ಯಶ್​-ರಾಧಿಕಾಗೆ ಮುಂದೆ ಇದೆ ಲಾಲಿ ಹಬ್ಬ!

news18
Updated:July 25, 2018, 6:40 PM IST
ಯಶ್​-ರಾಧಿಕಾಗೆ ಮುಂದೆ ಇದೆ ಲಾಲಿ ಹಬ್ಬ!
ಯಶ್​-ರಾಧಿಕಾ
  • News18
  • Last Updated: July 25, 2018, 6:40 PM IST
  • Share this:
ನ್ಯೂಸ್​ 18 ಕನ್ನಡ 

ರಾಕಿಂಗ್ ಸ್ಟಾರ್ ಯಶ್ ದಿಲ್‍ಖುಷ್ ಆಗಿದ್ದಾರೆ, ಅವರಷ್ಟೇ ಅಲ್ಲ ಇಡೀ ಅವರ ಮನೆಮಂದಿ, ಸ್ನೇಹಿತರು, ರಾಧಿಕಾ ಪಂಡಿತ್ ಸಹ ಈಗ ಹೊಸ ಅತಿಥಿಯ ಆಗಮನಕ್ಕಾಗಿ ಖುಷಿಯಿಂದ ಕಾಯುತ್ತಿದ್ದಾರೆ. ಅದು ಬಹಳ ದೂರವೇನು ಇಲ್ಲ, ಇದೇ ವರ್ಷಾಂತ್ಯದಲ್ಲಿ ಯಶ್ ರಾಧಿಕಾ ಪಂಡಿತ್ ಅವರ ಮನೆಗೆ ಪುಟಾಣಿಯೊಂದು ಬರಲಿದೆ. ಅದು ಡಿಸೆಂಬರ್ ತಿಂಗಳಾದ್ದರಿಂದ, ಈ ತಿಂಗಳು ಯಶ್‍ಗೆ ಅಷ್ಟೊಂದು ಲಕ್ಕಿ ಯಾಕೆ ಅನ್ನೋದು ಇಡೀ ಗಾಂಧಿನಗರಕ್ಕೆ ಹುಟ್ಟಿಕೊಂಡಿರೊ ಕುತೂಹಲ.

ಇದು ಇವತ್ತು ಬೆಳ್ಳಂಬೆಳಿಗ್ಗೆ ರಾಧಿಕಾ ಪಂಡಿತ್ ಅವರು ಖುಷಿಯಿಂದ ಹಂಚಿಕೊಂಡ ಸುದ್ದಿ. ಫೇಸ್​ಬುಕ್​ ಓಪನ್ ಮಾಡಿದವರಿಗೆ ಒಂದೆಡೆ ಖುಷಿ ಮತ್ತೊಂದೆಡೆ ಅಚ್ಚರಿ. ಈ ಸುದ್ದಿ ಯಶ್ ಮನೆಯವರಿಗೆ ಹೊಸದಾಗಿರಲಿಲ್ಲವಾದರೂ, ತಮ್ಮವರಿಗೆ ಹಿತೈಷಿಗಳಿಗೆ ಈ ವಿಷಯವನ್ನ ಇವತ್ತು ತಿಳಿಸಬಹುದು ಅನ್ನೊ ಕಾತುರ ಇವತ್ತು ಯಶ್ ರಾಧಿಕಾ ಅವರ ಮನೆಯಲ್ಲಿತ್ತು. ಈ ಖುಷಿಯನ್ನ ಖುಷಿಯಾಗಿ ಮೊದಲು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದು ರಾಧಿಕಾ ಪಂಡಿತ್.


ಯಶ್ ಮತ್ತು ರಾಧಿಕಾ ಪಂಡಿತ್ ಸ್ಯಾಂಡಲ್​ವುಡ್‍ನ ಸ್ಟಾರ್ ಜೋಡಿಗಳು. ಈ ಸ್ಟಾರ್ ಜೋಡಿಗಳು ತಮ್ಮ ಹಲವು ವರ್ಷಗಳ ಪ್ರೀತಿ, ಪ್ರೇಮ ಗೆಳೆತನದ ಸಂಬಂಧಕ್ಕೆ ಪಟ್ಟ ಕಟ್ಟಿಕೊಂಡಿದ್ದು ಸಹ ಡಿಸೆಂಬರ್​ನಲ್ಲಿ. ಈ ಡಿಸೆಂಬರ್ ಅನ್ನೋದು ಯಶ್ ವೃತ್ತಿ ಬದುಕಿಗೆ ಮತ್ತು ಖಾಸಗಿ ಬದುಕಿಗೆ ತುಂಬಾನೆ ಹತ್ತಿರ ಮತ್ತು ಆಪ್ತಮಿತ್ರ ಎನ್ನಬಹುದು. ಡಿಸೆಂಬರ್​ನಲ್ಲಿ ಮದುವೆಯಾಗಿದಷ್ಟೇ ಅಲ್ಲ ಯಶ್ ವೃತ್ತಿಬದುಕಿಗೆ ದೊಡ್ಡ ತಿರುವು ಕೊಟ್ಟ 'ಮಿಸ್ಟರ್ & ಮಿಸ್ಸಸ್ ರಾಮಾಚಾರಿ' ರಿಲೀಸಾಗಿದ್ದು ಸಹ ಡಿಸೆಂಬರ್ ತಿಂಗಳಲ್ಲಿ ಅಂದರೆ ನಿಮಗೆ ಅಚ್ಚರಿಯಾಗಬಹುದು.

ಈಗಾಗಲೇ ಯಶ್ ಮನೆಯಲ್ಲಿ ಮತ್ತು ರಾಧಿಕಾ ಮನೆಯಲ್ಲಿ ಹೆಣ್ಣು ಮಗುವಾದರೆ ಈ ಹೆಸರು, ಗಂಡಾದರೆ ಇದೇ ಹೆಸರು ಅಂತ ಫಿಕ್ಸಾಗಿದ್ದಾರಂತೆ. ಹೌದು ಎಲ್ಲರ ಮನೆಗಳಲ್ಲೂ ಈ ರೀತಿಯಾದ ತಯಾರಿ ಇದ್ದೇ ಇರುತ್ತೆ. ಸಾಮಾನ್ಯರ ಮನೆಗಳಲ್ಲೇ ಹೀಗಾದರೆ ಸ್ಟಾರ್ಸ್ ಇರೊ ಈ ದೊಡ್ಡ ಕುಟುಂಬದಲ್ಲಿ ಇಂಥ ತಯಾರಿ ಇಲ್ಲದೇ ಇರುತ್ತಾ. ಆದರೆ ಫೈನಲ್ ಆಗೀರೊ ಹೆಸರಾದರೂ ಯಾವುದು ಅನ್ನೋದು ಮಾತ್ರ ಸದ್ಯಕ್ಕೆ ಯಾರಿಗೂ ಗೊತ್ತಾಗಿಲ್ಲ.

ರಾಧಿಕಾ ಅವರಿಗೀಗ 4 ತಿಂಗಳ ಬೆಳದಿಂಗಳು, ಇದು ಗೊತ್ತಿದ್ದರಿಂದಲೇ ಇಷ್ಟು ದಿನ ಅವರು ಯಾವುದೇ ಚಿತ್ರೀಕರಣವನ್ನು ಉಳಿಸಿಕೊಳ್ಳದೆ ಬೇಗ ಬೇಗ ತಮ್ಮ ಕೆಲಸ ಮಗಿಸಿಬಿಟ್ಟಿದ್ದಾರೆ. ಈ ವಿಷಯವನ್ನ ಇವತ್ತು ಎಲ್ಲರೊಂದಿಗೆ ಹಂಚಿಕೊಳ್ಳಬಹುದು ಅಂತ ಅನ್ನಿಸಿದ ತಕ್ಷಣ ಯಶ್ ಮೊದಲು ಫೋನ್ ಮಾಡಿದ್ದು ತಮ್ಮ ಆಪ್ತರಿಗೆ. ಆಪ್ತರಿಗೆ ಫೋನಾಯಿಸಿದ ಯಶ್ ನೇರವಾಗಿ ನಾನು ಅಪ್ಪನಾಗುತ್ತಿದ್ದೀನಿ ಕಣ್ರೊ ಅಂತ ಹೇಳಿಲ್ಲ, ಬದಲಿಗೆ ವೈಜಿಎಫ್ ಅಂದರೆ ಏನು ಹೇಳಿ ನೋಡೋಣ ಅಂದಿದ್ದಾರೆ. ಅದು ಯಾರಿಗೂ ಗೊತ್ತಾಗಿಲ್ಲ. ಕಡೆಗೆ ಅದರ ಅರ್ಥ `ಯಶ್ ಇಸ್ ಗೋಯಿಂಗ್ ಟುಬಿ ಎ ಫಾದರ್' ಅಂತ ಹೇಳಿದ್ದೇ, ಎಲ್ಲರೂ ಖುಷಿಯಾಗಿ ಯಶ್‍ಗೆ ವಿಶ್ ಮಾಡಿದ್ದಾರೆ. ಬಸವನಗುಡಿಯಲ್ಲಿ ನಡೆದ ಗಣೇಶನ ಉತ್ಸವದಲ್ಲಿ ಯಶ್ ಈ ಬಾರಿ ಭಾಗವಹಿಸಿದ್ದರು. ಆ ದೊಡ್ಡ ಕಾರ್ಯಕ್ರಮದಲ್ಲಿ ಯಶ್ ತಮ್ಮ ಭವಿಷ್ಯದ ಬಗ್ಗೆ ಸುಳಿವು ಕೊಟ್ಟಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ರಮೇಶ್ ಅರವಿಂದ್ ಅವರ ಕೋಟ್ಯಾಧಿಪತಿ ಶೋನಲ್ಲಿ ಯಶ್ ಅವರ ತಾಯಿ ಕೇಳಿದ ಪ್ರಶ್ನೆಗೂ ಯಶ್ ಪಾಸಿಟಿವ್ ಉತ್ತರದ ಜತೆಗೆ ಒಂಚೂರು ಸುಳಿವು ಕೊಟ್ಟಿದ್ದರು. ಆ ಎಲ್ಲ ಸುಳಿವುಗಳೂ ಈಗ ನಿಜವಾಗಿ ಎಲ್ಲರಲ್ಲೂ ಸಂತಸ ಮನೆಮಾಡಿದೆ.

ಮೊದಲು ಒಂದು ಖಾಸಗಿ ವಾಹಿನಿಯಲ್ಲಿ ಆದರ್ಶ ದಂಪತಿಗಳು ಅನ್ನೊ ಸುಂದರ ಕಾರ್ಯಕ್ರಮ ಬರುತ್ತಿತ್ತು. ಅದರ ಟೈಟಲ್‍ನಂತೆ ನಿಜಕ್ಕೂ ತಮ್ಮ ಖಾಸಗಿ ಬದುಕು ಮತ್ತು ಪ್ರೊಫೆಶನಲ್ ಬದುಕನ್ನ ಹೇಗೆ ಕಟ್ಟಿಕೊಳ್ಳಬೇಕೂ ಅನ್ನೋದನ್ನ ಈ ಜೋಡಿಗಳು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಯಶ್ ರಾಧಿಕಾರನ್ನ ನಿಜವಾದ ಆದರ್ಶ ದಂಪತಿಗಳು ಅನ್ನೊಬಹುದು.

 

 
First published: July 25, 2018, 12:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading