• Home
  • »
  • News
  • »
  • entertainment
  • »
  • Yara Alnamlah: ಫ್ಯಾಶನ್‌ ಲೋಕದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಸೌದಿ ಅರೇಬಿಯಾದ ಫ್ಯಾಶನ್‌ ಸುಂದರಿ ಈಕೆ

Yara Alnamlah: ಫ್ಯಾಶನ್‌ ಲೋಕದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಸೌದಿ ಅರೇಬಿಯಾದ ಫ್ಯಾಶನ್‌ ಸುಂದರಿ ಈಕೆ

ಯಾರಾ ಅಲ್ನಮ್ಲಾ

ಯಾರಾ ಅಲ್ನಮ್ಲಾ

ಮುದ್ರ ದೇಶ ಎಂದೇ ಜನಸಾಮಾನ್ಯರು ಕರೆಯುವ ಸೌದಿ ಅರೇಬಿಯಾ ದೇಶದಲ್ಲಿ ಯಾರಾ ಅಲ್ನಮ್ಲಾ ಫ್ಯಾಶನ್ ಜಗತ್ತಿನಲ್ಲಿ ಸೌದಿ ಸುಂದರಿ ಎಂದು ಹೆಸರು ಗಳಿಸಿ ತಮ್ಮದೇ ವಿಶಿಷ್ಟ ಫ್ಯಾಶನ್‌ನಿಂದ ಫ್ಯಾಶನ್‌ ಪ್ರಿಯರಿಗೆ ಅಚ್ಚು ಮೆಚ್ಚಿನವರು ಆಗುತ್ತಿದ್ದಾರೆ.

  • Share this:

ದುಬೈ: ಜಗತ್ತಿನಲ್ಲಿ ದಿನ-ದಿನಕ್ಕೂ ಸ್ಟೈಲ್‌ ಟ್ರೆಂಡ್‌ (Style Trend) ಬದಲಾಗುತ್ತಲೇ ಇರುತ್ತದೆ. ಇವತ್ತು ಈ ಟ್ರೆಂಡ್‌ ಇದೆ ಎಂದರೆ ನಾಳೆ ಆ ಟ್ರೆಂಡ್‌ ಇರೋದಿಲ್ಲ. ಅದು ಹಳೆ ಟ್ರೆಂಡ್‌ ಆಗಿ ಮೂಲೆಯಲ್ಲಿ ಕೂತಿರುತ್ತದೆ. ಹೀಗೆಯೇ ಸ್ಟೈಲ್‌ ಬದಲಾದ ಹಾಗೇಯೇ ಸ್ಟೈಲ್‌ ಐಕಾನ್‌ಗಳು (Style Icon) ಕೂಡ ಬದಲಾಗುತ್ತಲೆ ಇರುತ್ತಾರೆ. ಸಮುದ್ರ ದೇಶ ಎಂದೇ ಜನಸಾಮಾನ್ಯರು ಕರೆಯುವ ಸೌದಿ ಅರೇಬಿಯಾ (Saudi Arabia) ದೇಶದಲ್ಲಿ ಯಾರಾ ಅಲ್ನಮ್ಲಾ (Yara Alnamla) ಫ್ಯಾಶನ್ ಜಗತ್ತಿನಲ್ಲಿ ಸೌದಿ ಸುಂದರಿ ಎಂದು ಹೆಸರು ಗಳಿಸಿ ತಮ್ಮದೇ ವಿಶಿಷ್ಟ ಫ್ಯಾಶನ್‌ನಿಂದ ಫ್ಯಾಶನ್‌ (Fashion) ಪ್ರಿಯರಿಗೆ ಅಚ್ಚು ಮೆಚ್ಚಿನವರು ಆಗುತ್ತಿದ್ದಾರೆ.


ಫ್ಯಾಶನ್‌ ಐಕಾನ್‌ ಆಗಿ ಗುರುತಿಸಿಕೊಂಡ ಯಾರಾ ಅಲ್ನಮ್ಲಾ
ಇವರ ಖ್ಯಾತಿಯು ಫ್ಯಾಶನ್‌ ಹೌಸ್‌ ಆಗಿರುವ ಫೆಂಡಿಯಿಂದ ಡಿಯೊರ್‌ ವರೆಗೆ ಹಾಗೂ ಎಲೀ ಸಾಬ್‌ ಎಂಬ ಡಿಸೈನರ್‌ನಿಂದ ಹಿಡಿದು ಫ್ಯಾಶನ್‌ ಬ್ರಾಂಡ್‌ ಆಶಿ ಸ್ಟುಡಿಯೊವರೆಗೆ ಚಾಚಿದ್ದು, ಸೌದಿ ಮಲ್ಟಿಹೈಫನೇಟ್ ಎಂದರೆ ಹಲವು ವೃತ್ತಿಜೀವನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಫ್ಯಾಶನ್‌ ಐಕಾನ್‌ ಯಾರಾ ಅಲ್ನಮ್ಲಾ ಗುರುತಿಸಿಕೊಂಡಿದ್ದಾರೆ.


ಇಟಾಲಿಯನ್ ಲೇಬಲ್ ರೆಪೊಸ್ಸಿ ಅವರ ಆಭರಣ ಧರಿಸಿದ ಫೋಟೋಸ್ ವೈರಲ್ 
ಅರಬ್‌ನ ಸುದ್ದಿ ವಾಹಿನಿಗಳು “ಯಾರಾ ಅಲ್ನಮ್ಲಾ, ಮೈಸನ್ ಅಲೈಯಾ ಟಾಪ್ ಮತ್ತು ಹೃದಯ ಆಕಾರದ ವ್ಯಾನಿಟಿ ಬ್ಯಾಗ್‌ ಮತ್ತು ಪ್ಯಾಂಟ್‌ ಧರಿಸಿ ಪ್ಯಾರಿಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಫ್ಯಾಶನ್‌ ಬ್ರಾಂಡ್‌ ಆಗಿರುವ ಇಟಾಲಿಯನ್ ಲೇಬಲ್ ರೆಪೊಸ್ಸಿ ಅವರ ಆಭರಣಗಳನ್ನು ಧರಿಸಿ ಅಲ್ನಮ್ಲಾ ಇನ್‌ಸ್ಟಾಗ್ರಾಮ್‌ನಲ್ಲಿ ಸೃಜನಶೀಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ ಮತ್ತು ಇದರ ಜೊತೆ ಕಂಪನಿ ಲೇಬಲ್‌ ಇರುವ ಉಂಗುರಗಳು ಮತ್ತು ಕಿವಿಯೋಲೆಗಳನ್ನು ಸಹ ತೋರಿಸಿದ್ದಾರೆ” ಎಂದು ವರದಿ ಮಾಡಿವೆ.


ಇದನ್ನೂ ಓದಿ: Niveditha Gowda: ಮಿಸೆಸ್​ ಇಂಡಿಯಾ ಆಗೋಕೆ ನಿವೇದಿತಾ ಗೌಡ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ? ಡಯೆಟ್​ ರಹಸ್ಯ ಬಿಚ್ಚಿಟ್ಟ ಗೊಂಬೆ


ಇದಕ್ಕೂ ಮೊದಲು, ಫ್ಯಾಶನ್-ಫಾರ್ವರ್ಡ್ ಪ್ರಭಾವಿ ಮೈಸನ್ ಮಾರ್ಗಿಲಾ ಅವರ ಫ್ಯಾಶನ್‌ ಪ್ರದರ್ಶನದಲ್ಲಿ ಬೀಜ್ ಮತ್ತು ಕ್ರೀಮ್‌ ಬಣ್ಣದ ಡ್ರೆಸ್‌ ನೊಂದಿಗೆ ಬೆಳ್ಳಿ ಮಣಿಗಳ ಕೈಗವಸುಗಳು ಅಲ್ನಮ್ಲಾ ಅವರನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತಿದ್ದವು.ಅಲ್ನಮ್ಲಾ ನಟಿಸಿರುವ ಲೇಬಲ್‌ನ ಮೊದಲ ಶೋ ಕಾರ್ಯಕ್ರಮ
ಎರಡು ವರ್ಷಗಳ ಹಿಂದೆ ಅಲ್ನಮ್ಲಾ ನಟಿಸಿರುವ ಲೇಬಲ್‌ನ ಮೊದಲ ಶೋ ಕಾರ್ಯಕ್ರಮವನ್ನು ಪ್ಯಾರಿಸ್‌ನ ಥಿಯೇಟರ್ ನ್ಯಾಷನಲ್ ಡಿ ಚೈಲೋಟ್‌ನಲ್ಲಿ ಪ್ರೇಕ್ಷಕರ ಮುಂದೆ ಇದನ್ನು ಲೈವ್‌ನಲ್ಲಿ ಪ್ರದರ್ಶಿಸಲಾಯಿತು. ಲೈವ್‌ನಲ್ಲಿ ಚಲನಚಿತ್ರವನ್ನು ತೋರಿಸುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಡಿಜಿಟಲ್ ದಿನಗಳನ್ನು ಚಾನಲ್ ಮಾಡಲು ಮೈಸನ್ ಮಾರ್ಗಿಲಾ ನಿರ್ಧರಿಸಿದರು. ಸೃಜನಾತ್ಮಕ ನಿರ್ದೇಶಕ ಜಾನ್ ಗ್ಯಾಲಿಯಾನೊ ಅವರ ಕನಸಾಗಿದ್ದ ಈ ಚಲನಚಿತ್ರವನ್ನು ಬ್ರಿಟಿಷ್ ಥಿಯೇಟ್ರಿಕಲ್ ಗ್ರೂಪ್ ಇಮಿಟೇಟಿಂಗ್ ದಿ ಡಾಗ್‌ನ ಸಹಯೋಗದೊಂದಿಗೆ ವೃತ್ತಿಪರ ನಟರು ಮತ್ತು ಮಾಡೆಲ್‌ಗಳನ್ನು ಹಾಕಿಕೊಂಡು ಚಲನಚಿತ್ರವನ್ನು ನಿರ್ಮಿಸಲಾಗಿದೆ.


ಇದನ್ನೂ ಓದಿ:  Jennifer lopez: 20 ವರ್ಷಗಳ ನಂತರ ಅವನನ್ನೇ ಮದುವೆಯಾದ ಪಾಪ್ ತಾರೆ, ಜೆನಿಫರ್-ಬೆನ್ ಅಫ್ಲೆಕ್ ಪ್ರೇಮ್ ಕಹಾನಿ


ಲೆಬನಾನಿನ ಫ್ಯಾಶನ್ ಹೌಸ್‌ ಸಹಯೋಗದಿಂದ ಅಗಲವಾದ ಅಂಚುಳ್ಳ ಬಿಳಿ ಟೋಪಿಯೊಂದಿಗೆ ಆಲ್ನಮ್ಲಾ ಎಲೀ ಸಾಬ್ ತುಂಬಾ ಸುಂದರವಾಗಿ ಬಿಳಿಯುಡುಗೆಯಲ್ಲಿ ಕಂಗೊಳಿಸುವ ಮೂಲಕ ಜಿಮ್ಮಿ ಚೂ ಬ್ಯಾಗ್‌ನೊಂದಿಗೆ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದಳು. ಅಲ್ನಮ್ಲಾ ಶಿಯಾಪರೆಲ್ಲಿ ಕೌಚರ್ ಶೋನಲ್ಲಿ, ಬಹ್ರೇನಿ ಡಿಸೈನರ್‌ ಅಕ್ಸ್‌ನಿಂದ ಸುಂದರವಾದ ಶಾರ್ಟ್‌ ಗೌನ್‌ ಧರಿಸಿದ್ದರು. ಫೆಂಡಿ ಫ್ಯಾಶನ್‌ ಹೌಸ್‌ ನಲ್ಲಿ ನೀಲಿ ಬಣ್ಣದ ಚಿಕ್‌ ಸೂಟ್‌ನಲ್ಲಿ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದರು. ಈ ವಾರದ ಹಿಂದೆ ಅಲ್ನಮ್ಲಾ ಅವರ ಅತ್ಯಂತ ಜನಪ್ರಿಯ ಲುಕ್‌ ಡಿಯೊರ್ ಫ್ಯಾಶನ್‌ ಹೌಸ್‌ನಲ್ಲಿ ಪ್ರದರ್ಶನ ಕಂಡಿದೆ. ಅಲ್ಲಿ ಅಲ್ನಮ್ಲಾ ಲಾಂಗ್‌ ಪ್ಲೆಟೆಟ್‌ ಬ್ಲಾಕ್‌ ಮತ್ತು ಹಳದಿ ಸ್ಕರ್ಟ್ ಅನ್ನು ಗರಿಗರಿಯಾದ ಬಿಳಿ ಶರ್ಟ್ ಮತ್ತು ಕಪ್ಪು ಟೈ ನೊಂದಿಗೆ ಹಾಕಿಕೊಂಡಿರುವ ಅವಳ ಆ ಲುಕ್‌ ನೋಡುಗರನ್ನು ಸೆಳೆಯುತ್ತದೆ.ಫ್ಯಾಶನ್ ಜಗತ್ತಿನಲ್ಲಿ ಹೆಸರು ಮಾಡುತ್ತಿರುವ ಮಾಡೆಲ್ 
ಅಲ್ನಮ್ಲಾ ಕಳೆದ ಕೆಲವು ವರ್ಷಗಳಿಂದ ಬ್ಲಾಗರ್, ಬ್ಯೂಟಿ ಇನ್ಫ್ಲುಯೆನ್ಸರ್ ಮತ್ತು ಮೇಕ್ಅಪ್ ಆರ್ಟಿಸ್ಟ್ ಆಗಿ ಫ್ಯಾಶನ್ ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ. ಆರ್ಕಿಟೆಕ್ಚರ್ ವಿದ್ಯಾರ್ಥಿಯಾಗಿರುವ ಇವರು ಉದ್ಯಮಿಯಾಗಿ ರಿಯಾದ್‌ನಲ್ಲಿ ಸೋ ಮಚ್ಚಾ ಎಂಬ ಕಾಫಿ ಅಂಗಡಿಯನ್ನು ಪ್ರಾರಂಭಿಸಿದ್ದಾರೆ ಮತ್ತು ಶೀಘ್ರದಲ್ಲಿಯೇ ತಮ್ಮದೇ ಆದ ಸಲೂನ್ ಅನ್ನು ಕೂಡ ತೆರೆಯಲಿದ್ದಾರೆ ಮತ್ತು ಸೌಂದರ್ಯ ಉತ್ಪನ್ನಗಳನ್ನು ಸಹ ಬಿಡುಗಡೆ ಮಾಡಲಿದ್ದಾರೆ.

Published by:Ashwini Prabhu
First published: