ಅಪ್ಪನಾಗುತ್ತಿರುವ ಕಿರಾತಕ: ಗರ್ಭಿಣಿ ರಾಧಿಕಾ ಮೊದಲ ಫೋಟೋ ವೈರಲ್


Updated:August 13, 2018, 2:22 PM IST
ಅಪ್ಪನಾಗುತ್ತಿರುವ ಕಿರಾತಕ: ಗರ್ಭಿಣಿ ರಾಧಿಕಾ ಮೊದಲ ಫೋಟೋ ವೈರಲ್

Updated: August 13, 2018, 2:22 PM IST
ನ್ಯೂಸ್​ 18 ಕನ್ನಡ

ಬೆಂಗಳೂರು(ಆ.12): ಸ್ಯಾಂಡಲ್​ವುಡ್​ನ ರಾಕಿಂಗ್​ ಜೋಡಿ ಯಶ್​ ರಾಧಿಕಾ, ಕಳೆದ ತಿಂಗಳು ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಬರ ಮಾಡಿಕೊಳ್ಳುವ ತಯಾರಿಯಲ್ಲಿದ್ದೇವೆ ಎನ್ನುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಇದೀಗ ಇದರ ಬೆನ್ನಲ್ಲೇ ರಾಧಿಕಾ ತಮ್ಮ ಉಬ್ಬಿದ ಹೊಟ್ಟೆಯೊಂದಿಗೆ ಯಶ್​ರೊಂದಿಗೆ ಫೋಸ್​ ನೀಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದ್ದಾರೆ.

ಹೌದು 2016ರ ಆಗಸ್ಟ್​ 16, ಅಂದರೆ ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ಈ 'ಮೊಗ್ಗಿನ ಮನಸು'​ ಜೋಡಿ ಗೋವಾದಲ್ಲಿ ರಿಂಗ್​ ಬದಲಾಯಿಸಿಕೊಳ್ಳುವ ಮೂಲಕ ಎಲ್ಲಾ ಗಾಸಿಪ್​ಗಳಿಗೂ ತೆರೆ ಎಳೆದಿದ್ದರು. ಇದೀಗ ಎಂಗೇಜ್​ಮೆಂಟ್​ ಆಗಿ ಎರಡು ವರ್ಷಗಳಾಗುತ್ತಿರುವ ಖುಷಿಯಲ್ಲಿ ರಾಧಿಕಾ ಈ ಫೋಟೋ ಶೇರ್​ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್​ ಆಗುತ್ತಿದೆ.
Loading...

12th Aug, 2016.. the day we got engaged 🤗 its been 2yrs now.. it's been a 'bumpy ride' for sure 😉 #radhikapandit #nimmaRP


A post shared by Radhika Pandit (@iamradhikapandit) on
 

ಗರ್ಭಿಣಿ​ ಆದ ಬಳಿಕ ಇದೇ ಮೊದಲ ಬಾರಿ ರಾಧಿಕಾ ತಮ್ಮ ಉಬ್ಬಿದ ಹೊಟ್ಟೆಯೊಂದಿಗೆ ಫೋಟೋ ಶೇರ್​ ಮಾಡಿಕೊಂಡಿದ್ದು, ಇದು ಅಭಿಮಾನಿಗಳ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ತಾಯಿಯಾಗುವ ಖುಷಿಯಲ್ಲಿರುವ ರಾಧಿಕಾ ತಮ್ಮ ಈ ಪೋಸ್ಟ್​ನಲ್ಲಿ 'ಬೇಬಿ ಬಂಪ್' ಬಗ್ಗೆಯೂ ಬರೆದುಕೊಂಡಿದ್ದಾರೆ. ಈ ಫೋಟೋ ಶೇರ್​ ಮಾಡುತ್ತಿದ್ದಂತೆಯೇ ಶುಭಾಷಯಗಳ ಸುರಿಮಳೆಗೈದಿರುವ ಫ್ಯಾನ್ಸ್​ ಆರೋಗ್ಯ ಕಾಪಾಡಿಕೊಳ್ಳುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಪ್ಪನಾಗುತ್ತೇನೆಂಬ ಖುಷಿಯಲ್ಲಿರುವ ಯಶ್​ರವರ ಕೆಜಿಎಫ್​ ಸಿನಿಮಾಗೂ ಕಾತುರದಿಂದ ಕಾಯುತ್ತಿರುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ.

ಅದೇನಿದ್ದರೂ ನಿಶ್ಚಿತಾರ್ಥದ ಎರಡನೇ ವರ್ಷ ಪೂರೈಸುತ್ತಿರುವ ಈ ಸ್ಟಾರ್​ ಜೋಡಿಗೆ ವಿಭಿನ್ನವಾಗಿ ಖುಷಿ ನೀಡಿರುವುದಂತೂ ಸತ್ಯ. ಇನ್ನು ತಂದೆಯಾಗುತ್ತಿರುವ ಖುಷಿಯಲ್ಲಿರುವ ಯಶ್​ ಹಾಗೂ ಅಮ್ಮನಾಗಲು ಕಾಯುತ್ತಿರುವ ರಾಧಿಕಾ ಈ 'ರಾಮಾಚಾರಿ' ದಂಪತಿಗೆ ನ್ಯೂಸ್​ 18 ಕನ್ನಡದ ವತಿಯಿಂದಲೂ ಶುಭಾಷಯಗಳು.

ಇದನ್ನೂ ಓದಿ: ಯಶ್​-ರಾಧಿಕಾಗೆ ಮುಂದೆ ಇದೆ ಲಾಲಿ ಹಬ್ಬ!
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...