ಯಮದಲ್ಲಿ ಅನೇಕ ಒಳ್ಳೆಯ ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ಯಾವುದೇ ಯುವ ಪ್ರತಿಭೆಗಳು ಮತ್ತು ಅನುಭವಿ ನಟ ಮತ್ತು ನಟಿಯರು ಎಲ್ಲರೂ ಈ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡುವುದಕ್ಕೆ ತುಂಬಾನೇ ಕಾತುರತೆಯಿಂದ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಎಂದು ಹೇಳಬಹುದು. ಈ ಮೂರು ಚಿತ್ರಗಳನ್ನೊಳಗೊಂಡ ಯೋಜನೆಗಳಿಗೆ ಸಹಿ ಹಾಕಲು ಯಶ್ ರಾಜ್ ಫಿಲ್ಮ್ಸ್ ಅವರು ನಟಿ ಸಮಂತಾಗೆ ಭಾರಿ ಮೊತ್ತದ ಪೇ ಚೆಕ್ ಅನ್ನು ನೀಡಿದ್ದಾರೆ ಮತ್ತು ‘ರಂಗಸ್ಥಲಂ’ ಚಿತ್ರದ ನಟಿ ಆ ಚಿತ್ರಗಳಲ್ಲಿ ನಟಿಸಲು ತಮ್ಮ ಆಸಕ್ತಿಯನ್ನು ಸಹ ವ್ಯಕ್ತ ಪಡಿಸಿದ್ದಾರೆ ಎಂಬ ವರದಿಗಳು ಬರುತ್ತಿವೆ.
ಸಿಟಾಡೆಲ್ ನಲ್ಲಿ ನಟನೆ
ನಟಿ ಈ ದೊಡ್ಡ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದರೆ ಅದು ಅವಳಿಗೆ ವೃತ್ತಿ ಜೀವನದಲ್ಲಿ ತುಂಬಾನೇ ದೊಡ್ಡ ಮಟ್ಟದ ಬದಲಾವಣೆಯನ್ನು ತಂದುಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಾಲಿವುಡ್ನಲ್ಲಿ ಸಮಂತಾ ಅವರು ಸಹಿ ಹಾಕಲಿರುವ ಆ 3 ಚಲನಚಿತ್ರಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತವಾದ ಮಾಹಿತಿ ಇನ್ನೂ ಹೊರ ಬಂದಿಲ್ಲ. ಮತ್ತೊಂದೆಡೆ, ಸಮಂತಾ ವೆಬ್ ಸಿರೀಸ್ ‘ಸಿಟಾಡೆಲ್’ನಲ್ಲಿ ನಟಿಸಲಿದ್ದಾರೆ ಎಂದು ಈಗಾಗಲೇ ದೃಢಪಟ್ಟಿದ್ದು, ಇದು ರಾಜ್ ಮತ್ತು ಡಿಕೆ ಅವರ ನಾಯಕತ್ವದಲ್ಲಿ ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್ ನಂತರದಲ್ಲಿ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ.
‘ಈಗಾ’ ಮತ್ತು ‘ರಂಗಸ್ಥಲಂ’ ಚಿತ್ರದಲ್ಲಿ ನಟಿಸಿದ್ದ ನಟಿ ತಮ್ಮ ಮೊದಲ ಹಾಲಿವುಡ್ ಚಲನಚಿತ್ರ ‘ಅರೇಂಜ್ಮೆಂಟ್ ಆಫ್ ಲವ್’ ಗೆ ಸಹಿ ಮಾಡಿದ್ದಾರೆ. ಈ ಚಿತ್ರವನ್ನು ಬಾಫ್ಟಾ ವಿಜೇತ ನಿರ್ದೇಶಕ ಫಿಲಿಪ್ ಜಾನ್ ಅವರು ನಿರ್ದೇಶಿಸಲಿದ್ದಾರೆ ಮತ್ತು ಗುರು ಫಿಲ್ಮ್ಸ್ ಬ್ಯಾನರ್ನಲ್ಲಿ ಸುನೀತಾ ಟಾಟಿ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಅವರು ಈ ಹಿಂದೆ ಸಮಂತಾ ಅವರೊಂದಿಗೆ ಓಹ್ ಬೇಬಿ ಚಿತ್ರದಲ್ಲಿ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ