ಉರಿ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರೊಂದಿಗಿನ ತಮ್ಮ ಮದುವೆ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ನಡೆಯಿತು ಎಂದು ಬಾಲಿವುಡ್ ನಟಿ ಯಾಮಿ ಗೌತಮ್ ಹೇಳಿಕೊಂಡಿದ್ದಾರೆ. ಇದೇ ಜೂನ್ನಲ್ಲಿ ಜನಪ್ರಿಯ ನಟಿ ಯಾಮಿ ಗೌತಮ್ ಮತ್ತು ಆದಿತ್ಯ ಧರ್ ಮದುವೆಯಾದರು. ಅದನ್ನು ಯಾರೂ ಊಹಿಸಿಯೇ ಇರಲಿಲ್ಲ. ಯಾಮಿ ಗೌತಮ್ ಅವರ ಊರಾದ ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಮದುವೆಯಾಗಿದ್ದಾಗಿ ಸಾಮಾಜಿಕ ಮಾಧ್ಯಮದಲ್ಲಿ ಜಂಟಿ ಹೇಳಿಕೆ ನೀಡುವ ಮೂಲಕ ಯಾಮಿ ಗೌತಮ್ ಮತ್ತು ಆದಿತ್ಯ ಧರ್ ತಮ್ಮ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಜೊತೆಗೆ, ಅವರಿಬ್ಬರು ಮದುವೆಯ ವಿವಿಧ ಶಾಸ್ತ್ರಗಳ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಹಿಮಾಚಲ ಪ್ರದೇಶದ ಸ್ಥಳೀಯ ವಧುವಿನ ಉಡುಗೆಯಲ್ಲಿ ಮಿಂಚುತ್ತಿದ್ದ ಯಾಮಿ ಫೋಟೋ ಸೇರಿದಂತೆ, ಮದುವೆಯ ಇನ್ನಿತರ ಫೋಟೋಗಳು ನೆಟ್ಟಿಗರ ಮೆಚ್ಚುಗೆ ಗಳಿಸಿದ್ದವು. ಬಹಳಷ್ಟು ಬಾಲಿವುಡ್ ಮಂದಿಯೂ ಆ ಫೋಟೋಗಳಿಗೆ ಮೆಚ್ಚುಗೆ ಸೂಚಿಸಿ, ಪ್ರತಿಕ್ರಿಯೆ ನೀಡಿದ್ದರು.
View this post on Instagram
ಇದನ್ನೂ ಓದಿ:Sanjana Galrani: ಪತಿಯಿಂದ ವಿಚ್ಚೇದನ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರಂತೆ ಸಂಜನಾ ಗಲ್ರಾನಿ..!
“ನಾವು ಅದರ ಬಗ್ಗೆ ಪ್ಲಾನ್ ಮಾಡಿರಲಿಲ್ಲ, ಆದರೂ ಮದುವೆ ಸುಂದರ ರೀತಿಯಲ್ಲಿ ನಡೆದು ಹೋಯಿತು. ನನಗೆ ನಿಜವಾಗಿಯೂ ಬೇಕಾಗಿದ್ದು ಇದೇ. ನಾವಿರುವುದು ಹೀಗೆಯೇ. ಇದನ್ನು ಬಹಳಷ್ಟು ಜನ ಅರ್ಥಮಾಡಿಕೊಂಡಿದ್ದಾರೆ ಎಂಬುದು ನನಗೆ ಖುಷಿ ನೀಡಿದೆ. ನಾವು ಉರಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಹತ್ತಿರವಾಗಲು ಆರಂಭಿಸಿದೆವು. ಅಲ್ಲಿಂದ ನಮ್ಮ ಸ್ನೇಹ ಶುರುವಾಯಿತು. ಅದಾಗಿ ಎರಡು ವರ್ಷಗಳಾಯಿತು, ಮತ್ತು ನಾವು ಮದುವೆ ಆಗಲು ನಿರ್ಧರಿಸಿದೆವು. ನಮ್ಮಿಬ್ಬರ ಮನೆಯವರಿಗೂ ಇದರಿಂದ ಸಂತೋಷವಾಯಿತು. ಬಹುಶ: ಇನ್ನೂ ಜಾಸ್ತಿ ಸಂತೋಷವಾಯಿತು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Janhvi Kapoor: ಜಾಹ್ನವಿ ಕಪೂರ್ ಸ್ಮೋಕಿ ಲುಕ್ಗೆ ಅಭಿಮಾನಿಗಳು ಫಿದಾ..!
“ನಾವು ಕೇವಲ ನಿಶ್ಚಿತಾರ್ಥ ಮಾಡಿಕೊಂಡು, ಕಾಲ ಕೂಡಿ ಬಂದಾಗ ಮದುವೆ ಆಗುವುದು ಎಂದು ನಿರ್ಧರಿಸಿದ್ದೆವು. ಆದರೆ ನನ್ನ ಅಜ್ಜಿ, ಈ ನಿಶ್ಚಿತಾರ್ಥ ಅದೂ ಇದು ಎಲ್ಲ ನಮ್ಮ ಸಂಸ್ಕೃತಿಯಲ್ಲ. ಮದುವೇನೇ ಆಗಬಹುದಲ್ಲ ಎಂದರು. ಆಗ ಆದಿತ್ಯ, ನೀನು ಸಿದ್ಧವಿದ್ದೀಯಾ? ಮದುವೆ ಆಗೋಣ್ವಾ ಎಂದರು” ಎಂದು ಆಗ ನಡೆದ ಮಾತುಕತೆ ಬಗ್ಗೆ ಹಂಚಿಕೊಂಡಿದ್ದಾರೆ ಯಾಮಿ .
“ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಅದೇನು ಎಂದು ಅರ್ಥವಾಗಿಲ್ಲ. ನನಗೆ ಮದುವೆ ಆಗಿ ಹೋಗಿದೆ ಎಂಬ ಭಾವನೆಯನ್ನೇ ಇನ್ನೂ ಗ್ರಹಿಸಲಾಗುತ್ತಿಲ್ಲ. ಸಂತೋಷವಾಗಿ ಇರಬಹುದು ಎಂದು ನನಗೂ ಅನಿಸುತ್ತಿದೆ” ಎಂದಿದ್ದಾರೆ ಯಾಮಿ.
ಇದನ್ನೂ ಓದಿ: Bigg Boss Kannada 8 Elimination: ಇವತ್ತು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿ ಇವರೇ..!
ಯಾಮಿ ಗೌತಮ್ ಚೊಚ್ಚಲ ಬಾಲಿವುಡ್ ಚಿತ್ರ ವಿಕ್ಕಿ ಡೋನರ್, ಅದರಲ್ಲಿ ಅವರು ಆಯುಷ್ಮಾನ್ ಖುರಾನಾಗೆ ನಾಯಕಿಯಾಗಿ ನಟಿಸಿದ್ದರು. ಬಾಲಿವುಡ್ನಲ್ಲಿ ಬ್ಯುಸಿಯಾಗಿರುವ ಯಾಮಿ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ದಸ್ವಿ, ಲೋಸ್ಟ್, ಎ ಥರ್ಸ್ಡೇ, ಭೂತ್ ಪೊಲೀಸ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ