ಕೋಲಾರ ಬಿಟ್ಟು ಹೈದರಾಬಾದ್​​ಗೆ ತೆರಳಿದ ಕೆ.ಜಿ.ಎಫ್​-2 ಚಿತ್ರತಂಡ..!

ಕೆ.ಜಿ.ಎಫ್-2 ಚಿತ್ರತಂಡ ​ಕೋಲಾರದ ಸೈನಡ್​ ಗುಡ್ಡದ ಮೇಲೆ ಸಿನಿಮಾ ಚಿತ್ರಿಕರಣ ಮಾಡಲಾಗುತ್ತಿತ್ತು. ಚಿತ್ರದ ಶೂಟಿಂಗ್​ಗಾಗಿ ಬೃಹತ್​ ಗಾತ್ರದ ಸೆಟ್​ಗಳನ್ನು ನಿರ್ಮಿಸಲಾಗಿತ್ತು.

Harshith AS | news18-kannada
Updated:September 5, 2019, 11:06 AM IST
ಕೋಲಾರ ಬಿಟ್ಟು ಹೈದರಾಬಾದ್​​ಗೆ ತೆರಳಿದ ಕೆ.ಜಿ.ಎಫ್​-2 ಚಿತ್ರತಂಡ..!
KGF Chapter 2
  • Share this:
ಯಶ್​ ಅಭಿನಯದ ‘ಕೆ.ಜಿ.ಎಫ್​ ಚಾಪ್ಟರ್​-2‘ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಎರಡನೇ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ಹೈದರಾಬಾದ್​​ಗೆ ಶಿಫ್ಟ್ ಆಗಿದೆ.

ಕನ್ನಡ ಗೋಲ್ಡನ್​ ಸಿನಿಮಾ ಎಂದು ಕರೆಸಿಕೊಂಡಿದ್ದ ಕೆ.ಜಿ.ಎಫ್​ ಕಳೆದ ವರ್ಷ ಗಲ್ಲಾ ಪಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. ‘ಕೆ.ಜಿ.ಎಫ್​ ಚಾಪ್ಟರ್​ -2‘ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತವಾಗಿದೆ. ಕೇವಲ ಒಂದು ದಿನದ ಚಿತ್ರೀಕರಣ ಬಾಕಿ ಇದ್ದಾಗ ಜೆಎಂಎಫ್​ಸಿ ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿತ್ತು. ಇದೀಗ 2ನೇ ಶೆಡ್ಯೂಲ್​ ಚಿತ್ರೀಕರಣ ಪೂರ್ಣಗೊಳಿಸಲು ಕೆ.ಜಿ.ಎಫ್​ ತಂಡ ಹೈದರಾಬಾದ್​ಗೆ ತೆರಳಿದೆ.

‘ಕೆ.ಜಿ.ಎಫ್-2‘ ಚಿತ್ರತಂಡ ​ಕೋಲಾರದ ಸೈನಡ್​ ಗುಡ್ಡದ ಮೇಲೆ ಸಿನಿಮಾ ಚಿತ್ರಿಕರಣ ಮಾಡಲಾಗುತ್ತಿತ್ತು. ಚಿತ್ರದ ಶೂಟಿಂಗ್​ಗಾಗಿ ಬೃಹತ್​ ಗಾತ್ರದ ಸೆಟ್​ಗಳನ್ನು ನಿರ್ಮಿಸಲಾಗಿತ್ತು. ಆದರೆ, ಇತ್ತೀಚೆಗೆ ಸುರಿದ ಭಾರೀ ಮಳೆಗೆ ಶೂಟಿಂಗ್​ಗಾಗಿ ನಿರ್ಮಿಸಲಾಗಿದ್ದ ಸೆಟ್​ ನಾಶವಾಗಿದೆ. ಇದರಿಂದಾಗಿ ಅಲ್ಲಿನ ಗಿಡ, ಮರಗಳಿಗೆ ಹಾನಿಯಾಗಿದ್ದು, ಆ ಭಾಗದ ಜನರಿಗೆ ತೊಂದರೆಯುಂಟಾಗಿದೆ ಎಂದು ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ್ಯ ಶ್ರೀನಿವಾಸ್ ಸಿವಿಲ್​ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಆದರೆ ‘ಪರಿಸರ ಮಾಲಿನ್ಯವಾಗುತ್ತಿಲ್ಲ, ಸೈನೇಡ್ ದಿಬ್ಬಗಳಿಗೆ ಯಾವುದೇ ಹಾನಿಯಾಗುತ್ತಿಲ್ಲ, ದೂರಿನ ವಿರುದ್ಧ ಕಾನೂನುಬದ್ಧವಾಗಿ ಹೋರಾಡುತ್ತೇವೆ‘ ಎಂದು ‘ಕೆ.ಜಿ.ಎಫ್‘ ವಿತರಕ ಕಾರ್ತೀಕ್ ಗೌಡ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಬಿಜೆಪಿ ಸೇಡಿನ ರಾಜಕೀಯಕ್ಕೆ ಡಿಕೆ ಶಿವಕುಮಾರ್ ಬಲಿಯಾಗಿದ್ದಾರೆ; ಅಣ್ಣನ ಪರಿಸ್ಥಿತಿ ಕಂಡು ಡಿಕೆ ಸುರೇಶ್​ ಕಣ್ಣೀರಿನ ನುಡಿ

ಮತ್ತೊಮ್ಮೆ ಗಲ್ಲಾ ಪೆಟ್ಟಿಗೆಯನ್ನು ಧೂಳಿಪಟ ಮಾಡಲು ‘ಕೆ.ಜಿ.ಎಫ್​ 2‘ ಚಿತ್ರತಂಡ ಹೈದರಾಬಾದ್​ನಲ್ಲಿ ಬೀಡು ಬಿಟ್ಟಿದ್ದು, ಮೊದಲ ಭಾಗಕ್ಕಿಂತ ಹೆಚ್ಚಿನ ಸಾಹಸ ದೃಶ್ಯಗಳು ಇರಲಿವೆಯಂತೆ. ಕೆ.ಜಿ.ಎಫ್​ ಭಾಗ-1 ರಲ್ಲಿ  ರಾಕಿಭಾಯ್​ ಗರುಡನನ್ನು ಮುಗಿಸಿದ ಮೇಲೆ ಏನೆಲ್ಲಾ ಆಗುತ್ತದೆ ಎಂಬ ಕುತೂಹಲತೆಗಳು ಸಿನಿ ಪ್ರೇಕ್ಷಕರನ್ನು ಕಾಡುತ್ತಿದೆ. ಇದರ ಜೊತೆಯಾಗಿ ಬಾಲಿವುಡ್​ ಖ್ಯಾತ ನಟ ಸಂಜಯ್​ ದತ್ ಅವರ ಅಧೀರನ ಪಾತ್ರದ ಕುರಿತ ನಿರೀಕ್ಷೆ ಹೆಚ್ಚಾಗಿವೆ.

ಇನ್ನು ‘ಕೆ.ಜಿ.ಎಫ್​-1‘ ರಲ್ಲಿ ಕಾಣಿಸಿಕೊಂಡತೆ ಯಶ್​ ಜೊತೆಯಾಗಿ ಶ್ರೀನಿಧಿ ಶೆಟ್ಟಿ ಇರಲಿದ್ದಾರೆ. ಅಚ್ಚುತ್ ಕುಮಾರ್​, ಅನಂತ್​ನಾಗ್​ ತಾರಾಗಣದಲ್ಲಿದ್ದಾರೆ. ರವಿ ಬಸ್ರೂರ್ ಅವರ ಸಂಗೀತ ಮತ್ತೊಮ್ಮೆ ಪ್ರೇಕ್ಷಕರನ್ನ ಆನಂದಿಸಲಿದೆ.
First published: September 4, 2019, 10:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading