'ಯಜಮಾನ' vs 'ಮಿಠಾಯಿ ಸೂರಿ': ಖತರ್ನಾಕ್ ಖಳನಾಗಿ ಡಾಲಿ ಧನಂಜಯ್!

ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ಎಂಬ ಸಖತ್ ಸ್ಟೈಲಿಶ್​ ವಿಲನ್​ ಧನಂಜಯ್​ ಕಾಣಿಸಿಕೊಂಡಿದ್ದಾರೆ. ಇದು ಪಟ್ಟು ಅಂದರೆ ಪಟಾಸು..ಎಂದು ಉಡಾಯಿಸುವ ಖರ್ತನಾಕ್ ಖಿಲಾಡಿ ಪಾತ್ರವಂತೆ.

zahir | news18
Updated:February 10, 2019, 1:52 PM IST
'ಯಜಮಾನ' vs 'ಮಿಠಾಯಿ ಸೂರಿ': ಖತರ್ನಾಕ್ ಖಳನಾಗಿ ಡಾಲಿ ಧನಂಜಯ್!
ಧನಂಜಯ್
zahir | news18
Updated: February 10, 2019, 1:52 PM IST
ಶಿವಣ್ಣ ಅಭಿನಯದ 'ಟಗರು' ಚಿತ್ರದಲ್ಲಿ ಖಡಕ್ ವಿಲನ್​ ಆಗಿ ಅಬ್ಬರಿಸಿದ್ದ 'ಡಾಲಿ'  ಯಾರಿಗೆ ತಾನೆ ಗೊತ್ತಿಲ್ಲ. ಹೀರೋ ಪಟ್ಟವನ್ನು ಕೆಳಗಿಟ್ಟು ಮೊದಲ ಬಾರಿಗೆ ಖಳನಾಗಿ ಎಂಟ್ರಿಯಾಗಿದ್ದ ಧನಂಜಯ್ ಅವರ​ ಡಾಲಿ ರೂಪಕ್ಕೆ ಸಿನಿಪ್ರಿಯರು ಮರುಳಾಗಿದ್ದರು. ಅದ್ಯಾವ ಮಟ್ಟಿಗೆ ಅಂದರೆ ಸ್ಪೆಷಲ್ ಸ್ಟಾರ್ ಈಗ​ ಡಾಲಿ ಎಂದೇ ಫೇಮಸ್ಸು. ದುನಿಯಾ ಸೂರಿ ಕೆತ್ತಿದ ಈ ಒಂದು ಪಾತ್ರ ಧನಂಜಯ್ ಅವರನ್ನು ಒಂದೇ ದಿನದಲ್ಲಿ ನಟ ಭಯಂಕರ ಸ್ಥಾನಕ್ಕೆ ತಂದು ನಿಲ್ಲಿಸಿತ್ತು.

ಇದೀಗ ಮತ್ತೊಂದು ಅಂತದ್ದೇ ವಿಭಿನ್ನ ಪಾತ್ರದಲ್ಲಿ ತೆರೆಮೇಲೆ ಕಮಾಲ್​ ಮಾಡಲು ಧನಂಜಯ್ ಬರುತ್ತಿರುವ ಸೂಚನೆ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲಿ ಡಾಲಿಯದ್ದೂ ವಿಭಿನ್ನ ಪಾತ್ರ ಎಂದೇ ಹೇಳಲಾಗಿತ್ತು. ಸದ್ಯ ಬಿಡುಗಡೆಯಾಗಿರುವ ಟ್ರೈಲರ್​ನಲ್ಲಿ ಧನಂಜಯ್​ ಪಾತ್ರ ಸುಳಿವು ಬಿಟ್ಟು ಕೊಡಲಾಗಿದೆ. ಇದರಲ್ಲಿ ಧನಂಜಯ್ ಬರೀ ವಿಭಿನ್ನವಲ್ಲ, ಖದರ್​ತುಂಬಿದ ಖಳನಾಯಕನಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ಎಂಬ ಸಖತ್ ಸ್ಟೈಲಿಶ್​ ವಿಲನ್​ ಧನಂಜಯ್​ ಕಾಣಿಸಿಕೊಂಡಿದ್ದಾರೆ. ಇದು ಪಟ್ಟು ಅಂದರೆ ಪಟಾಸು..ಎಂದು ಉಡಾಯಿಸುವ ಖರ್ತನಾಕ್ ಖಿಲಾಡಿ ಪಾತ್ರವಂತೆ. ಈ ರೋಲ್​ ಡಾಲಿಯನ್ನು ಮೀರಿಸಲಿದೆ ಎಂದು ಹೇಳಲಾಗಿದೆ. ಯಜಮಾನನ ಮೊದಲಾರ್ಧದಲ್ಲೇ ಡಾಲಿ ಎಂಟ್ರಿ ಕೊಡಲಿದ್ದು, ಇಲ್ಲಿ ಧನಂಜಯ್ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅವರೊಂದಿಗೆ​ ಕಣ್ಣಲ್ಲಿ ಕಣ್ಣಿಟ್ಟು ನಟಿಸಿ ಅಬ್ಬರಿಸಿದ್ದಾರೆ ಎಂದು ಹೇಳಲಾಗಿದೆ.

ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ವಿಲನ್​ಗಳ ದೊಡ್ಡ ದಂಡೆಯಿದ್ದರೂ, ಡಾಲಿ ಪಾತ್ರದಂತೆ ವಿಕೃತ ಡಾನ್​ ಆಗಿ ಧನಂಜಯ್ ಇಲ್ಲಿ ಅಭಿನಯಿಸಿದ್ದಾರೆ. ಟ್ರೈಲರ್​ನಲ್ಲಿ ದರ್ಶನ್ ಅವರ ಡೈಲಾಗ್​ನಂತೆ ಮಿಠಾಯಿ ಸೂರಿ ಮ್ಯಾನರಿಸಂ ಮತ್ತು ಲುಕ್​ಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಈ ಚಿತ್ರದ ಬಳಿಕ ಧನಂಜಯ್ ಮಿಠಾಯಿ ಸೂರಿ ಎಂದೇ ಖ್ಯಾತಿ ಪಡೆಯಲಿದ್ದಾರೆ ಎಂಬುದು ಅವರ ಅಭಿಮಾನಿಗಳ ಅಂಬೋಣ.

First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...