ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ಮಗಳು ಆಯ್ರಾ ಕ್ಯೂಟ್ನೆಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎರಡನೇ ಮಗು ಜನಿಸಿದ ವಾರದ ನಂತರ ರಾಧಿಕಾ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಎಲ್ಲರ ಗಮನ ಸೆಳೆದಿದ್ದು ಆಯ್ರಾ. ಈಗ ಹೊಸ ವಿಡಿಯೋ ಮೂಲಕ ಅವರು ಮತ್ತೆ ಸುದ್ದಿಯಾಗಿದ್ದಾರೆ.
ಮಧ್ಯಾಹ್ನ ವೇಳೆಗೆ ಬಿಸಿಲು ತುಂಬಾನೇ ಇರುತ್ತದೆ. ಈ ವೇಳೆ ಗಾಗಲ್ ಇಲ್ಲದೆ ಹೊರ ಬರುವುದು ಕಷ್ಟ. ಹೀಗೆ ಹೊರ ಬಿದ್ದರೆ ಕಣ್ಣನ್ನು ಬಿಡಲು ಸಾಧ್ಯವೇ ಇಲ್ಲ. ಇದನ್ನೇ ಇಮಿಟೇಟ್ ಮಾಡಿ ತೋರಿಸಿದ್ದಾರೆ ಆಯ್ರಾ. ಈ ವಿಡಿಯೋವನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಬಿಸಿಲಲ್ಲಿ ಹೆಂಗೆ ನೋಡೋದಮ್ಮ’ ಎಂದು ಆಯ್ರಾಗೆ ಪ್ರಶ್ನೆ ಮಾಡುತ್ತಾರೆ ಯಶ್. ಆಗಾ ಆಯ್ರಾ ಕಣ್ಣನ್ನೆಲ್ಲ ಚಿಕ್ಕದಾಗಿ ಮಾಡಿ ಇಮಿಟೇಟ್ ಮಾಡಿ ತೋರಿಸಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ