Yash Birthday: ಯಶ್​ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: ಚಿತ್ರಮಂದಿರದಲ್ಲಿ ಕೆಜಿಎಫ್​ 2 ಟೀಸರ್​ ರಿಲೀಸ್​

KGF Chapter 2: ರಾಕಿಂಗ್​ ಸ್ಟಾರ್​ ಅಭಿಮಾನಿಗಳೂ ಸಹ ಕಡಿಮೆ ಇಲ್ಲ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನೋತ್ಸವವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಅದರ ಅಂಗವಾಗಿ ರಕ್ತದಾನ, ಉಪಹಾರ, ಸಿಹಿ ಹಂಚಿಕೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಕೆಜಿಎಫ್​ ಚಾಪ್ಟರ್​ 2 ಸಿನಿಮಾದಲ್ಲಿ ಯಶ್​

ಕೆಜಿಎಫ್​ ಚಾಪ್ಟರ್​ 2 ಸಿನಿಮಾದಲ್ಲಿ ಯಶ್​

  • Share this:
ಕನ್ನಡ ಸೇರಿದಂತೆ ಇತರೆ ಸಿನಿರಂಗದವರು ಕಾತರದಿಂದ ಕಾಯುತ್ತಿರುವ ಸಿನಿಮಾಗಳಲ್ಲಿ ಕೆಜಿಎಫ್​ ಚಾಪ್ಟರ್​ 2 ಸಹ ಒಂದು. ಯಶ್​ ರಾಕಿ ಬಾಯ್​ ಆಗಿ ಕಾಣಿಸಿಕೊಂಡಿರುವ ಚಿತ್ರದ ಟೀಸರ್​ಗಾಗಿ ಸಿನಿಪ್ರಿಯರು ದಿನ ಗಣನೆ ಆರಂಭಿಸಿದ್ದಾರೆ. ಯಶ್​ ಹುಟ್ಟುಹಬ್ಬದಂದು ಅಂದರೆ ಜನವರಿ 8ಕ್ಕೆ ಬೆಳಿಗ್ಗೆ 10:18ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಯಶ್​ ಹುಟ್ಟುಹಬ್ಬ ಉಡುಗೊರೆಯಾಗಿ ಈ ಟೀಸರ್​ ಬಿಡುಗಡೆ ಮಾಡಲಿದೆ. ಇನ್ನು ಯಶ್​ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಸಹ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಕೊರೋನಾ ಕಾರಣದಿಂದಾಗಿ ಎಂದಿನಂತೆ ಫ್ಯಾನ್ಸ್​ ಯಶ್​ ಅವರ ಮನೆ ಬಳಿ ಅವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿ, ಸಂಭ್ರಮಿಸಲು ಆಗುತ್ತಿಲ್ಲ. ಅದಕ್ಕೆ ಬದಲಾಗಿ ರಾಕಿ ಬಾಯ್​ಅಭಿಮಾನಿಗಳು ಬೇರೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನ ಕೆಜಿಎಫ್​ ಚಾಪ್ಟರ್ 2 ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಯಾವಾಗ ಈ ಸಿನಿಮಾ ರಿಲೀಸ್ ದಿನಾಂಕ ಪ್ರಕಟಿಸಲಿದೆ ಎಂದು ಸಿನಿಪ್ರಿಯರು ಕಾಯುತ್ತಿದ್ದರು. 

ಯಶ್​ ಈ ಸಲ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಎಲ್ಲರೂ ತಾವಿರುವ ಜಾಗದಿಂದಲೇ ಶುಭ ಕೋರಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ವಿಶ್ ಮಾಡಿ ಎಂದು ಕೇಳಿಕೊಂಡಿದ್ದಾರೆ. ಕಾರಣ ಕೊರೋನಾ ಭೀತಿಯಿಂದಾಗಿ ಯಾರಿಗೂ ತೊಂದರೆಯಾಗಬಾರದು ಎಂದು ಯಶ್​ ಈ ನಿರ್ಧಾರಕ್ಕೆ ಬಂದಿದ್ದಾರೆ.ಅದಕ್ಕೆ ರಾಕಿಂಗ್​ ಸ್ಟಾರ್​ ಅಭಿಮಾನಿಗಳೂ ಸಹ ಕಡಿಮೆ ಇಲ್ಲ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನೋತ್ಸವವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಅದರ ಅಂಗವಾಗಿ ರಕ್ತದಾನ, ಉಪಹಾರ, ಸಿಹಿ ಹಂಚಿಕೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.ಅಷ್ಟೇ ಅಲ್ಲ, ಜ.8ರಂದು ಬೆಳಿಗ್ಗೆ ಕೆಜಿಎಫ್​ 2 ಟೀಸರ್​ ರಿಲೀಸ್​ ಆಗುತ್ತಿದ್ದಂತೆಯೇ ಬೆಂಗಳೂರಿನ ಗೌಡನ ಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಕೆಜಿಎಫ್​ ಚಾಪ್ಟರ್​ 2 ಟೀಸರ್ ಪ್ರದರ್ಶಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಜಿಎಫ್​ ಚಾಪ್ಟರ್​ 1ರ ಖಳನಾಯಕ ಗರುಡ ಪಾತ್ರಧಾರಿ ರಾಮ್​ ಅವರೂ ಭಾಗವಹಿಸಲಿದ್ದಾರೆ.
Published by:Anitha E
First published: