ರಾಕಿಂಗ್ ದಂಪತಿ ಯಶ್-ರಾಧಿಕಾರ ಮುದ್ದಿನ ಮಗಳು ಐರಾ ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ತಮ್ಮ ಮುದ್ದು ಮುಖದ ಮೂಲಕ ಕ್ಯೂಟ್ ಪುಟಾಣಿಯ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾಳೆ.
ಅದರಲ್ಲೂ ರಾಕಿಂಗ್ ಸ್ಟಾರ್ ಹಾಕುವ ಮಗಳ ಪ್ರತಿಯೊಂದು ಫೋಟೋಗಳು ಭಾರೀ ವೈರಲ್ ಆಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಗೌರಿ ಲುಕ್ನಲ್ಲಿ ಚರ್ತುಥಿ ಹಬ್ಬದ ಸಂದರ್ಭದಲ್ಲಿ ಐರಾ ಎಲ್ಲರಿಗೂ ವಿಶ್ ಮಾಡಿದ್ದರು.
ಇದಾದ ಬಳಿಕ ಇದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಐರಾ ಕಾಣಿಸಿಕೊಂಡಿದ್ದಾರೆ. ಈ ಬಾರಿ ರಾಕಿಂಗ್ ಅಪ್ಪ ಕೂಡ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಸೌತ್ ಸಿನಿರಂಗದ ಸ್ಟಾರ್ ನಟನ ಮುದ್ದಿನ ಮಡದಿ ಯುವರತ್ನನ ಯುವರಾಣಿ..!
'ಕೆಜಿಎಫ್2' ಚಿತ್ರದ ಶೂಟಿಂಗ್ನಿಂದ ಬಿಡುವು ಮಾಡಿಕೊಂಡಿರುವ ಯಶ್ ಸದ್ಯ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ಮಗಳೊಂದಿಗೆ ಆಟವಾಡುತ್ತಾ ಮಿಸ್ಟರ್ ರಾಮಾಚಾರಿ ವಿಡಿಯೋವೊಂದನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ತುಣುಕಿನಲ್ಲಿ ಅಪ್ಪನ ಕೋರಿಯಂತೆ ಎಲ್ಲರಿಗೂ ಐರಾ ಎಲ್ಲರಿಗೂ ಹಾಯ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ