• Home
  • »
  • News
  • »
  • entertainment
  • »
  • Bengaluru: ರಾಜ್ ಕುಟುಂಬದ ಬಗ್ಗೆ ಅಪಮಾನದ ಮಾತು, ಪುನೀತ್ ಕೆರೆಹಳ್ಳಿಗೆ ಬಿತ್ತು ಧರ್ಮದೇಟು!

Bengaluru: ರಾಜ್ ಕುಟುಂಬದ ಬಗ್ಗೆ ಅಪಮಾನದ ಮಾತು, ಪುನೀತ್ ಕೆರೆಹಳ್ಳಿಗೆ ಬಿತ್ತು ಧರ್ಮದೇಟು!

ಪುನೀತ್ ಕೆರೆಹಳ್ಳಿ

ಪುನೀತ್ ಕೆರೆಹಳ್ಳಿ

ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ? ನೀನು ಕ್ಷಮೆ ಕೇಳಬೇಕು ಎಂದು ಕನ್ನಡಪರ ಹೋರಾಟಗಾರರ ತಂಡ ಗಲಾಟೆ ಮಾಡಿದೆ. ಅಷ್ಟೇ ಅಲ್ಲದೇ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸಿದೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ಡಿ.24): ಡಾ.ರಾಜ್​ಕುಮಾರ್ (Dr. Rajkumar)​ ಫ್ಯಾಮಿಲಿಯನ್ನು ಸ್ಯಾಂಡಲ್​ವುಡ್​ನ (Sandalwood) ದೊಡ್ಮನೆ ಎಂದೇ ಕರೆಯುತ್ತಾರೆ. ರಾಜ್​ ಫ್ಯಾಮಿಲಿ ಅಪಾರ ಅಭಿಮಾನಿ (Fans) ಬಳಗವನ್ನು ಹೊಂದಿದೆ. ನಟ ಸಾರ್ವಭೌಮ ಡಾ. ರಾಜ್‌ಕುಮಾರ್​ ಫ್ಯಾಮಿಲಿ (Rajkumar Family) ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ಆರೋಪದ ಮೇರೆಗೆ ಪುನೀತ್​ ಕೆರೆಹಳ್ಳಿಗೆ (Puneeth Kerehalli) ಕನ್ನಡಪರ ಹೋರಾಟಗಾರರು ಧರ್ಮದೇಟು ನೀಡಿದ್ದಾರೆ. ಮೊಬೈಲ್​ನಲ್ಲಿ ವಿಡಿಯೋ ಸೆರೆಯಾಗಿದೆ.


ಪುನೀತ್​ ಕೆರೆಹಳ್ಳಿಗೆ ಧರ್ಮದೇಟು


ಬೆಂಗಳೂರಿನಲ್ಲಿ ಚಾಮರಾಜಪೇಟೆಯಲ್ಲಿ ಘಟನೆ ನಡೆದಿದ್ದು, ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ? ನೀನು ಕ್ಷಮೆ ಕೇಳಬೇಕು ಎಂದು ಕನ್ನಡಪರ ಹೋರಾಟಗಾರರ ತಂಡ ಗಲಾಟೆ ಮಾಡಿದೆ. ಅಷ್ಟೇ ಅಲ್ಲದೇ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಕೂಡ ಮೊಬೈಲ್​ನಲ್ಲಿ ಸೆರೆಯಾಗಿದೆ.




ಸ್ಥಳಕ್ಕೆ ಪೊಲೀಸ್ ಭೇಟಿ, ಪರಿಶೀಲನೆ


ಶಿವಕುಮಾರ್ ನಾಯ್ಕ್ ಬಣ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಗೂ ಮುನ್ನ ಪುನೀತ್ ಕೆರೆಹಳ್ಳಿಗೆ ಕರೆ ಮಾಡಿ ಕ್ಷಮೆ ಕೇಳುವಂತೆ ಹೇಳಲಾಗಿತ್ತು. ಆದರೆ, ಈ ವೇಳೆ ಪುನೀತ್​ ನಾನು ಕ್ಷಮೆ ಕೇಳೋದಿಲ್ಲ ಎಂದಿದ್ದಾರೆ. ನಾನು ಚಾಮರಾಜಪೇಟೆಯಲ್ಲೇ ಇದ್ದೇನೆ, ಬರೋದಾದ್ರೆ ಬನ್ನಿ ಎಂದು ಅವಾಜ್ ಹಾಕಿದ್ದಾರೆ. ಕೆಲ ಹೊತ್ತಲ್ಲೇ ಬಂದ ಗುಂಪು ಪುನೀತ್​ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆಗೆ ಖಂಡನೆ


ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾಡದ ತಪ್ಪಿಗೆ ಪುನೀತ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.ಪುನೀತ್ ಕೆರೆಹಳ್ಳಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪುನೀತ್ ಕೆರೆಹಳ್ಳಿ ಡಾ.ರಾಜ್ ಕುಟುಂಬದ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ ವಿಡಿಯೋ ಇದ್ದರೆ, ನೀಡಿ ಎಂದು ಸವಾಲು ಹಾಕಿದ್ದಾರೆ. ರಾಜ್ ಕುಟುಂಬದ ಹೆಸರು ದುರ್ಬಳಕೆ ಮಾಡಿಕೊಂಡು ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಿಡಿಯೋ ನೀಡುವಂತೆ ಸವಾಲು


ಇನ್ನೂ ಪುನೀತ್ ಕೆರೆಹಳ್ಳಿಗೆ ಶ್ರೀರಾಮಸೇನೆ ಬೆಂಬಲ ಸೂಚಿಸಿದ್ದು, ಇಲ್ಲಿನ ಸೇನೆಯ ವಿಭಾಗ ಅಧ್ಯಕ್ಷರು ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುನೀತ್ ಕೆರೆಹಳ್ಳಿ ರಾಜ್ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಅನ್ನಲು ಸಾಕ್ಷಿ ಕೊಡಿ ಎಂದು ಸವಾಲು ಹಾಕಿದ್ದಾರೆ. ಪುನೀತ್ ಕೆರೆಹಳ್ಳಿ ವಿರುದ್ಧ ಷಡ್ಯಂತ್ರ ನಡೆಸಿ, ಚಾಮರಾಜಪೇಟಗೆ ಕರೆಸಿ ಅವರ ಮೇಲೆ ಹಲ್ಲೆ ಯತ್ನ ಮಾಡಿ ಅವರ ಹೋರಾಟವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.


ಇದನ್ನೂ ಓದಿ: Bengaluru: ರಾಜ್ ಕುಟುಂಬದ ಬಗ್ಗೆ ಅಪಮಾನದ ಮಾತು, ಪುನೀತ್ ಕೆರೆಹಳ್ಳಿಗೆ ಬಿತ್ತು ಧರ್ಮದೇಟು!

ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹರಿದಿದ್ದ ಪುನೀತ್ 


ನಗರದ ಕೆ ಆರ್.ಸರ್ಕಲ್ ಹಾಗೂ ಹಡ್ಸನ್​ ಸರ್ಕಲ್​ನಲ್ಲಿ ಅಳವಡಿಸಿದ್ದ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹರಿದ ಪ್ರಕರಣ ಸಂಬಂಧ ಕಿಡಿಗೇಡಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್​ನಿಂದ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್​ ಕೆರೆಹಳ್ಳಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

Published by:ಪಾವನ ಎಚ್ ಎಸ್
First published: