• Home
  • »
  • News
  • »
  • entertainment
  • »
  • KGF Chapter 2: ಸಿನಿಮಾ ನೋಡಲು ಒಂದು ದಿನ ರಾಷ್ಟ್ರಕ್ಕೆ ರಜೆ ನೀಡಿ ಎಂದು ಪ್ರಧಾನಿಗೆ ಪತ್ರ ಬರೆದ ಯಶ್​ ಅಭಿಮಾನಿಗಳು..!

KGF Chapter 2: ಸಿನಿಮಾ ನೋಡಲು ಒಂದು ದಿನ ರಾಷ್ಟ್ರಕ್ಕೆ ರಜೆ ನೀಡಿ ಎಂದು ಪ್ರಧಾನಿಗೆ ಪತ್ರ ಬರೆದ ಯಶ್​ ಅಭಿಮಾನಿಗಳು..!

ಯಶ್​ ಸಿನಿಮಾ ನೋಡಲು ರಜೆ ಕೊಡಿ ಎಂದ ಅಭಿಮಾನಿಗಳು

ಯಶ್​ ಸಿನಿಮಾ ನೋಡಲು ರಜೆ ಕೊಡಿ ಎಂದ ಅಭಿಮಾನಿಗಳು

ನಾನಾ ಕಾರಣಗಳಿಂದ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಹೀಗಿರುವಾಗಲೇ ಯಶ್​ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಸಿನಿಮಾ ರಿಲೀಸ್ ಆಗಲಿರುವ ದಿನದಂದು ಇಡೀ ದೇಶಕ್ಕೆ ರಜೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

ರಾಕಿಂಗ್​ ಸ್ಟಾರ್​ ಯಶ್​ ಅಭಿಮಾನಿಗಳು ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ರಿಲೀಸ್​ ದಿನಾಂಕ ಪ್ರಕಟವಾದಾಗಿನಿಂದ ಸಂಭ್ರಮದಲ್ಲಿದ್ದಾರೆ. ಅಲ್ಲದೆ ಯಾವಾಗ ಜುಲೈ ಬರುತ್ತದೆಯೋ ಎಂದು ಕಾತರರಾಗಿ ಕಾಯುತ್ತಿದ್ದಾರೆ. ಪ್ರಶಾಂತ್​ ನೀಲ್ ನಿರ್ದೇಶನದ ಹಾಗೂ ಯಶ್ ಅಭಿನಯದ ಈ ಸಿನಿಮಾಗಾಗಿ ಇಡೀ ಭಾರತೀಯ ಸಿನಿರಂಗವೇ ಕಾಯುತ್ತಿದೆ. ಯಶ್​ ಹುಟ್ಟುಹಬ್ಬದ ಹಿಂದಿನ ದಿನ ರಾತ್ರಿ ಕೆಜಿಎಫ್​ ಚಾಪ್ಟರ್ 2 ಟೀಸರ್ ರಿಲೀಸ್​ ಮಾಡಲಾಗಿದ್ದು, ಅದು ಹೊಸ ದಾಖಲೆಗಳ ಮೇಲೆ ದಾಖಲೆ ಬರೆಯಿತು. ಟೀಸರ್​ಗೆ ಸಿಕ್ಕ ಪ್ರತಿಕ್ರಿಯೆ ಕಂಡ ಚಿತ್ರತಂಡ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ತಿಳಿಸಿತ್ತು. ಇಂತಹ ಸಿನಿಮಾ  ಕನ್ನಡ, ಹಿಂದಿ ಸೇರಿದಂತೆ  ಹಲವಾರು ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಜಿಎಫ್​ ಚಾಪ್ಟರ್​1 ರ ಮುಂದುವರೆದ ಭಾಗವಾಗಿದ್ದು, ಚಿತ್ರದ ಕ್ಲೈಮ್ಯಾಕ್ಸ್​ ಹೇಗಿರಲಿದೆ  ಅನ್ನೋ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿದೆ. 


ನಾನಾ ಕಾರಣಗಳಿಂದ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಹೀಗಿರುವಾಗಲೇ ಯಶ್​ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಸಿನಿಮಾ ರಿಲೀಸ್ ಆಗಲಿರುವ ದಿನದಂದು ಇಡೀ ದೇಶಕ್ಕೆ ರಜೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.ಜುಲೈ 16ರಂದು ಕೆಜಿಎಫ್​ ಚಾಪ್ಟರ್​ 2 ಸಿನಿಮಾ ರಿಲೀಸ್​ ಆಗಲಿದ್ದು, ಅಂದು ಇಡೀ ರಾಷ್ಟ್ರಕ್ಕೆ ರಜೆ ಘೋಷಿಸಬೇಕೆಂದು ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ ಯಶ್​ ಅಭಿಮಾನಿಗಳು.


KGF Chapter 2, KGF 2 Release Date, Yash, Prime Minister Modi, Narendra Modi, National Holiday, Entertainment, Kannada, Sandalwood, ಕೆಜಿಎಫ್ - ಚಾಪ್ಟರ್ 2, ಪ್ರಧಾನಿ ಮೋದಿ, ಯಶ್, ಕೆಜಿಎಫ್, ಸ್ಯಾಂಲ್​ವುಡ್​, Yash fans wrote a letter to PM to declare July 16th as National Holiday to watch KGF Chapter 2 movie STG ae
ಯಶ್​ ಅಭಿಮಾನಿಗಳು ಬರೆದಿರುವ ಪತ್ರ


ಹೊಂಬಾಳೆ ಫಿಲಂಸ್​ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ - ಚಾಪ್ಟರ್ 2ನಲ್ಲಿ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಕೆಜಿಎಫ್: ಚಾಪ್ಟರ್ 2 ಸಿನಿಮಾವನ್ನು ಮೊದಲಿಗೆ 2020ರ ಅಕ್ಟೋಬರ್ 23ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರೀಕರಣಕ್ಕೆ ಅಡ್ಡಿಯಾಗಿತ್ತು. ಇದರಿಂದಾಗಿ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂಡೂಲಾಯಿತು.


ಇದನ್ನೂ ಓದಿ: Dhruva Sarja: ಬಸ್​-ಮಾರ್ಕೆಟ್​ನಲ್ಲಿ ಗಿಜಿ ಗಿಜಿ, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಏಕೆ: ರಾಜ್ಯ ಸರ್ಕಾರಕ್ಕೆ ಧ್ರುವ ಸರ್ಜಾ ಪ್ರಶ್ನೆ..!


ಈ ಚಿತ್ರದ ಹಿಂದಿ ಹಕ್ಕುಗಳನ್ನು ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿದ್ವಾನಿ ಅವರ ಎಕ್ಸೆಲ್ ಎಂಟರ್ಟೈನ್ಮೆಂಟ್ ಖರೀದಿಸಿದ್ದರೆ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರವನ್ನು ಕೇರಳದಲ್ಲಿ ವಿತರಿಸಲಿದ್ದಾರೆ. ಕೆಜಿಎಫ್ - ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

Published by:Anitha E
First published: