HOME » NEWS » Entertainment » YASH IS GOING TO START YASHO YAATRE WITH KGF MOVIE TEAM AND HE WILL BE VISITING YOUR PLACES VERY SOON

ರಾಜ್ಯದಾದ್ಯಂತ ರಾಕಿಂಗ್​ ಸ್ಟಾರ್​ ಯಶೋಯಾತ್ರೆ: ಹುಟ್ಟುಹಬ್ಬ ಆಚರಣೆ ಬೇಡ ಎಂದ ಯಶ್​..!

ಕೆ.ಜಿ.ಎಫ್​ ಸಿನಿಮಾದ ಯಶಸ್ಸನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ಯಶ್​ ಸೇರಿದಂತೆ ಇಡೀ ಸಿನಿ ತಂಡ ರಾಜ್ಯಾದ್ಯಂತ ಯಶೋಯಾತ್ರೆ ಮಾಡಲಿದ್ದಾರೆ.

Anitha E | news18
Updated:January 6, 2019, 5:36 PM IST
ರಾಜ್ಯದಾದ್ಯಂತ ರಾಕಿಂಗ್​ ಸ್ಟಾರ್​ ಯಶೋಯಾತ್ರೆ: ಹುಟ್ಟುಹಬ್ಬ ಆಚರಣೆ ಬೇಡ ಎಂದ ಯಶ್​..!
ಕೆ.ಜಿ.ಎಫ್​ ಸಿನಿಮಾದ ಯಶಸ್ಸನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ಯಶ್​ ಸೇರಿದಂತೆ ಇಡೀ ಸಿನಿ ತಂಡ ರಾಜ್ಯಾದ್ಯಂತ ಯಶೋಯಾತ್ರೆ ಮಾಡಲಿದ್ದಾರೆ.
  • News18
  • Last Updated: January 6, 2019, 5:36 PM IST
  • Share this:
-ಅನಿತಾ .ಈ,

ಒಂದು ಕಡೆ ಅಂಬಿಯ ಅಗಲಿಕೆ... ಮತ್ತೊಂದು ಕಡೆ ಐಟಿ ದಾಳಿ... ಇವೆರೆಡರ ನಡುವೆ 'ಕೆ.ಜಿ.ಎಫ್​' ಸಿನಿಮಾದ ಯಶಸ್ಸು.... ಜತೆಗೆ ಈಗ ಯಶ್​ ಹುಟ್ಟುಹಬ್ಬ....

ಅಂಬಿಯ ಅಗಲಿಕೆಯ ನೋವಿನಲ್ಲಿರುವ ಯಶ್​ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಅಲ್ಲದೆ ಎಲ್ಲೂ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆಕೆ ನಿತ್ಯ ಸುಮಂಗಲಿ: 11 ಗಂಡಂದಿರು...ಲೆಕ್ಕವಿಲ್ಲದಷ್ಟು ಬಾಯ್​ಫ್ರೆಂಡ್ಸ್ ಜತೆ ಪ್ರೇಮದಾಟ​...!

ಬಹಳ ದಿನಗಳ ನಂತರ ಅಭಿಮಾನಿಗಳಿಗಾಗಿ ವಿಡಿಯೋದಲ್ಲಿ ಮಾತನಾಡಿರುವ ಯಶ್​ ತಮ್ಮ ಹುಟುಹಬ್ಬ ಆಚರಿಸದಂತೆ ಮನವಿ ಮಾಡಿದ್ದಾರೆ.ಅಲ್ಲದೆ ವಿಶ್ವದಾದ್ಯಂತ 'ಕೆ.ಜಿ.ಎಫ್​' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ದಾಖಲೆಗಳನ್ನು ಮಾಡುತ್ತಿದ್ದೆ. ಅದಕ್ಕೆ ಪ್ರೇಕ್ಷಕರಿಗೆ ವಂದನೆ ಸಲ್ಲಿಸಿದ್ದಾರೆ. ಅಲ್ಲದೆ ಹುಟ್ಟುಹಬ್ಬ ಆಚರಿಸಿದ್ದರೇನಂತೆ ತಾವೇ ಖುದ್ದು ಅಭಿಮಾನಿಗಳಿರುವ ಊರುಗಳಿಗೆ 'ಯಶೋಯಾತ್ರೆ' ಮಾಡುವುದಾಗಿ ಹೇಳಿದ್ದಾರೆ.

ಹೌದು, 'ಕೆ.ಜಿ.ಎಫ್​' ಸಿನಿಮಾದ ಯಶಸ್ಸನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ಯಶ್​ ಸೇರಿದಂತೆ ಇಡೀ ಸಿನಿ ತಂಡ ರಾಜ್ಯಾದ್ಯಂತ 'ಯಶೋಯಾತ್ರೆ' ಮಾಡಲಿದ್ದಾರೆ. ಈ ಮೂಲಕ ನೆಚ್ಚಿನ ನಟ ಹಾಗೂ 'ಕೆ.ಜಿ,ಎಫ್​' ಸಿನಿ ತಂಡವನ್ನು ಭೇಟಿ ಮಾಡುವ ಅವಕಾಶ ಅಭಿಮಾನಿಗಳದ್ದಾಗಲಿದೆ. ಇಲ್ಲಿದೆ ನೋಡಿ ಯಶ್​ ಮಾತನಾಡಿರುವ ವಿಡಿಯೋ...

First published: January 6, 2019, 5:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories