• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Yash- Radhika Dancing Video: ವೈರಲ್​ ಆಗುತ್ತಿದೆ ರಾಕಿಂಗ್​ ಗಂಡನ ತಾಳಕ್ಕೆ ಕುಣಿದ ರಾಧಿಕಾ ಪಂಡಿತ್ ವಿಡಿಯೋ​..!

Yash- Radhika Dancing Video: ವೈರಲ್​ ಆಗುತ್ತಿದೆ ರಾಕಿಂಗ್​ ಗಂಡನ ತಾಳಕ್ಕೆ ಕುಣಿದ ರಾಧಿಕಾ ಪಂಡಿತ್ ವಿಡಿಯೋ​..!

ಯಶ್​-ರಾಧಿಕಾ-ಆಯ್ರಾ

ಯಶ್​-ರಾಧಿಕಾ-ಆಯ್ರಾ

Yash- Radhika Dancing Video: ಕೇವಲ ತೆರೆ ಮೇಲೆ ರಾಕಿಂಗ್​ ಜೋಡಿ ಕುಣಿದು ಹಾಡಿದ್ದನ್ನು ನೋಡಿದ್ದೀರಿ. ಆದರೆ ಅವರು ನಿಜ ಜೀವನದಲ್ಲಿ 'ಕೆ.ಜಿ.ಎಫ್​' ಸಿನಿಮಾದ ಹಿಂದಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಇಲ್ಲಿದೆ ನೋಡಿ...

  • News18
  • 4-MIN READ
  • Last Updated :
  • Share this:

- ಅನಿತಾ ಈ, 

ಸ್ಯಾಂಡಲ್​ವುಡ್​ನ ರಾಕಿಂಗ್​ ದಂಪತಿ ರಾಧಿಕಾ ಹಾಗೂ ಯಶ್​ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ಗೊತ್ತೇ ಇದೆ. ಯಶ್​ 'ಕೆ.ಜಿ.ಎಫ್​ ಚಾಪ್ಟರ್​ 2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಕಿಂಗ್​ ಸ್ಟಾರ್​ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಹೆಂಡತಿ ಹಾಗೂ ಮಗುವಿನ ವಿಷಯ ಬಂದಾಗ ಅವರಿಗೂ ಸಮಯ ಕೊಡುತ್ತಾರೆ.

ಯಶ್​-ರಾಧಿಕಾರ ನಿಶ್ಚಿತಾರ್ಥವಾಗಿ ಇಂದಿಗೆ ಬರೋಬ್ಬರಿಗೆ ಎರಡು ವರ್ಷ. ಈ ಖುಷಿಯನ್ನು ರಾಕಿಂಗ್​ ದಂಪತಿ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಯಶ್​-ರಾಧಿಕಾ ಹಾಡೊಂದಕ್ಕೆ ಸಖತ್ ಸ್ಟೆಪ್​ ಹಾಕಿದ್ದು, ಆ ವಿಡಿಯೋ ಈಗ ವೈರಲ್​ ಆಗಿದೆ.




'ಕೆ.ಜಿ.ಎಫ್​ ಚಾಪ್ಟರ್​ 1'ರ ಹಿಂದಿ ಸಿನಿಮಾದ ಐಟಂ ಹಾಡು 'ಗಲಿ ಗಲಿ ಮೇ ಫಿರ್​ ತಾ ಹೂಂ' ಹಾಡಿಗೆ ಯಶ್​-ರಾಧಿಕಾ ಹೆಜ್ಜೆ ಹಾಕಿದ್ದಾರೆ. ಇಲ್ಲಿಯವರೆಗೆ ಕೇವಲ ಸಿನಿಮಾಗಳಲ್ಲಿ ಈ ಜೋಡಿ ಹೆಜ್ಜೆ ಹಾಕಿದ್ದನ್ನು ನೋಡಿದ್ದೀರಿ..! ಈಗ ಇವರು ತಮ್ಮ ನಿಶ್ಚಿತಾರ್ಥದ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಡಾನ್ಸ್​ ಮಾಡಿದ್ದಾರೆ.

ಇದನ್ನೂ ಓದಿ: ಲೀಕ್​ ಆಯ್ತು 'ಕೂಲಿ ನಂ 1' ಚಿತ್ರದಲ್ಲಿ ವರುಣ್-ಸಾರಾರ ಫಸ್ಟ್​ಲುಕ್​..!

ಗರ್ಭಿಣಿಯಾಗಿರುವ ರಾಧಿಕಾರನ್ನು ಅಪ್ಪಿಕೊಂಡು ಯಶ್​, ಸ್ಟೆಪ್​ ಹೇಳಿಕೊಟ್ಟಿದ್ದಾರೆ. ರಾಕಿಂಗ್​ ಸ್ಟಾರ್​ ಮಾಡಿಸಿರುವ ಡಾನ್ಸಿಂಗ್​ ವಿಡಿಯೋಗೆ ರಾಧಿಕಾ ಸಖತ್​ ಶೀರ್ಷಿಕೆ ಕೊಟ್ಟಿದ್ದಾರೆ. ಈಗಲೂ ನಾನು ನಿನ್ನ ತಾಳಕ್ಕೆ ಕುಣಿಯುತ್ತೇನೆ ಎಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋಗೆ ಶೀರ್ಷಿಕೆ ಕೊಟ್ಟಿದ್ದಾರೆ.

ಈ ವಿಡಿಯೋವನ್ನು ಅವರು ಪ್ರಕಟಿಸಿ ಕೇವಲ ಒಂದು ಗಂಟೆಯಾಗಿದ್ದು, ಅದಕ್ಕೆ ಒಂದು ಲಕ್ಷದ 48 ಸಾವಿರ ವೀಕ್ಷಣೆ ಸಿಕ್ಕಿದೆ. ಅಲ್ಲದೆ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Kajal Aggarwal: ಕ್ಯಾಮೆರಾಗೆ ಪೋಸ್​ ಕೊಟ್ಟ ಮುದ್ದು ಮುಖದ ಚೆಲುವೆ ಕಾಜಲ್​ ಅಗರ್ವಾಲ್​..!

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು