KGF Chapter 2: ವಿವಾದ ಸೃಷ್ಟಿಸಿದ ಯಶ್​​ ಸಿನಿಮಾ!; ಜೈಲು ಸೇರಿದ ‘ಕೆಜಿಎಫ್’ ಸಿನಿಮಾ ತಂಡದ ಸದಸ್ಯ

KGF Movie: ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿರುವ ‘ಕೆಜಿಎಫ್ 2​’ ಸಿನಿಮಾದಲ್ಲಿ ರಘು ಸ್ಟಂಟ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ. ಈಗ ಈತ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿದ್ದು ಈತನನ್ನು ಪೊಲೀಸರು ಬಂಧಿಸಿದ್ದಾರೆ.

Rajesh Duggumane | news18
Updated:August 16, 2019, 10:20 AM IST
KGF Chapter 2: ವಿವಾದ ಸೃಷ್ಟಿಸಿದ ಯಶ್​​ ಸಿನಿಮಾ!; ಜೈಲು ಸೇರಿದ ‘ಕೆಜಿಎಫ್’ ಸಿನಿಮಾ ತಂಡದ ಸದಸ್ಯ
ನಟ ಯಶ್.​
  • News18
  • Last Updated: August 16, 2019, 10:20 AM IST
  • Share this:
‘ಕೆಜಿಎಫ್​’ ಸಿನಿಮಾ ಹಿಟ್​ ಆದ ನಂತರದಲ್ಲಿ ‘ಕೆಜಿಎಫ್​’ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿಯಾಗಿದೆ. ಈಗಾಗಲೇ ಎರಡನೇ ಚಾಪ್ಟರ್​​ನ ಶೂಟೀಂಗ್​ ಕೂಡ ಆರಂಭಗೊಂಡಿದೆ. ಈ ಮಧ್ಯೆ ‘ಕೆಜಿಎಫ್​’ ತಂಡದ ಸದಸ್ಯ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾನೆ.

ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿರುವ ‘ಕೆಜಿಎಫ್​ 2’ ಸಿನಿಮಾದಲ್ಲಿ ರಘು ಸ್ಟಂಟ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ. ಈಗ ಈತ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿದ್ದು ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿ ರಘುನ ಗೆಳತಿಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಅವಳ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಕೂಡ ಮಾಡುತ್ತಿದ್ದ. ಈ ಬಗ್ಗೆ ಸಂತ್ರಸ್ತೆ ರಘು ಬಳಿ ಹೇಳಿಕೊಂಡಿದ್ದಳು. ಅಸಮಾಧಾನಗೊಂಡಿದ್ದ ರಘು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ರಘು, ಯುವತಿ ಹಾಗೂ ಮತ್ತೋರ್ವ ಸೇರಿ ಈ ಕೊಲೆ ನಡೆಸಿದ್ದರು.

ಕೊಲೆಯ ನಂತರ ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಯುವತಿ ತಾನು ಮೋಸ ಹೋಗಿದ್ದಕ್ಕೆ ಈ ರೀತಿ ಮಾಡಲಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ರಘು ಈ ಮೊದಲು ಸಾಕಷ್ಟು ಸಿನಿಮಾಗಳಿಗೆ ಸ್ಟಂಟ್​ಮನ್​ ಆಗಿ ಕೆಲಸ ಮಾಡಿದ್ದರು.

ಬಾಲಿವುಡ್​ ನಟ ಸಂಜಯ್​ ದತ್​ ‘ಕೆಜಿಎಫ್​ 2’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ಅಧೀರನ ಪಾತ್ರದಲ್ಲಿ ಸಂಜಯ್ ದತ್​ ನಟಿಸುತ್ತಿದ್ದು, ಅವರ ಲುಕ್​ ಕೂಡ ಬಿಡುಗಡೆ ಆಗಿತ್ತು. ‘ಕೆಜಿಎಫ್​ 2’ ಚಿತ್ರದ ಶೂಟಿಂಗ್​ ಈಗಾಗಲೇ ಆರಂಭಗೊಂಡಿದೆ. ಸಂಜಯ್​ ದತ್​ ಚಿತ್ರದ ಸೆಟ್​ ಸೇರಿಕೊಳ್ಳಲು ಕೊಂಚ ತಡವಾಗಲಿದೆ ಎನ್ನಲಾಗಿದೆ.

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...