KGF Chapter 2: ಮಂಗಳೂರು ಸೇರಿಕೊಂಡ ಯಶ್​: ಕಡಲ ಕಿನಾರೆಯಲ್ಲಿ ನಿಂತ ರಾಕಿ ಭಾಯ್​ ಕೆಜಿಎಫ್​ 2 ಬಗ್ಗೆ ಹೇಳಿದ್ದೇನು..!

Yash: ಲಾಕ್​ಡೌನ್​ ಅನ್​ಲಾಕ್​ ಆಗುತ್ತಿದ್ದಂತೆಯೇ ಮೊದಲ ಶೆಡ್ಯೂಲ್​ನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಇದರಲ್ಲಿ ಮಾಳವೀಕಾ ಹಾಗೂ ಪ್ರಕಾಶ್​ ರೈ ಭಾಗಿಯಾಗಿದ್ದರು. ಅದು ಮುಗಿಯುತ್ತಿದ್ದಂತೆಯೇ ಈಗ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.

ಮಂಗಳೂರಿನಲ್ಲಿ ಯಶ್​

ಮಂಗಳೂರಿನಲ್ಲಿ ಯಶ್​

  • Share this:
ಸ್ಯಾಂಡಲ್​ವುಡ್​ನತ್ತ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್​ ಚಾಪ್ಟರ್​ 1. ಐದು ಭಾಷೆಗಳಲ್ಲಿ ತೆರೆಕಂಡು ಹೊಸ ದಾಖಲೆ ನಿರ್ಮಿಸಿದ ಈ ಸಿನಿಮಾದ ಎರಡನೇ ಭಾಗಕ್ಕಾಗಿ ಸಿನಿಪ್ರಿಯರು ಕಾತರರಾಗಿ ಕಾಯುತ್ತಿದ್ದಾರೆ. ಲಾಕ್​ಡೌನ್​ ಆರಂಭದಲ್ಲಿ ಈ ಸಿನಿಮಾ ಬಗ್ಗೆ ಅಪ್ಡೇಟ್​ ಕೊಡುವಂತೆ  ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಅದಕ್ಕೆ ತಕ್ಕಂತೆ ನಿರ್ದೇಶಕ ಪ್ರಶಾಂತ್ ನೀಲ್​ ಆಗಾಗ ಕೆಲವೊಂದು ಪೋಸ್ಟ್​ ಮಾಡುವ ಮೂಲಕ ಯಶ್​ ಅಭಿಮಾನಿಗಳನ್ನು ಸಮಾಧಾನ ಮಾಡುತ್ತಿದ್ದರು. ಆದರೆ, ಲಾಕ್​ಡೌನ್​ ಅನ್​ಲಾಕ್​ ಆಗುತ್ತಿದ್ದಂತೆಯೇ ಪ್ರಶಾಂತ್​ ನೀಲ್​ ಅವರು ಕೆಜಿಎಫ್​ ಚಾಪ್ಟರ್ ಸಿನಿಮಾದ ಕುರಿತಾಗಿ ಕೊಟ್ಟ ಅಪ್ಡೇಟ್​  ವಿವಾದಕ್ಕೀಡಾಗಿತ್ತು. ಅದು ಪ್ರಕಾಶ್​ ರೈ ಅವರನ್ನುಚಾಪ್ಟರ್​ 2 ಭಾಗವನ್ನಾಗಿಸಿಕೊಂಡಿದ್ದು. ಆಗಲೇ ಕೆಜಿಎಫ್​ 2 ಚಿತ್ರವನ್ನು ಬಹಿಷ್ಕರಿಸಿ ಎಂದು ನೆಟ್ಟಿಗರು ಪೋಸ್ಟ್ ಮಾಡಲಾರಂಭಿಸಿದ್ದರು. ಕೆಲ ಸಮಯದ ನಂತರ ಇದು ತಣ್ಣಗಾಯಿತು. ಈಗ ಈ ಸಿನಿಮಾ ಚಿತ್ರೀಕರಣ ಮತ್ತೆ ಆರಂಭವಾಗಿದೆ. 

ಲಾಕ್​ಡೌನ್​ ಅನ್​ಲಾಕ್​ ಆಗುತ್ತಿದ್ದಂತೆಯೇ ಮೊದಲ ಶೆಡ್ಯೂಲ್​ನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಇದರಲ್ಲಿ ಮಾಳವೀಕಾ ಹಾಗೂ ಪ್ರಕಾಶ್​ ರೈ ಭಾಗಿಯಾಗಿದ್ದರು. ಅದು ಮುಗಿಯುತ್ತಿದ್ದಂತೆಯೇ ಈಗ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.

Yash, KGF-2, Yash and Srinidhi Shetty resume shoot, KGF-2 shooting start, KGF-2 shooting in mangalore, Prashanth Neel, ಯಶ್, ಕೆಜಿಎಫ್-2, ಚಿತ್ರೀಕರಣಕ್ಕೆ ಹೊರಟ ಯಶ್, ಶ್ರೀನಿಧಿ ಶೆಟ್ಟಿ ಮತ್ತು ಪ್ರಶಾಂತ್ ನೀಲ್, ಮಂಗಳೂರಿನಲ್ಲಿ ಕೆಜಿಎಪ್-2 ಚಿತ್ರೀಕರಣ, ಕೆಜಿಎಫ್-2 ಚಿತ್ರೀಕರಣ ಪ್ರಾರಂಭ, ಪ್ರಶಾಂತ್ ನೀಲ್, Prashanth Neel and Shrinidhi Shetty gave update on KGF 2 movie shooting
ಪ್ರಶಾಂತ್ ನೀಲ್ ಹಾಗೂ ಶ್ರೀನಿಧಿ ಶೆಟ್ಟಿ


ಅದಕ್ಕಾಗಿ ನಿರ್ದೇಶಕ ಪ್ರಶಾಂತ್​ ನೀಲ್​ ಹಾಗೂ ನಾಯಕಿ ಶ್ರೀನಿಧಿ ಶೆಟ್ಟಿ ಮಂಗಳೂರಿಗೆ ಹಾರಿದ್ದಾರೆ. ಅದರ ಬಗ್ಗೆ ನಿರ್ದೇಶಕ ಹಾಗೂ ಶ್ರೀನಿಧಿ ಶೆಟ್ಟಿ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಪೋಸ್ಟ್​ ಮಾಡಿದ್ದರು. ಈ ಬಗ್ಗೆ ಬೆಳಿಗ್ಗೆ ಅಷ್ಟೆ ನಾವು ವರದಿ ಮಾಡಿದ್ದೆವು.

ಇದನ್ನೂ ಓದಿ: KGF 2 Shooting: ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ಚಿತ್ರೀಕರಣದ ಬಗ್ಗೆ ಅಪ್ಡೇಟ್​ ಕೊಟ್ಟ ಪ್ರಶಾಂತ್​ ನೀಲ್​..!

ಈಗ ಸಿನಿಮಾದ ನಾಯಕ ರಾಕಿಂಗ್​ ಸ್ಟಾರ್ ಯಶ್​ ಮಂಗಳೂರು ಸೇರಿಕೊಂಡಿದ್ದಾರೆ. ಕಡಲ ಕಿನಾರೆಯಲ್ಲಿ ನಿಂತಿರುವ ಸಖತ್​ ಸ್ಟೈಲಿಶ್​ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ನಿಂತಿರುವ ರೀತಿ ನೋಡಿದರೆ, ಕೆಜಿಎಫ್​ ಸಿನಿಮಾದಲ್ಲಿ ಬರುವ ಒಂದು ದೃಶ್ಯ ನೆನಪಿಗೆ ಬರುತ್ತದೆ. ಮುಂಬೈಗೆ ಕಾಲಿಡುವ ಬಾಲಕ ಕಡಲ ಕಿನಾರಿಯಲ್ಲಿ ನಿಂತಿರುವ ದೃಶ್ಯ.
View this post on Instagram

Waves can't be stopped but you can learn to sail.. After a long break.. Rocky sets sail from today.


A post shared by Yash (@thenameisyash) on


ತಮ್ಮ ಫೋಟೋ ಜೊತೆಗೆ ಸಿನಿಮಾ ಚಿತ್ರೀಕರಣ ಆರಂಭವಾಗಿರುವ ಬಗ್ಗೆ ಪಂಚಿಂಗ್​ ಲೈನ್​ಗಳನ್ನೂ ಬರೆದುಕೊಂಡಿದ್ದಾರೆ. ಅಲೆಗಳನ್ನು ತಡೆಯಲಾಗುವುದಿಲ್ಲ. ಆದರೆ ನೀನು ತೇಲುವುದನ್ನು ಕಲಿಯಬಹುದು. ದೊಡ್ಡ ವಿರಾಮದ ನಂತರ ರಾಕಿ ಸೆಟ್​ ತಮ್ಮ ಇಂದಿನಿಂದ ತೇಲಲಾರಂಭಿಸಿದೆ ಎಂದು ಸಿನಿಮಾ ಶೂಟಿಂಗ್ ಆರಂಭವಾಗಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
Published by:Anitha E
First published: