ರಿಷಿ ಕಪೂರ್​ಗೆ ಸಾಮಾಜಿಕ ಜಾಲತಾಣದಲ್ಲಿ ಗೌರವ ಸಲ್ಲಿಸಿದ WWF ಸೂಪರ್​ ಸ್ಟಾರ್​​ ಜಾನ್​ ಸೀನ

John cena: ಹಾಲಿವುಡ್​ ನಟ ಜಾನ್​ ಸೀನ ತಮ್ಮ​ ಇನ್​ಸ್ಟಾಗ್ರಾಂ ಖಾತೆಯಲ್ಲಿ ರಿಷಿ ಕಪೂರ್​ ಅವರು ಕೆಂಪು ಬಣ್ಣ ಟೈ, ಕಪ್ಪು ಬಣ್ಣದ ಕೋಟು ಧರಿಸಿಕೊಂಡು ನಗುತಿರುವ ಫೋಟೋವನ್ನು ಹಾಕಿಕೊಂಡಿದ್ದಾರೆ.

ಜಾನ್​​​​​​​ ಸೀನ, ರಿಷಿ ಕಪೂರ್

ಜಾನ್​​​​​​​ ಸೀನ, ರಿಷಿ ಕಪೂರ್

 • Share this:
  ಬಾಲಿವುಡ್​ ಖ್ಯಾತ ನಟ ರಿಷಿ ಕಪೂರ್​ (ಮಾ.30ರಂದು) ನಿಧನರಾಗಿದ್ದಾರೆ. ಎಲ್ಲಾ ಚಿತ್ರರಂಗದ ನಟ-ನಟಿಯರು  ಶೇಷ್ಠ ನಟನನ್ನು ಕಳೆದುಕೊಂಡಿದಕ್ಕೆ ಕಂಬನಿ ಮಿಡಿದಿದ್ದಾರೆ. ಇದೀಗ​ WWF​​ ಸೂಪರ್​ ಸ್ಟಾರ್ ಜಾನ್​​​​​​​ ಸೀನ ಕೂಡ ಸಾಮಾಜಿಕ ಜಾಲತಾಣದಲ್ಲಿ ರಿಷಿ ಕಪೂರ್​ ಅವರ ಫೋಟೋ ಹಾಕುವ ಮೂಲಕ ಗೌರವ ಸಲ್ಲಿಸಿದ್ದಾರೆ.

  ಹಾಲಿವುಡ್​ ನಟ ಜಾನ್​ ಸೀನ ತಮ್ಮ​ ಇನ್​ಸ್ಟಾಗ್ರಾಂ ಖಾತೆಯಲ್ಲಿ ರಿಷಿ ಕಪೂರ್​ ಅವರು ಕೆಂಪು ಬಣ್ಣ ಟೈ, ಕಪ್ಪು ಬಣ್ಣದ ಕೋಟು ಧರಿಸಿಕೊಂಡು ನಗುತಿರುವ ಫೋಟೋವನ್ನು ಹಾಕಿಕೊಂಡಿದ್ದಾರೆ.

  ಜಾನ್​ ಸೀನ ಅಭಿಮಾನಿಗಳು ಬಾಲಿವುಡ್​ ಹಿರಿಯ ನಟ ರಿಷಿ ಕಪೂರ್​ ಅವರ ಫೋಟೋವನ್ನು ನೋಡಿ ಕಾಮೆಂಟ್​ ಬರೆದಿದ್ದಾರೆ. ಕೆಲವರು ರೆಸ್ಟ್​ ಇನ್​ ಪೀಸ್​​ ಕಪೂರ್​ ಎಂದು ಬರೆದರೆ. ದಂತಕಥೆ ಎಂದಿಗೂ ಸಾಯುವುದಿಲ್ಲ ಎಂದು ಬರೆದಿದ್ದಾರೆ.

      
  View this post on Instagram

   

  A post shared by John Cena (@johncena) on


  ಈ ಹಿಂದೆ ಬಿಗ್​ ಬಾಸ್​ ಸೀಸನ್​ 13 ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಮಾಡೆಲ್​​ ಅಸೀಮ್​ ರಿಯಾಜ್​​ ಅವರ ಫೋಟೋವನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದರು. ಮಾತ್ರವಲ್ಲದೆ ಅಸೀಮ್​ಗೆ ವೋಟ್​​ ಮಾಡಿ ಎಂದು ಕೇಳಿಕೊಂಡಿದ್ದರು.

  ಪತ್ನಿಯನ್ನೇ ಟ್ರೋಲ್​ ಮಾಡಿದ ಟೀಂ ಇಂಡಿಯಾದ ಸ್ಟಾರ್​​​ ಆಟಗಾರ!
  First published: