ದರ್ಶನ್ ಅಭಿಮಾನಿಗಳ ಸಂಭ್ರಮ: ಫೆ.10ಕ್ಕೆ 'ಯಜಮಾನ' ಟ್ರೈಲರ್​ ಬಿಡುಗಡೆ..!

'ಯಜಮಾನ' ಟ್ರೈಲರ್​ ಬಿಡುಗಡೆ ಫೆ.10ಕ್ಕೆ ಆದರೆ ಸಿನಿಮಾ ಯಾವಾಗ ರಿಲೀಸ್​ ಗೊತ್ತಾ..? ಅದನ್ನ ತಿಳಿಯೋಕೆ ಈ ವರದಿ ಓದಿ...

'ಯಜಮಾನ' ಸಿನಿಮಾದಲ್ಲಿ ದರ್ಶನ್​

'ಯಜಮಾನ' ಸಿನಿಮಾದಲ್ಲಿ ದರ್ಶನ್​

  • News18
  • Last Updated :
  • Share this:
-ಅನಿತಾ. ಈ, 

ದರ್ಶನ್​ ಅಭಿನಯದ ಸಿನಿಮಾ 'ಯಜಮಾನ' ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ದೂಳೆಬ್ಬೆಸುತ್ತಿದೆ. ಈ ಸಿನಿಮಾ ಕುರಿತಾದ ಒಂದು ಹೊಸ ಪೋಸ್ಟರ್​ ಹೊರ ಬಿದ್ದರೂ ಸಾಕು ದಚ್ಚು ಅಭಿಮಾನಿಗಳನ್ನು ಅದನ್ನು ದೇವರಂತೆ ಪೂಜಿಸಿ, ಆರಾಧಿಸುತ್ತಾರೆ.

ಇದನ್ನೂ ಓದಿ: 'ಯಜಮಾನ' ಟೈಟಲ್ ಟ್ರ್ಯಾಕ್​: ಸಾಮಾಜಿಕ ಜಾಲತಾಣದಲ್ಲಿ ದಚ್ಚು ಅಭಿಮಾನಿಗಳ ಹಬ್ಬ..!

ಇತ್ತೀಚೆಷ್ಟೆ ಈ ಸಿನಿಮಾ ಟೈಟಲ್​ ಟ್ರ್ಯಾಕ್​ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಈಗ ಟ್ರೈಲರ್​ ಸಹ ಬಿಡುಗಡೆಗೆ ಸಜ್ಜಾಗಿದೆ. ಟ್ರೈಲರ್​ ಬಿಡುಗಡೆಯ ದಿನಾಂಕ ಪ್ರಕಟಿಸಲು ಮಾಡಿರುವ ಮೋಷನ್​ ಪೋಸ್ಟರ್​ ಈಗ ವೈರಲ್​ ಆಗುತ್ತಿದೆ.

ಫೆ. 10ರಂದು ಬೆಳಿಗ್ಗೆ 10ಕ್ಕೆ 'ಯಜಮಾನ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಕುರಿತಂತೆ ದರ್ಶನ್​ ಮಾಡಿರುವ ಟ್ವೀಟ್​ ಇಲ್ಲಿದೆ ನೋಡಿ.

Thanks for all the love & praises for #Yajamana Songs. It has increased our responsibility. Trailer would be released on 10th Feb at 10 AM 😊 Always grateful for your Unconditional love & Support 😊#NinthaNodoYajamana #KannadAllaKannada #YajamanaTrailer10Febಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ದರ್ಶನ್​ಗೆ ಜೊತೆಯಾಗಿದ್ದು, ಸಿನಿಮಾ ರಿಲೀಸ್​ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಚಿತ್ರೀಕರಣ ಮುಗಿದಿರುವ ಕಾರಣ ಸದ್ಯದಲ್ಲೇ ಸಿನಿಮಾ ತೆರೆಗಪ್ಪಳಿಸುವ ಸೂಚನೆ ಸಿಕ್ಕಿದೆ.

ನಟಸಾರ್ವಭೌಮನಿಗೆ ಫಿದಾ ಆದ ಪ್ರೇಕ್ಷಕ: ಅಭಿಮಾನಿಗಳಿಗೆ ಚಿರಋಣಿ ಎಂದ ಅಪ್ಪು..!

First published: