‘ಯಾನ’ ಬೆನ್ನಿಗೆ ನಿಂತ ರಾಕಿಂಗ್​ ಸ್ಟಾರ್​ ಯಶ್​; ಜು.12ರಂದು ರಿಲೀಸ್​ ಆಗಲಿದೆ ಸಿನಿಮಾ

ಯಾನದಲ್ಲಿ ಈಗಿನ ಹರೆಯದ ಯುವತಿಯರ ಕಥೆ ಹೇಳಲಾಗುತ್ತಿದೆ. ಲವ್ವು, ಲೈಫು ಮತ್ತು ಒಂದಷ್ಟು ಎಡವಟ್ಟುಗಳ ಸಮ್ಮಿಶ್ರಣ ಸಿನಿಮಾದಲ್ಲಿ ಇರಲಿದೆಯಂತೆ.

news18
Updated:July 1, 2019, 1:14 PM IST
‘ಯಾನ’ ಬೆನ್ನಿಗೆ ನಿಂತ ರಾಕಿಂಗ್​ ಸ್ಟಾರ್​ ಯಶ್​; ಜು.12ರಂದು ರಿಲೀಸ್​ ಆಗಲಿದೆ ಸಿನಿಮಾ
ಯಶ್​ ಜೊತೆ ಜಗದೀಶ್​ ಪುತ್ರಿಯರು
  • News18
  • Last Updated: July 1, 2019, 1:14 PM IST
  • Share this:
ನಟ ರಾಕಿಂಗ್​ ಸ್ಟಾರ್​ ಯಶ್​ ಹೊಸಬರ ಸಿನಿಮಾಗಳ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ‘ಕೆಜಿಎಫ್​ 2’ ಚಿತ್ರದ ಶೂಟಿಂಗ್​ ನಡುವೆಯೂ ಸಾಕಷ್ಟು ಸಿನಿಮಾಗಳ ಟ್ರೈಲರ್​ ಹಾಗೂ ಟೀಸರ್​ ಲಾಂಚ್​ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಈಗ ‘ಯಾನ’ ಹೆಸರಿನ ಸಿನಿಮಾ ಟ್ರೈಲರ್​ ಬಿಡುಗಡೆ ಕಾರ್ಯಕ್ರಮದಲ್ಲೂ ಯಶ್​ ಪಾಲ್ಗೊಂಡಿದ್ದರು. ಈ ಸಿನಿಮಾ ಜು.12ರಂದು ತೆರೆಗೆ ಬರುತ್ತಿದೆ.

‘ಯಾನ’ ಹಿರಿಯ ಕಲಾವಿದ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ದಂಪತಿಯ ಮೂವರು ಪುತ್ರಿಯರಾದ ವೈನಿಧಿ. ವೈಭವಿ, ವೈಸಿರಿ ಅವರ ಚೊಚ್ಚಲ ಸಿನಿಮಾ.  'ಯಾನ' ಚಿತ್ರವನ್ನು ಹರೀಶ್ ಶೇರೆಗಾರ್ ನಿರ್ಮಿಸಿದ್ದಾರೆ. ವಿಜಯಲಕ್ಷ್ಮೀ ಸಿಂಗ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ವಿಶೇಷ.

ಸಿನಿಮಾದಲ್ಲಿ ಈಗಿನ ಹರೆಯದ ಯುವತಿಯರ ಕಥೆ ಹೇಳಲಾಗುತ್ತಿದೆ. ಲವ್ವು, ಲೈಫು ಮತ್ತು ಒಂದಷ್ಟು ಎಡವಟ್ಟುಗಳ ಸಮ್ಮಿಶ್ರಣ ಸಿನಿಮಾದಲ್ಲಿ ಇರಲಿದೆಯಂತೆ. ಎಲ್ಲ ವರ್ಗದವರಿಗೂ ಸಿನಿಮಾ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಮಾತು.

ಹಿರಿಯ ನಟರಾದ ಅನಂತ್ ನಾಗ್ , ಸುಹಾಸಿನಿ, ರಾಮಕೃಷ್ಣ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಶಿವರಾಜ್ ಕೆ.ಆರ್ ಪೇಟೆ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ವಿ3’ಗೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದು, ಅನೂಪ್ ಸಿಳೀನ್  ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

ಇದನ್ನೂ ಓದಿ: ಅಣ್ತಮ್ಮನಿಗೆ ಲವ್ ಯೂ ಎಂದ ಸುಂದರಿ : ಆಕೆಗೆ ಯಶ್​ `ಭಾಯ್ ಅಲ್ಲವಂತೆ !

First published:July 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading