TRAILER: 'ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು': 'ಯಜಮಾನ'ನ ಮಾಸ್​ ಎಂಟ್ರಿ

ಇನ್ನು ಯಜಮಾನನಿಗೆ ಖಡಕ್​ ವಿಲನ್​ ಆಗಿ ಡಾಲಿ ಖ್ಯಾತಿಯ ಧನಂಜಯ್​ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಮಿಠಾಯಿ ಸೂರಿ ಎಂಬ ವಿಶಿಷ್ಟ ಹೆಸರಿನಿಂದ ಧನಂಜಯ್ ಮತ್ತೊಮ್ಮೆ ಅಬ್ಬರಿಸುವ ಸೂಚನೆ ನೀಡಿದ್ದಾರೆ.

zahir | news18
Updated:February 10, 2019, 11:18 AM IST
TRAILER: 'ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು': 'ಯಜಮಾನ'ನ ಮಾಸ್​ ಎಂಟ್ರಿ
ದರ್ಶನ್
zahir | news18
Updated: February 10, 2019, 11:18 AM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ 'ಯಜಮಾನ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. 2.46 ನಿಮಿಷಗಳ ಟ್ರೈಲರ್​​ನಲ್ಲಿ ದರ್ಶನ್​ ಖಡಕ್ ಡೈಲಾಗ್, ಆಕ್ಷನ್​ ಮೂಲಕ ಅಬ್ಬರಿಸಿದ್ದಾರೆ. 'ಯಜಮಾನ' ಚಿತ್ರವು ಮಾಸ್​ ಪ್ರೇಕ್ಷಕರನ್ನು ಗಮನದಲ್ಲಿರಿಸಿ ಮಾಡಿದಂತಹ ಪಕ್ಕಾ ಫ್ಯಾಮಿಲಿ ಸಿನಿಮಾ ಎಂಬುದು ವಿಡಿಯೋ ತುಣುಕಿನಿಂದ ಬಹಿರಂಗವಾಗಿದೆ.

ಫಸ್ಟ್​ ಲುಕ್​ ಮೂಲಕವೇ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಚಾಲೆಂಜಿಂಗ್​ ಸ್ಟಾರ್​, ಈ ಬಾರಿ ಹೊಸ ಖದರ್​ನೊಂದಿಗೆ ಎಂಟ್ರಿ ಕೊಟ್ಟಿರುವುದು ವಿಶೇಷ. 'ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಳಿಸಿ, ನಿಯತ್ತಿಂದ ಕಟ್ಟಿರೊ ಸ್ವಂತ ಬ್ರಾಂಡೊ... 'ಡೈಲಾಗ್​ಗಂತೂ ಚಿತ್ರಮಂದಿರದಲ್ಲಿ ಸಿಳ್ಳೆಗಳ ಸುರಿಮಳೆ ಪಕ್ಕಾ ಎನ್ನಲಾಗಿದೆ. 'ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು' ಎಂಬ ಮತ್ತೊಂದು ಡೈಲಾಗ್​ ಮೂಲಕ ಬಾಕ್ಸಾಫೀಸ್ ಸುಲ್ತಾನ್​ ಮಾರ್ಚ್​ 1 ರಿಂದ ತೆರೆಗೆ ಅಪ್ಪಳಿಸುವ ಸೂಚನೆ ನೀಡಿದ್ದಾರೆ.

ಒಂದು ಮುಂಜಾನೆ...ಸುಮಧುರ ಗೀತೆಯ ಮತ್ತು ಪಡ್ಡೆಗಳ ನಿದ್ದೆಗೆಡಿಸಿದ ಬಸಣ್ಣಿ.. ಹಾಡಿನ ವಿಡಿಯೊ ಝಲಕ್​ಗಳನ್ನು ಟ್ರೈಲರ್​ನಲ್ಲಿ ತೋರಿಸಲಾಗಿದೆ. ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದು, ಇದು ದರ್ಶನ್ ಮತ್ತು ಹರಿಕೃಷ್ಣ ಅವರ ಕಾಂಬಿನೇಷನ್​ನಲ್ಲಿ ಬರುತ್ತಿರುವ 25ನೇ ಸಿನಿಮಾ ಎಂಬುದು 'ಯಜಮಾನ'ನ ಮತ್ತೊಂದು ವಿಶೇಷ.

ಇನ್ನು 'ಯಜಮಾನ'ನಿಗೆ ಯಜಮಾನಿಯಾಗಿ ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ದರ್ಶನ್​ಗೆ ಎದೆಕೊಟ್ಟು ಅಬ್ಬರಿಸುವ  ಖಡಕ್​ ವಿಲನ್​ ಆಗಿ ಡಾಲಿ ಖ್ಯಾತಿಯ ಧನಂಜಯ್​ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಮಿಠಾಯಿ ಸೂರಿ ಎಂಬ ವಿಶಿಷ್ಟ ಹೆಸರಿನಿಂದ ಧನಂಜಯ್ ಮತ್ತೊಮ್ಮೆ ಆರ್ಭಟಿಸುವ ಸೂಚನೆ ನೀಡಿದ್ದಾರೆ. ಹಾಗೆಯೇ ಖಳನಾಯಕರ ಪಟ್ಟಿಯಲ್ಲಿ ಅನೂಪ್ ಸಿಂಗ್ ಹಾಗೂ ಆರ್ಮುಗಂ ರವಿಶಂಕರ್​​ ಬಣ್ಣ ಹಚ್ಚಿರುವುದು ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ.

ಇನ್ನುಳಿದ ಪ್ರಮುಖ ಪಾತ್ರದಲ್ಲಿ ಸಾಧುಕೋಕಿಲ, ಹಿರಿಯ ನಟ ದತ್ತಾತ್ರೆಯ ಕಾಣಿಸಿಕೊಂಡಿದ್ದಾರೆ.  'ವಿಷ್ಣುವರ್ಧನ' ಚಿತ್ರ ಖ್ಯಾತಿಯ ನಿರ್ದೇಶಕ ಪಿ.ಕುಮಾರ್ 'ಯಜಮಾನ'ನಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಶೈಲಜಾ ನಾಗ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...