KGF Chapter 2: ಕೆ.ಜಿ.ಎಫ್. ನಂತರ ತೆಲುಗಿನ ಸ್ಟಾರ್​ ನಿರ್ದೇಶಕನೊಂದಿಗೆ ಕೆಲಸ ಮಾಡಲಿರುವ ರಾಕಿಂಗ್​ ಸ್ಟಾರ್​ ಯಶ್​..!

KGF Chapter 2: ಸದ್ಯ ಪ್ರಶಾಂತ್​ ನೀಲ್​ ನಿರ್ದೇಶನದ ಕೆ.ಜಿ.ಎಫ್​ ಚಾಪ್ಟರ್​ 2 ಸಿನಿಮಾದ ಚಿತ್ರೀಕರಣದಲ್ಲಿರುವ ರಾಕಿಭಾಯ್ ಮತ್ತೊಂದು ಸಿನಿಮಾಗೆ ಸಹಿ ಮಾಡುವ ಹುಮ್ಮಸ್ಸಿನಲ್ಲಿದ್ದಾರಂತೆ.  ಅದರಲ್ಲೂ ಟಾಲಿವುಡ್​ನ ಸ್ಟಾರ್ ನಿರ್ದೇಶಕನೊಂದಿಗೆ ಅನ್ನೋ ಸುದ್ದಿ ಈಗ ಗಾಂಧಿನಗರ ಹಾಗೂ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

Anitha E | news18
Updated:August 1, 2019, 1:04 PM IST
KGF Chapter 2: ಕೆ.ಜಿ.ಎಫ್. ನಂತರ ತೆಲುಗಿನ ಸ್ಟಾರ್​ ನಿರ್ದೇಶಕನೊಂದಿಗೆ ಕೆಲಸ ಮಾಡಲಿರುವ ರಾಕಿಂಗ್​ ಸ್ಟಾರ್​ ಯಶ್​..!
ನಿರ್ದೇಶಕ ಪೂರಿ ಜಗನ್ನಾಥ್​ ಹಾಗೂ ರಾಕಿಂಗ್​ ಸ್ಟಾರ್​ ಯಶ್​
  • News18
  • Last Updated: August 1, 2019, 1:04 PM IST
  • Share this:
- ಅನಿತಾ ಈ, 

'ಕೆ.ಜಿ.ಎಫ್ ಚಾಪ್ಟರ್-2' ನಂತರ ಯಶ್​ ಯಾವ ಸಿನಿಮಾ ಮಾಡಲಿದ್ದಾರೆ ಅನ್ನೋದು ಅವರ ಅಭಿಮಾನಿಗಳಲ್ಲಿರುವ ಪ್ರಶ್ನೆ? ಅದರಲ್ಲೂ ಅವರು 'ಕೆ.ಜೆ.ಎಫ್'​ ಚಿತ್ರೀಕರಣ ಆರಂಭವಾದಾಗಿನಿಂದ ಯಾವ ಸಿನಿಮಾಗಳಲ್ಲೂ ಅಭಿನಯಿಸಿಲ್ಲ. ಆದರೆ 'ಕೆ.ಜಿ.ಎಫ್​' ಚಿತ್ರದ ಮೊದಲ ಭಾಗದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಯಶ್​ 'ಮೈ ನೇಮ್​ ಇಸ್​ ಕಿರಾತಕ' ಸಿನಿಮಾದ ಚಿತ್ರೀಕರಣದ ಮುಹೂರ್ತದಲ್ಲಿ ಭಾಗಿಯಾಗಿದ್ದರು.

ಇದೇ ಚಿತ್ರತಂಡವೇ ಅವರು ವರ್ಷಗಳ ಕಾಲ ತೆಗೆಯದೇ ಉಳಿಸಿಕೊಂಡಿದ್ದ ಗಡ್ಡಕ್ಕೆ ಕತ್ತರಿ ಹಾಕಿ, ಯಶ್​ಗೆ ಕಿರಾತಕನ ನ್ಯೂ ಲುಕ್​ ಕೊಟ್ಟಿತ್ತು. ಅದಕ್ಕಾಗಿ ರಾಕಿಂಗ್​ ಸ್ಟಾರ್​ ತಮ್ಮ ಇಡೀ ಸ್ಟೈಲ್​ ಅನ್ನೇ ಬದಲಾಯಿಸಿಕೊಂಡು, ಮುಹೂರ್ತದ ಚಿತ್ರವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಇದಾದ ಕೆಲ ದಿನಗಳ ನಂತರ ಯಶ್​ ಈ ಸಿನಿಮಾದಿಂದ ಹೊರ ಬಂದಿರುವುದಾಗಿ ಸುದ್ದಿ ಹರಿದಾಡಿತ್ತು. ಅದಕ್ಕೂ ರಾಕಿಂಗ್​ ಸ್ಟಾರ್​ ಸ್ಪಷ್ಟನೆ ನೀಡಿದ್ದರು.

Yash in My name is Kiraataka Movie
'ಮೈ ನೇಮ್​ ಇಸ್​ ಕಿರಾತಕ' ಅಡ್ಡದಲ್ಲಿ ಯಶ್​


Yash in My name is Kiraataka Movie
'ಮೈ ನೇಮ್​ ಇಸ್​ ಕಿರಾತಕ' ಸಿನಿಮಾದ ಮುಹೂರ್ತದಲ್ಲಿ ಯಶ್​


'ನಾನು ಇನ್ನೂ ಈ ಚಿತ್ರದಲ್ಲಿದ್ದೇನೆ. ಆದರೆ 'ಕೆ.ಜಿ.ಎಫ್​ ಚಾಪ್ಟರ್​ 2' ಸಿನಿಮಾಗೆ ನನ್ನ ಮೊದಲ ಆದ್ಯತೆ. ಇದಾದ ನಂತರ ಮತ್ತೆ ಈ ಚಿತ್ರವನ್ನು ಮಾಡುವುದಾಗಿ' ಯಶ್​ ತಿಳಿಸಿದ್ದರು.

ಸದ್ಯ ಪ್ರಶಾಂತ್​ ನೀಲ್​ ನಿರ್ದೇಶನದ 'ಕೆ.ಜಿ.ಎಫ್​ ಚಾಪ್ಟರ್​ 2' ಸಿನಿಮಾದ ಚಿತ್ರೀಕರಣದಲ್ಲಿರುವ ರಾಕಿಭಾಯ್ ಮತ್ತೊಂದು ಸಿನಿಮಾಗೆ ಸಹಿ ಮಾಡುವ ಹುಮ್ಮಸ್ಸಿನಲ್ಲಿದ್ದಾರಂತೆ.  ಅದರಲ್ಲೂ ಟಾಲಿವುಡ್​ನ ಸ್ಟಾರ್ ನಿರ್ದೇಶಕನೊಂದಿಗೆ ಅನ್ನೋ ಸುದ್ದಿ ಈಗ ಗಾಂಧಿನಗರ ಹಾಗೂ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.ಇದನ್ನೂ ಓದಿ: KGF Chapter 2: ಅಧೀರ... ಅವೆಂಜರ್ಸ್​: ಎಂಡ್​ ಗೇಮ್​ನ ಥ್ಯಾನೋಸ್​ ಅಷ್ಟೇ ಪವರ್​ಫುಲ್​ ಪಾತ್ರವಂತೆ..!

ಟಾಲಿವುಡ್‍ನಲ್ಲಿ ಹಿಟ್ ಸಿನಿಮಾಗಳನ್ನು ನೀಡಿರುವ  ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರೊಂದಿಗೆ ರಾಕಿಭಾಯ್​ ಕೆಲಸ ಮಾಡೋಕೆ ಒಪ್ಪಿಗೆ ಕೊಟ್ಟಿದ್ದಾರಂತೆ.  ಇವರ ನಡುವೆ ಎರಡು ಸುತ್ತಿನ ಮಾತುಕತೆಯೂ ನಡೆದಿದ್ದು, ಯಶ್​  ಸಿನಿಮಾಗೆ ಹಸಿರು ನಿಶಾನೆ ತೋರಿದ್ದಾರಂತೆ.

ಎಲ್ಲದಕ್ಕೂ ವಿಶೇಷ ಅಂದರೆ ಯಶ್​ ಹಾಗೂ ಪೂರಿ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಾಣಲಿದೆಯಂತೆ. ಅಂದರೆ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳದಲ್ಲೂ ಇದನ್ನು ಡಬ್​ ಮಾಡುವ ಯೋಜನೆ ಇದೆಯಂತೆ.

'ಕೆ.ಜಿ.ಎಫ್​' ನಂತರ ಯಶ್​ ಈಗ ನ್ಯಾಷನಲ್​ ಸ್ಟಾರ್​ ಭಾರತದ ಪ್ರಮುಖ ಭಾಷೆಗಳಲ್ಲಿ ಯಶ್​ ಅವರ ಪರಿಚಯವಿದೆ. ಇದೇ ಕಾರಣಕ್ಕೆ ಈಗ ಪೂರಿ ಜಗನ್ನಾಥ್​ ಯಶ್​ ಅವರೊಂದಿಗೆ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ತೆಲುಗುನಲ್ಲಿ ಚಿತ್ರೀಕರಣಗೊಳ್ಳಲಿದ್ದು, ಉಳಿದ ಭಾಷೆಗಳಿಗೆ ಡಬ್​ ಆಗಲಿದೆಯಂತೆ.

Puri Jagannadh's Jana gana mana movie
ಪೂರಿ ಜಗನ್ನಾಥ್ ನಿರ್ದೇಶನದ 'ಜನಗಣಮನ' ಸಿನಿಮಾದಲ್ಲಿ ಮಹೇಶ್​ ಬಾಬು


ಪ್ರಿನ್ಸ್​ ಮಹೇಶ್ ಬಾಬು ನಟಿಸಬೇಕಿದ್ದ `ಜನಗಣಮನ' ಸಿನಿಮಾಗೆ ಪೂರಿ ಈಗ ಯಶ್​ ಅವರೊಂದಿಗೆ ಮಾತುಕತೆ ನಡೆಸಿದ್ದಾರಂತೆ. ಮಹೇಶ್ ಬಾಬು ಅವರಿಗಾಗಿಯೇ ಈ ಚಿತ್ರದ ಟೈಟಲ್ ಕೂಡ ಸಿದ್ಧಪಡಿಸಲಾಗಿತ್ತು.  ಇತ್ತೀಚೆಗೆ 'ಇಸ್ಮಾರ್ಟ್ ಶಂಕರ್' ಚಿತ್ರದ ಮೂಲಕ ಸದ್ದು ಮಾಡುತ್ತಿರುವ ಪೂರಿ ಜಗನ್ನಾಥ್ ಸದ್ಯ, 'ಡಬಲ್ ಇಸ್ಮಾರ್ಟ್ ಶಂಕರ್' ಸಿನಿಮಾ ಮಾಡುತ್ತಿದ್ದಾರಂತೆ.

ಇದನ್ನೂ ಓದಿ: RX100: ಇಷ್ಟಪಟ್ಟ ಹುಡುಗಿಗಾಗಿ ತಲೆ ಬೋಳಿಸಿಕೊಂಡಿದ್ದರಂತೆ ಆರ್​ಎಕ್ಸ್​100 ನಾಯಕ ಕಾರ್ತಿಕೇಯ

ಈಗಾಗಲೇ 'ಡಬಲ್ ಇಸ್ಮಾರ್ಟ್ ಶಂಕರ್' ಚಿತ್ರದ ಕತೆ ಮೇಲೆ ಕೆಲಸ ಮಾಡಲಾಗುತ್ತಿದ್ದು, ಅದರ ಟೈಟಲ್ ಅನ್ನೂ ನೋಂದಣಿ ಮಾಡಿಸಲಾಗಿದೆ. 2020ರಲ್ಲಿ ಅಂದರೆ 'ಕೆಜಿಎಫ್ ಚಾಪ್ಟರ್​ 2' ಚಿತ್ರೀಕರಣ ಮುಗಿದ ನಂತರ ಯಶ್ ಜೊತೆಗಿನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರಂತೆ.

ಒಟ್ಟಾರೆ ಈಗಾಗಲೇ 'ಕೆ.ಜಿ.ಎಫ್​' ಚಿತ್ರದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯಶ್​ ಅವರನ್ನು ಪೂರಿ ಜಗನ್ನಾಥ್​ ಅವರ ಈ ಪಂಚ ಭಾಷಾ ಸಿನಿಮಾ ಮತ್ತೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಅಂದಾಜಿಸಲಾಗುತ್ತಿದೆ.

HBD Kiara Advani: 27ನೇ ವಸಂತಕ್ಕೆ ಕಾಲಿಟ್ಟ ನಟಿ ಕಿಯಾರ ಅಡ್ವಾಣಿಯ ಹಾಟ್​ ಹಾಗೂ ಬೋಲ್ಡ್​ ಚಿತ್ರಗಳು..!


 
First published: August 1, 2019, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading