ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಅಂಡರ್‌ಟೇಕರ್ ಸವಾಲು: ರಿಯಲ್ ಮ್ಯಾಚ್‌ಗೆ ನಾನ್ ರೆಡಿ... ನೀನ್ ರೆಡಿನಾ...?

ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ WWE ಸ್ಟಾರ್​ ಅಂಡರ್‌ಟೇಕರ್ ಅವರು ಸವಾಲೆಸೆದಿದ್ದಾರೆ. ರಿಯಲ್ ಮ್ಯಾಚ್‌ಗೆ ನಾನ್ ರೆಡಿ... ನೀನ್ ರೆಡಿನಾ ಎಂದಿದ್ದಾರೆ.

ಅಕ್ಷಯ್​ ಕುಮಾರ್​ಗೆ ಸವಾಲೆಸೆದ ಅಂಡರ್​ಟೇಕರ್​

ಅಕ್ಷಯ್​ ಕುಮಾರ್​ಗೆ ಸವಾಲೆಸೆದ ಅಂಡರ್​ಟೇಕರ್​

  • Share this:
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ತಮ್ಮ ರಿಯಲ್ ಸ್ಟಂಟ್ಸ್ ಮೂಲಕವೇ ಹೆಸರುವಾಸಿಯಾದವರು. ಅವರು ನಟಿಸಿದ್ದ ಖಿಲಾಡಿ ಸರಣಿಯ ನಾಲ್ಕನೇ ಚಿತ್ರ ಖಿಲಾಡಿಯೋಂಕಾ ಖಿಲಾಡಿ ರಿಲೀಸ್ ಆಗಿ ಇತ್ತೀಚೆಗಷ್ಟೇ  25 ವರ್ಷ ಪೂರ್ಣಗೊಂಡಿತ್ತು. ಅಕ್ಷಯ್ ಕುಮಾರ್ ಅಭಿಮಾನಿಗಳು 1996ರ ಈ ಸೂಪರ್‌ಹಿಟ್ ಸಿನಿಮಾ ಹ್ಯಾಂಗ್ ಓವರ್‌ನಲ್ಲ ಟ್ವಿಟರ್‌ನಲ್ಲಿ ಹ್ಯಾಶ್‌ಟ್ಯಾಗ್ ಸೃಷ್ಟಿಸಿ ಟ್ರೆಂಡ್ ಮಾಡತೊಡಗಿದರು. ಇದೇ ಸಂದರ್ಭದಲ್ಲಿ ಹಲವು ಕಾಮಿಕ್ ಪೋಸ್ಟ್​ಗಳೂ ಹೆಚ್ಚು ವೈರಲ್ ಆದವು. ಹಾಗೆ ವೈರಲ್ ಆದ ಕೆಲವು ಪೋಸ್ಟ್​ಗಳಲ್ಲಿ ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೈನ್ಮೆಂಟ್‌ನ ವಿಶ್ವವಿಖ್ಯಾತ ಕುಸ್ತಿಪಟು ಅಂಡರ್‌ಟೇಕರ್‌ರನ್ನು ಸೋಲಿಸಿದ ಸೂಪರ್‌ಸ್ಟಾರ್‌ಗಳು ಎಂದು ಬ್ರಾಕ್ ಲೆಸ್ನರ್, ರೋಮನ್ ರೀನ್ಸ್, ಟ್ರಿಪಲ್ ಎಚ್ ಜೊತೆಗೆ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಫೋಟೋವನ್ನೂ ಹಾಕಲಾಗಿತ್ತು. ಅದಕ್ಕೆ ಕಾರಣ ಖಿಲಾಡಿಯೋಂಕಾ ಖಿಲಾಡಿ ಚಿತ್ರದ ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ಅಕ್ಷಯ್ ಕುಮಾರ್ ಅಂಡರ್‌ಟೇಕರ್ ಎಂಬ ಹೆಸರಿನ ಅಜಾನುಬಾಹು ಫೈಟರ್‌ ಅನ್ನು ಸೋಲಿಸಿರುತ್ತಾರೆ.

ಆದರೆ, ಚಿತ್ರದಲ್ಲಿ ನಿಜವಾದ ಅಂಡರ್‌ಟೇಕರ್ ಬದಲಾಗಿ ಅವರನ್ನೇ ಹೋಲುವ ಮತ್ತೊಬ್ಬ ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೈನ್ಮೆಂಟ್‌ನ ಕ್ರಶ್ ಹೆಸರಿನ ಕುಸ್ತಿಪಟು ಬ್ರಿಯಾನ್ ಲೀ ನಟಿಸಿದ್ದರು. ಆದರೆ ಬ್ರಿಯಾನ್ ಲೀ ಅಂಡರ್‌ಟೇಕರ್ ಅವರನ್ನೇ ಹೋಲುತ್ತಿದ್ದ ಕಾರಣ ಹಾಗೂ ಸಿನಿಮಾದಲ್ಲಿ ಅವರಿಗೂ ಅಂಡರ್‌ಟೇಕರ್ ಎಂದೇ ಹೆಸರಿಟ್ಟಿದ್ದರು. ಇದೇ ಕಾರಣದಿಂದ ನಿಜವಾದ ಅಂಡರ್‌ಟೇಕರ್ ಖಿಲಾಡಿಯೋಂಕಾ ಖಿಲಾಡಿ ಚಿತ್ರದಲ್ಲಿ ನಟಿಸಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು.

Akshay Kumar, the Undertaker, Khiladiyon Ka Khiladi, WWE, Akshay Kumar vs the Undertaker, ಅಕ್ಷಯ್​ ಕುಮಾರ್​, ಅಂಡರ್​ ಟೇಕರ್​, ಅಕ್ಷಯ್​ ಕುಮಾರ್​​ಗೆ ಅಂಡರ್ ಟೇಕರ್​ ಸವಾಲು, ಖಿಲಾಡಿಯೋಂಕ ಖಿಲಾಡಿ, WWE star The Undertaker Challenges Akshay Kumar for Real Rematch ae
ಅಕ್ಷಯ್​ಗೆ ಸವಾಲೆಸೆದ ಅಂಡರ್​ಟೇಕರ್​


ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಪೋಸ್ಟ್​ಗೆ ಅಕ್ಷಯ್ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದಲ್ಲಿದ್ದದ್ದು ಅಂಡರ್‌ಟೇಕರ್ ಅಲ್ಲ ಬದಲಾಗಿ ಬ್ರಿಯಾನ್ ಲೀ ಎಂದು ಸ್ಪಷ್ಟಪಡಿಸಿದ್ದಾರೆ.

A hilarious note to mark 25 years to the release of #KhiladiyonKaKhiladi tomorrow!ಮತ್ತೊಂದೆಡೆ ಖುದ್ದು ಅಂಡರ್‌ಟೇಕರ್ ಕೂಡ ಈ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದು, ರಿಯಲ್ ಮ್ಯಾಚ್‌ಗೆ ರೆಡಿ ಆದಾಗ ತಿಳಿಸಿ ಎಂದು ಸವಾಲು ಹಾಕಿದ್ದಾರೆ. ಅದನ್ನು ಶೇರ್ ಮಾಡಿರುವ ವಲ್ಡ್ ರೆಸ್ಲಿಂಗ್ ಎಂಟರ್‌ಟೈನ್ಮೆಂಟ್‌ನ ಭಾರತದ ಸೋಷಿಯಲ್ ಮೀಡಿಯಾ ಅಕೌಂಟ್, ನಿಜವಾದ ಅಂಡರ್‌ಟೇಕರ್ ವರ್ಸಸ್ ಅಕ್ಷಯ್ ಕುಮಾರ್ ಮ್ಯಾಚ್ ಆಗಲೇಬೇಕು ಎಂದು ಕಿಚಾಯಿಸಿದೆ. ಹಾಗೇ ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದ ಗುಲ್ಶನ್ ಗ್ರೋವರ್ ಕೂಡ ಖಿಲಾಡಿಯೋನ್ ಕಾ ಖಿಲಾಡಿ 2 ಮಾಡಲು ಇದು ಸರಿಯಾದ ಸಮಯ ಎಂದು ಟ್ವೀಟಿಸಿದ್ದು, ಅದಕ್ಕೆ ನಿಜವಾದ ಅಂಡರ್‌ಟೇಕರ್ ಅವರ ಜೊತೆಗೆ ಸೀಕ್ವಲ್ ಮಾಡಿ ಅಂತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ: RIP Milkha Singh: ಫ್ಲೈಯಿಂಗ್​ ಸಿಖ್​ ಮಿಲ್ಕಾ ಸಿಂಗ್​ ನಿಧನ: ಪ್ರಧಾನಿ ಸೇರಿದಂತೆ ಗಣ್ಯರಿಂದ ಸಂತಾಪ..!

ಇನ್ನು ವಿಶ್ವ ವಿಖ್ಯಾತ ಕುಸ್ತಿಪಟು ಅಂಡರ್‌ಟೇಕರ್ ಕಳೆದ ವರ್ಷವಷ್ಟೇ ರಿಂಗ್‌ನಿಂದ ದೂರ ಸರಿದಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಎಜೆ ಸ್ಟೈಲ್ಸ್ ಜೊತೆಗೆ ನಡೆದ ಮ್ಯಾಚ್ ಬಳಿಕ ಅಂಡರ್‌ಟೇಕರ್ ಮತ್ತೆ ರಿಂಗ್‌ಗೆ ಮರಳಿಲ್ಲ. ಸುದೀರ್ಘ 33 ವರ್ಷಗಳ ಕುಸ್ತಿ ಜೀವನಕ್ಕೆ ಹಾಗೂ 30 ವರ್ಷಗಳ ವಲ್ಡ್ ರೆಸ್ಲಿಂಗ್ ಎಂಟರ್‌ಟೈನ್ಮೆಂಟ್ ಪಯಣಕ್ಕೆ ಅವರು ಗುಡ್‌ಬೈ ಹೇಳಿದ್ದಾರೆ. ಅವರಿಗೆ ಈಗ 56 ವರ್ಷ ವಯಸ್ಸಾಗಿದ್ದು, ದಿ ರಾಕ್, ಜಾನ್ ಸೀನಾ ಅವರಂತೆ ತಾವೂ ಕೂಡ ಸಿನಿಮಾಗಳಲ್ಲಿ ಕರಿಯರ್ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Akshay Kumar, the Undertaker, Khiladiyon Ka Khiladi, WWE, Akshay Kumar vs the Undertaker, ಅಕ್ಷಯ್​ ಕುಮಾರ್​, ಅಂಡರ್​ ಟೇಕರ್​, ಅಕ್ಷಯ್​ ಕುಮಾರ್​​ಗೆ ಅಂಡರ್ ಟೇಕರ್​ ಸವಾಲು, ಖಿಲಾಡಿಯೋಂಕ ಖಿಲಾಡಿ, WWE star The Undertaker Challenges Akshay Kumar for Real Rematch ae
WWE ಸ್ಟಾರ್​ ಅಂಡರ್​ಟೇಕರ್​


ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅವರ ವಿಷಯಕ್ಕೆ ಬರುವುದಾದರೆ ಅವರು ಎಂದಿನಂತೆ ತುಂಬಾ ಬ್ಯುಸಿ. ಅವರ ಬಳಿ ಕಡಿಮೆ ಅಂದರೂ ಅರ್ಧ ಡಜನ್ ಚಿತ್ರಗಳಿವೆ. ಕಳೆದ ವರ್ಷ ಲಾಕ್‌ಡೌನ್ ನಡುವೆಯೂ ಅವರು ನಟಿಸಿದ್ದ ಲಕ್ಷ್ಮಿ ಸಿನಿಮಾ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಇನ್ನು ಕೊರೊನಾ ಕಾಟವಿದ್ದರೂ ಈಗಾಗಲೇ ಅವರು ಐದು ಸಿನಿಮಾಗಳ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಸ್ಪೈ ಥ್ರಿಲ್ಲರ್ ಬೆಲ್ ಬಾಟಮ್, ಆಕ್ಷನ್ ಸಿನಿಮಾ ಸೂರ್ಯವಂಶಿ, ರೊಮ್ಯಾಂಟಿಕ್ ಕಾಮಿಡಿ ಅತರಂಗೀ ರೇ, ಐತಿಹಾಸಿಕ ಚಿತ್ರ ಪೃಥ್ವಿರಾಜ್ ಹಾಗೂ ಆಕ್ಷನ್ ಕಾಮಿಡಿ ಬಚ್ಚನ್ ಪಾಂಡೆ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್‌ನ ವಿವಿಧ ಹಂತದಲ್ಲಿದ್ದ ತೆರೆಗೆ ಬರಲು ರೆಡಿಯಾಗುತ್ತಿವೆ. ಉಳಿದಂತೆ ರಾಮ್ ಸೇತು ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಸಿನಿಮಾಗಳ ರಿಲೀಸ್ ಲೈನ್ ಅಪ್ ಮುಗಿದ ಬಳಿಕ ಆ ಚಿತ್ರವೂ ತೆರೆಗೆ ಬರಲಿದೆ.
Published by:Anitha E
First published: