ಸ್ಯಾಂಡಲ್ವುಡ್ನ ರೊಮ್ಯಾಂಟಿಕ್ ಕಪಲ್ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 4ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಜೋಡಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಹಾಗೂ ಯಶ್ ಅವರ ವಿವಾಹದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ರಾಕಿ ಭಾಯ್ ಫ್ಯಾನ್ಸ್. ರಾಕಿಂಗ್ ದಂಪತಿ ಯಶ್-ರಾಧಿಕಾ ಅವರಿಗೆ ಆಯ್ರಾ ಹಾಗೂ ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಕಿರುತೆರೆಯಲ್ಲಿ ನಟಿಸುತ್ತಿದ್ದ ‘ನಂದಗೋಕುಲ‘ ಧಾರಾವಾಹಿ ಮೂಲಕ ನಟ ಯಶ್ ಮತ್ತು ನಟಿ ರಾಧಿಕಾ ನಡುವೆ ಪ್ರೀತಿ ಚಿಗುರಿತು. ಅನಂತರ ಇವರಿಬ್ಬರಿಗೆ ಬೆಳ್ಳಿ ಪರದೆಯ ಮೇಲೆ ನಟಿಸುವ ಅವಕಾಶ ಒದಗಿ ಬಂತು. ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಿರುತೆರೆಯಿಂದ ಒಂದಾದ ಈ ಜೋಡಿ ಬೆಳ್ಳಿತೆರೆ ಮೇಲೂ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಕೆಲವೇ ದಿನಗಳ ಹಿಂದೆಯಷ್ಟೆ ಮಗಳು ಆಯ್ರಾಳ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ ರಾಕಿಂಗ್ ದಂಪತಿ. ಆಯ್ರಾ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್ನೂ ಸದ್ದು ಮಾಡುತ್ತಿವೆ. ಈಗ ರಾಧಿಕಾ ಹಾಗೂ ಯಶ್ ಅವರ ಮದುವೆಯ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ.
View this post on Instagram
Happy wedding anniversary @TheNameIsYash and @iamradhikapandit pic.twitter.com/2kNT5F0Gzz
— Mithun reddy yash (@Mithunreddyyas1) December 9, 2020
Happy Wedding Aniversary @TheNameIsYash BOSS and @RadhikaPandit7 Athige♥️#HappyWeddingAniversaryYASHIKA #KGFChapter2 pic.twitter.com/7oacuUCAm0
— Yash Trends™ (@YashTrends) December 9, 2020
View this post on Instagram
ಯಶ್ ನಟನೆಯ ಕೆ.ಜಿ.ಎಫ್-1 ಚಿತ್ರ ಯಶ್ ಅವರ ಸಿನಿ ಜೀವನವನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದೆ. ಇನ್ನು ಕೆ.ಜಿ.ಎಫ್-2 ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಯಶ್ ಬ್ಯುಸಿಯಾಗಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ