ಆಯ್ರಾಗೆ ಬಿಗ್​ ಗಿಫ್ಟ್​; ಉಡುಗೊರೆಗೆ ಅಭಿಮಾನಿಗಳು ಮಾತ್ರವಲ್ಲ ಯಶ್​ ಕುಟುಂಬವೂ ಫಿದಾ!

Ayra Yash: ಯಶ್​-ರಾಧಿಕಾ ದಂಪತಿಯ ಮಗುವಿಗೆ ಆಯ್ರಾ ಎಂದು ನಾಮಕರಣ ಮಾಡಲಾಗಿದೆ. ಈ ಉಡುಗೊರೆ ನೋಡಿ ಅಭಿಮಾನಿಗಳು ಮಾತ್ರವಲ್ಲ ಯಶ್​ ದಂಪತಿ ಫಿದಾ ಆಗಿದ್ದಾರೆ. ಅಷ್ಟಕ್ಕೂ ಏನು ಆ ಉಡುಗೊರೆ? ಈ ಸ್ಟೋರಿ ಓದಿ.

Rajesh Duggumane | news18
Updated:August 22, 2019, 12:57 PM IST
ಆಯ್ರಾಗೆ ಬಿಗ್​ ಗಿಫ್ಟ್​; ಉಡುಗೊರೆಗೆ ಅಭಿಮಾನಿಗಳು ಮಾತ್ರವಲ್ಲ ಯಶ್​ ಕುಟುಂಬವೂ ಫಿದಾ!
ಯಶ್​-ರಾಧಿಕಾ-ಆಯ್ರಾ
  • News18
  • Last Updated: August 22, 2019, 12:57 PM IST
  • Share this:
ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ಕುಟುಂಬಕ್ಕೆ ಆಯ್ರಾ ಆಗಮನವಾದ ಬೆನ್ನಲ್ಲೇ, ಈ ದಂಪತಿ ಅಭಿಮಾನಿಗಳಿಗೆ ಮತ್ತೊಂದು ಸರ್​ಪ್ರೈಸ್​ ನೀಡಿತ್ತು. ರಾಧಿಕಾ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದು ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಈಗ ಈ ದಂಪತಿಗೆ ಉಡುಗೊರೆಯುಂದು ಸಿಕ್ಕಿದೆ. ಅದು ರಾಧಿಕಾ ಮೇಕಪ್​ಮೆನ್​ ಪ್ರಶಾಂತ್​ ಅವರಿಂದ.

ಈ ಉಡುಗೊರೆ ನೋಡಿ ಅಭಿಮಾನಿಗಳು ಮಾತ್ರವಲ್ಲ ಯಶ್​ ದಂಪತಿ ಫಿದಾ ಆಗಿದ್ದಾರೆ. ಅಷ್ಟಕ್ಕೂ ಏನು ಆ ಉಡುಗೊರೆ? ಆಯ್ರಾಳ ಕೈ ಹಾಗೂ ಕಾಲಿನ ಅಚ್ಚಿನ ಕಲಾಕೃತಿ. ಈ ವಿಚಾರವನ್ನು ಯಶ್​ ಹಾಗೂ ರಾಧಿಕಾ ಪಂಡಿತ್​ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಯ್ರಾ ಹುಟ್ಟಿದ ಕೆಲವೇ ದಿನಗಳಲ್ಲಿ ಪ್ರಶಾಂತ್​ ಅವರ ಮನೆಗೆ ಆಗಮಿಸಿ ಆಯ್ರಾ ಕಾಲು ಹಾಗೂ ಕೈನ ಅಚ್ಚನ್ನು ಪಡೆದುಕೊಂಡು ಹೋಗಿದ್ದರಂತೆ. ಮಗುವಿನ ಚರ್ಮಕ್ಕೆ ತೊಂದರೆ ಉಂಟಾಗಬಾರದು ಎನ್ನುವ ಕಾರಣಕ್ಕೆ ಕಾಲು-ಕೈ ಅಚ್ಚನ್ನು ಪಡೆಯಲು ಅವರು ಸಂಪೂರ್ಣವಾಗಿ ಸಾವಯವ ಔಷಧ ಬಳಕೆ ಮಾಡಿದ್ದರು ಎನ್ನುವುದು ವಿಶೇಷ.ನಂತರ ಮೂರು ತಿಂಗಳ ಪರಿಶ್ರಮದಿಂದ ಪ್ರಶಾಂತ್​ ಇದನ್ನು ಸಿದ್ಧಪಡಿಸಿದ್ದಾರೆ. ಈ ಕಾಲು-ಕೈ ಕಲಾಕೃತಿಯ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ನನ್ನಪ್ಪ ಯಾರ್ ಗೊತ್ತಾ?’; ಸಿನಿಮಾ ಸ್ಟೈಲ್​ನಲ್ಲೇ ಆವಾಜ್ ಹಾಕಿದ ರಾಕಿಂಗ್​ ಸ್ಟಾರ್​ ಮಗಳು ಆಯ್ರಾ

ಇನ್ನು, ಈ ಬಗ್ಗೆ ಹೇಳುವಾಗ ಯಶ್​-ರಾಧಿಕಾ ಬಳಕೆ ಮಾಡಿದ್ದು ಆಂಗ್ಲ ಭಾಷೆ. ಈ ಬಗ್ಗೆ ಅನೇಕ ಅಭಿಮಾನಿಗಳು ಬೇಸರ ತೋಡಿಕೊಂಡಿದ್ದಾರೆ. ನೀವು ಈ ವಿಚಾರವನ್ನು ಕನ್ನಡದಲ್ಲಿಯೇ ಹೇಳಬಹುದಿತ್ತು ಎಂದು ಹೇಳಿಕೊಂಡಿದ್ದಾರೆ.ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ 'ಕೆ.ಜಿ.ಎಫ್ 2' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಾಖಿ ಭಾಯ್​ಗೆ ಟಕ್ಕರ್ ಕೊಡುವ ಅಧೀರನ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಿಟೌನ್ ನಟಿ ರವೀನಾ ಟಂಡನ್ ಸಹ ಬಣ್ಣ ಹಚ್ಚುತ್ತಿದ್ದಾರೆ. ಈ ವರ್ಷದಲ್ಲೇ ಸಿನಿಮಾ ತೆರೆಗೆ ತರುವ ಆಲೋಚನೆ ನಿರ್ದೇಶಕ ಪ್ರಶಾಂತ್​ ನೀಲ್​ ಅವರದ್ದು.

First published: August 22, 2019, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading