ಅಮೆಜಾನ್ ಪ್ರೈಮ್‌ನ 400 ಕೋಟಿ ಆಫರ್‌ ತಿರಸ್ಕರಿಸಿದ ಬಾಲಿವುಡ್‌ ನಿರ್ಮಾಪಕ Aditya Chopra

ಒಟಿಟಿ ವೇದಿಕೆಯಿಂದ ಸಿಕ್ಕಿದ್ದ ಕೋಟಿ ಕೋಟಿ ಆಫರ್​ಗಳನ್ನೇ ತಿರಸ್ಕರಿಸಿದ ಆ ಸ್ಟಾರ್ ನಿರ್ಮಾಪಕರ ಯಾರಪ್ಪ ಅಂತೀರಾ? ಅದು ಬೇರಾರೂ ಅಲ್ಲ, ಬಾಲಿವುಡ್‌ನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದ ಆದಿತ್ಯ ಚೋಪ್ರಾ. 

ಯಶ್​ ರಾಜ್​ ಫಿಲಂಸ್​ನಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿರುವ ನಾಲ್ಕು ಸಿನಿಮಾಗಳು ತೆರೆ ಕಾಣಲು ಸಿದ್ಧವಾಗಿವೆ.

ಯಶ್​ ರಾಜ್​ ಫಿಲಂಸ್​ನಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿರುವ ನಾಲ್ಕು ಸಿನಿಮಾಗಳು ತೆರೆ ಕಾಣಲು ಸಿದ್ಧವಾಗಿವೆ.

  • Share this:
ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಎಲ್ಲ ಚಿತ್ರ ಮಂದಿರಗಳಿಗೆ ಬೀಗ ಬಿದ್ದಿದ್ದು, ತುಂಬಾ ಹಣ ಹಾಕಿ ಮಾಡಿದಂತಹ ಚಿತ್ರಗಳು ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ಬಿಡುಗಡೆ ಮಾಡಲು ಸಾಧ್ಯವಾಗದಂತಾಯಿತು. ಇದರಿಂದಾಗಿ ಕೆಲವರು ಒಟಿಟಿ ವೇದಿಕೆ ಮೂಲಕ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿದ್ದು ನಮಗೆಲ್ಲ ತಿಳಿದಿರುವ ವಿಷಯವೇ ಆಗಿದೆ. ಈ ಪರಿಸ್ಥಿತಿಯನ್ನು ಉತ್ತಮವಾಗಿ ಬಳಸಿಕೊಂಡ ಡಿಜಿಟಲ್ ಮಾಧ್ಯಮಗಳು ಚಿತ್ರ ನಿರ್ಮಾಪಕರಿಗೆ ನೀಡಿದ ಆಫರ್​ಗಳು ಅಷ್ಟಿಷ್ಟಲ್ಲ.ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ದಿಗ್ಗಜ ನಟರಾದಂತಹ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಚಿತ್ರಗಳು ಸಹ ಬಿಡುಗಡೆಗೆ ಕಾದು ಕಾದು ಕೊನೆಗೆ ಒಟಿಟಿಯಲ್ಲಿ ಬಿಡುಗಡೆ ಮಾಡಿದರು. ಆದರೆ ಬಾಲಿವುಡ್‌ನ ಸ್ಟಾರ್​ ನಿರ್ಮಾಪಕರೊಬ್ಬರು ತಮ್ಮ ಸಿನಿಮಾಗಳನ್ನುಚಿತ್ರಮಂದಿರದ ದೊಡ್ಡ ಪರದೆಯ ಮೇಲೆಯೇ ಬಿಡುಗಡೆ ಮಾಡಲು ಪಟ್ಟು ಹಿಡಿದಿದ್ದು, ಅನೇಕ ಒಟಿಟಿ ಕಂಪೆನಿಗಳು ನೀಡಿದ ಆಫರ್ ತಿರಸ್ಕರಿಸಿದ್ದಾರಂತೆ.

ಕೋಟಿ ಕೋಟಿ ಆಫರ್​ಗಳನ್ನೇ ತಿರಸ್ಕರಿಸಿದ ಆ ಸ್ಟಾರ್ ನಿರ್ಮಾಪಕರ ಯಾರಪ್ಪ ಅಂತೀರಾ? ಅದು ಬೇರಾರೂ ಅಲ್ಲ, ಬಾಲಿವುಡ್‌ನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದ ಆದಿತ್ಯ ಚೋಪ್ರಾ.

Aditya Chopra’s Yash Raj Films, Yash Raj Films rejects over Rs. 400 crore offer, direct to digital premiere, Bunty Aur Babli 2, Shamshera, Prithviraj, Jayeshbhai Jordaar movie, ಬಾಲಿವುಡ್ ನಿರ್ಮಾಪಕ, ಆದಿತ್ಯ ಚೋಪ್ರಾ, ನಿರ್ಮಾಪಕ ಆದಿತ್ಯ, ಒಟಿಟಿ ಮಾಧ್ಯಮ, ಅಮೆಜಾನ್ ಪ್ರೈಮ್, ಆದಿತ್ಯ ಚಿತ್ರಗಳು, ವೈಆರ್‌ಎಫ್ ಚಿತ್ರ, Yash Raj Films, Yash Raj, Aditya Chopra, OTT giants, Amazon Prime, YRF movies, Aditya films
ನಿರ್ಮಾಪಕ ಆದಿತ್ಯ ಚೋಪ್ರಾ


ಯಶ್ ರಾಜ್​ ಫಿಲಂಸ್ ಬ್ಯಾನರ್​​ ಅಡಿಯಲ್ಲಿ ನಿರ್ಮಿಸಿರುವ ಬಂಟಿ ಔರ್ ಬಬ್ಲಿ 2, ಶಂಶೇರ, ಪೃಥ್ವಿರಾಜ್, ಜಯೇಶ್ ಭಾಯ್ ಜೋರ್ದಾರ್‌ ಚಲನಚಿತ್ರಗಳು ರಿಲೀಸ್ಗೆ ರೆಡಿಯಾಗಿವೆ. ಆದರರೂ ಕಳೆದ 18 ತಿಂಗಳಿನಿಂದ ಈ ನಾಲ್ಕು ಚಿತ್ರಗಳನ್ನು ರಿಲೀಸ್​ ಮಾಡದೆ ಹಾಗೆ ಇಟ್ಟುಕೊಂಡಿದ್ದಾರೆ ಆದಿತ್ಯ ಚೋಪ್ರಾ.

ಇದನ್ನೂ ಓದಿ: Kajol: ಡಿಡಿಎಲ್​ಜೆ ಸಿನಿಮಾದ ಹಾಡಿನಲ್ಲಿ ನಟಿ ಕಾಜೋಲ್​ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳಲು ಕಾರಣವಿತ್ತು..!

ಸದ್ಯದ ಪರಿಸ್ಥಿತಿಯಲ್ಲಿ ಯಶ್ ರಾಜ್ ಸ್ಟುಡಿಯೋಸ್ ಅವರಿಗೆ ಒಂದಲ್ಲ ಎರಡಲ್ಲ, ಹಲವಾರು ಒಟಿಟಿ ಕಂಪೆನಿಗಳಿಂದ ಅನೇಕ ಆಫರ್ ಬಂದಿವೆಯಂತೆ. "ಆದಿತ್ಯ ಚೋಪ್ರಾ ಅವರು ಮಾತ್ರ ಡಿಜಿಟಲ್ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ನೇರವಾಗಿ ಚಿತ್ರಮಂದಿರಗಳಲ್ಲಿಯೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರಂತೆ. ಯಶ್​ ರಾಜ್​ ಫಿಲಂಸ್​ ತಮ್ಮ ಚಲನಚಿತ್ರಗಳನ್ನು ದೊಡ್ಡ ಪರದೆಯ ಮೇಲೆ ಬಿಡುಗಡೆ ಮಾಡಲೆಂದು ಉದ್ದೇಶಿಸಲಾಗಿದೆ ಎಂಬ ಅಂಶದ ಬಗ್ಗೆ ಅವರು ಸ್ಪಷ್ಟಪಡಿಸಿದ್ದಾರೆ ಮತ್ತು ಪದೇ ಪದೇ ಒಟಿಟಿಗಳ ಆಫರ್ ತಿರಸ್ಕರಿಸಿದ್ದಾರೆ" ಎಂದು ಸಿನಿಮಾ ವೆಬ್​ಸೈಟ್​ ಒಂದು ವರದಿ ಮಾಡಿದೆ.

"ಸಾಂಕ್ರಾಮಿಕ ರೋಗದ ಎರಡನೇ ಅಲೆಯ ನಂತರ, ಮಹಾರಾಷ್ಟ್ರದಲ್ಲಿ ಚಲನಚಿತ್ರ ಮಂದಿರಗಳನ್ನು ಮತ್ತೆ ತೆರೆಯುವ ಬಗ್ಗೆ ಯಾವುದೇ ಸ್ಪಷ್ಟತೆ ದೊರೆಯದೆ ಇರುವುದರಿಂದ ಅಮೆಜಾನ್ ಪ್ರೈಮ್ ಆದಿತ್ಯ ಚೋಪ್ರಾ ಅವರಿಗೆ 4 ಚಲನಚಿತ್ರಗಳನ್ನು ಸಂಪೂರ್ಣವಾಗಿ 400 ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಸ್ವಾಧೀನಪಡಿಸಿಕೊಳ್ಳಲು ಲಾಭದಾಯಕ ಆಫರ್ ಒಂದನ್ನು ನೀಡಿತ್ತು. ಆದರೆ ಅದರ ಬಗ್ಗೆ ಸ್ವಲ್ಪವೂ ಯೋಚಿಸದೆ, ಆದಿತ್ಯ ತಮ್ಮ ಚಿತ್ರಗಳನ್ನು ನೀಡಲು ಆಗುವುದಿಲ್ಲ ಎಂದು ಹೇಳಿಯೇ ಬಿಟ್ಟರು" ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 25 years of DDLJ: ರಾಜ್​-ಸಿಮ್ರನ್​ಗೆ ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಶಾರುಖ್​-ಕಾಜೋಲ್​..!

ಈ ಡಿಜಿಟಲ್ ದೈತ್ಯರು ಆದಿತ್ಯ ಚೋಪ್ರಾ ಅವರ 4 ಸಿನಿಮಾಗಳಲ್ಲಿ ಯಾವುದಾದರೂ ಒಂದನ್ನಾದರೂ ಪಡೆಯಬೇಕು ಎಂದು ತುಂಬಾನೇ ಪ್ರಯತ್ನ ಮಾಡಿವೆ. ಆದರೆ ಪೃಥ್ವಿರಾಜ್ ಮತ್ತು ಶಂಶೇರಾದಂತಹ ದೊಡ್ಡ ಚಿತ್ರಗಳನ್ನು ಒಟಿಟಿಗೆ ನೀಡುವ ಮನಸ್ಸು ಆದಿತ್ಯ ಅವರಿಗಿಲ್ಲ. ಇನ್ನು, ಬಂಟಿ ಔರ್ ಬಬ್ಲಿ 2 ಮತ್ತು ಜಯೇಶ್ ಭಾಯ್ ಜೋರ್ದಾರ್‌ನಂತಹ ತುಲನಾತ್ಮಕವಾಗಿ ಕಡಿಮೆ ಬಜೆಟ್ ಚಲನಚಿತ್ರಗಳನ್ನು ಖರೀದಿಸಲು ಸಹ ತುಂಬಾ ಪ್ರಯತ್ನಿಸಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಆದಿತ್ಯ ಮಾತ್ರ ತಮ್ಮ ಚಿತ್ರಗಳು ಚಿತ್ರಮಂದಿರದ ಪರದೆಯ ಮೇಲೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದು, ಬಿಡುಗಡೆಯ ದಿನಾಂಕದ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ಹೇಳಿದ್ದಾರೆ.
Published by:Anitha E
First published: