ಸ್ಯಾಂಡಲ್ವುಡ್ ರಾಕಿಂಗ್ ದಂಪತಿ ಯಶ್-ರಾಧಿಕಾರ ಮುದ್ದಿನ ಮಗಳು ಆಯ್ರಾ ಮೊದಲ ವರ್ಷದ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಲಾಯಿತು. ಮಗಳ ಪ್ರತಿಯೊಂದು ವಿಷಯಗಳನ್ನು ವಿಡಿಯೋ ಮಾಡಿ ನೆನಪಿನ ಬುತ್ತಿಗೆ ಸೇರಿಸಿಕೊಳ್ಳುವ ರಾಕಿಂಗ್ ದಂಪತಿ ಮಗಳ ಹುಟ್ಟುಹಬ್ಬವನ್ನು ಹೇಗೆಲ್ಲ ಆಚರಿಸುವುದಿಲ್ಲ ಹೇಳಿ.
ಹೌದು, ಮುದ್ದುಗಳು ಆಯ್ರಾಳ ಹುಟ್ಟುಹಬ್ಬವನ್ನು ಬೆಂಗಳೂರಿನ ಫನ್ವರ್ಲ್ಡ್ನಲ್ಲಿ ಆಚರಿಸಲಾಗಿತ್ತು. ಕರೂಸೆಲ್ ರೈಟ್ ಥೀಮ್ನಲ್ಲಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್ ಅನ್ನು ಸಿದ್ಧಪಡಿಸಲಾಗಿತ್ತು. 8 ಅಂತಸ್ತುಗಳ ಕೇಕ್ ಅನ್ನು ಆಯ್ರಾ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ