HOME » NEWS » Entertainment » WRITTER K V VIJAYENDRA PRASAD OPENS UP ABOUT THE RUMOUR KAREENA KAPOOR PLAYING SITAS ROLE AE

Kareena Kapoor: ಸೀತೆಯ ಪಾತ್ರಕ್ಕೆ ಸರಿ ಹೊಂದುವುದಿಲ್ಲವಂತೆ ಬಿ-ಟೌನ್​ ಬೇಬೊ ಕರೀನಾ ಕಪೂರ್​..!

ಈ ಸಿನಿಮಾ ಬಗ್ಗೆ ಪ್ರಕಟಣೆ ಹೊರ ಬಿದ್ದಾಗ ಹೃತಿಕ್​ ರೋಷನ್​ ರಾಮನಾಗಿ ಹಾಗೂ ದೀಪಿಕಾ ಪಡುಕೋಣೆ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಆದರೆ ಈ ಸಿನಿಮಾದ ನಿರ್ದೇಶಕ ನಿತೇಶ್​ ತಿವಾರಿ ಈ ಸುದ್ದಿಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿನ ಯಾವುದೇ ಪಾತ್ರಕ್ಕಾಗಿ ಇನ್ನೂ ಹುಡುಕಾಟ ಆರಂಭಿಸಿಲ್ಲ ಎಂದಿದ್ದಾರೆ.

Anitha E | news18-kannada
Updated:June 10, 2021, 3:07 PM IST
Kareena Kapoor: ಸೀತೆಯ ಪಾತ್ರಕ್ಕೆ ಸರಿ ಹೊಂದುವುದಿಲ್ಲವಂತೆ ಬಿ-ಟೌನ್​ ಬೇಬೊ ಕರೀನಾ ಕಪೂರ್​..!
ಕರೀನಾ ಕಪೂರ್​
  • Share this:
ಕಳೆದ ಕೆಲವು ದಿನಗಳಿಂದ ಸೀತೆಯ ಪಾತ್ರದಲ್ಲಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೆ ಸೀತೆಯಾಗಿ ನಟಿಸಲು ಕರೀನಾ ಕಪೂರ್​ ದುಬಾರಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಂದು ಸಿನಿಮಾಗೆ 7-8 ಕೋಟಿ ಪಡೆಯುತ್ತಿದ್ದ ಬೇಬೊ ಈಗ ಇದ್ದಕ್ಕಿದ್ದಂತೆ 12 ಕೋಟಿಗೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ರಾಮಾಯಣದಲ್ಲಿ ಸೀತೆಯ ಪಾತ್ರಧಾರಿಯಾಗಿ ನಟಿಸಲು 12 ಕೋಟಿಗೆ ಡಿಮ್ಯಾಂಡ್ ಮಾಡಿದ್ದಾರೆ ಅನ್ನೋ ಸುದ್ದಿ ವೈರಲ್​ ಆಗಿದೆ. 2019ರಲ್ಲೇ ಪ್ರಕಟಿಸಿರುವ ರಾಮಾಯಣ ಬಿಗ್​ ಬಜೆಟ್​ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಸದ್ಯ ಹರಿದಾಡುತ್ತಿವೆ. ಅದರಲ್ಲೂ ಪ್ರಮುಖವಾಗಿ ಸೀತೆಯ ಪಾತ್ರದ ಬಗ್ಗೆ. ಹೌದು, ಬಾಹುಬಲಿ ಸಿನಿಮಾಗೆ ಕಥೆ ಬರೆದಿರುವ ಹಿರಿಯ ಬರಹಗಾರ ಕೆ. ವಿಜಯೇಂದ್ರ ಪ್ರಸಾದ್ ಸ್ಪಾಟ್​ ಬಾಯ್​ಗೆ ನೀಡಿರುವ ಸಂದರ್ಶನದಲ್ಲಿ ಈ ಸಿನಿಮಾ ಕುರಿತಾಗಿ ಇರುವ ಎಲ್ಲ ಗಾಳಿ ಸುದ್ದಿಗೂ ಬ್ರೇಕ್​ ಹಾಕಿದ್ದಾರೆ. 

ಮತ್ತೊಂದು ಮೂಲದ ಪ್ರಕಾರ ಅಂದರೆ ಈ ರಾಮಾಯಣ ಪ್ರಾಜೆಕ್ಟ್​ ಜತೆಗೆ ಗುರುತಿಸಿಕೊಂಡಿರುವವರು ಹೇಳಿರುವ ಪ್ರಕಾರ ಕರೀನಾ ಕಪೂರ್​ ಸೀತೆಯ ಪಾತ್ರಕ್ಕೆ ಯಾವ ರೀತಿಯಲ್ಲೂ ಸರಿ ಹೊಂದುವ ನಟಿಯಲ್ಲವಂತೆ. ಸೈಫ್ ಅಲಿ ಖಾನ್​ ರಾವಣನಾಗಿ ನಟಿಸುತ್ತಿರುವ ಸಿನಿಮಾದಲ್ಲಿ ಕರೀನಾ ಸೀತೆಯಾಗಿ ನಟಿಸಿದರೆ ಉತ್ತಮ ಎಂದು ಕೆಲ ಮಾರ್ಕೆಟಿಂಗ್​ ಬ್ರೈನ್​ಗಳು ಸಲಹೆ ನೀಡಿರಬೇಕೆಂದು ಹೇಳಿದ್ದಾರಂತೆ.

Takht, Kareena kapoor khan demand 12 cr for mythological role of sita, ಸಂಭಾವನೆ, ಬಾಲಿವುಡ್, ಕರೀನಾ ಕಪೂರ್ ಖಾನ್, sita the incarnation movie, kareena kapoor khan remuneration, Kareena Kapoor Khan, Bollywood, Kareena Kapoor demanded 12 crore for mythological role of sita ae
ಕರೀನಾ ಕಪೂರ್


ಇನ್ನು ಈ ಸಿನಿಮಾ ಬಗ್ಗೆ ಪ್ರಕಟಣೆ ಹೊರ ಬಿದ್ದಾಗ ಹೃತಿಕ್​ ರೋಷನ್​ ರಾಮನಾಗಿ ಹಾಗೂ ದೀಪಿಕಾ ಪಡುಕೋಣೆ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಆದರೆ ಈ ಸಿನಿಮಾದ ನಿರ್ದೇಶಕ ನಿತೇಶ್​ ತಿವಾರಿ ಈ ಸುದ್ದಿಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿನ ಯಾವುದೇ ಪಾತ್ರಕ್ಕಾಗಿ ಇನ್ನೂ ಹುಡುಕಾಟ ಆರಂಭಿಸಿಲ್ಲ ಎಂದಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ನಿತೇಶ್​ ಹಾಗೂ ರವಿ ಉದಯ್ವಾರ್​ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Mayuri Kyatari: ಮಗನೊಂದಿಗೆ ಫೋಟೋಶೂಟ್​ಗೆ ಪೋಸ್​ ಕೊಟ್ಟ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ

ಈ ಹಿಂದೆಯೇ ರಾಮಾಯಣ ಚಿತ್ರತಂಡ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಎಲ್ಲ ಸಿನಿರಂಗದ ಕಲಾವಿದರು ನಟಿಸಲಿದ್ದಾರೆ ಎಂದು ಹೇಳಿತ್ತು. ಅದರಂತೆ ಕಲಾವಿದರ ಆಯ್ಕೆ ಆರಂಭವಾಗುತ್ತಿದ್ದಂತೆಯೇ ಮಾಹಿತಿ ಹಂಚಿಕೊಳ್ಳಲಾಗುವುದು ಎಂದೂ ತಿಳಿಸಿತ್ತು.

'ರಾಮಾಯಣ' ಸಿನಿಮಾ ಬರಲಿದೆ ಎಂದು ಸುದ್ದಿ ಹಬ್ಬಿದಾಗಿನಿಂದ ನಟ ಹೃತಿಕ್ ರೋಷನ್​ ಜತೆಗೆ 600 ಕೋಟಿ ಬಜೆಟ್​ನಲ್ಲಿ ನಿರ್ಮಿಸಲಾಗುವ ಈ ಐತಿಹಾಸಿಕ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ನಿರ್ಮಾಪಕರ ಹೆಸರುಗಳೂ ಸೇರಿಕೊಂಡಿದ್ದವು. ತೆಲುಗು ಚಿತ್ರರಂಗದ ನಿರ್ಮಾಪಕ ಅಲ್ಲು ಅರವಿಂದ್‌, ಪ್ಯಾಂಟಮ್‌ ಫಿಲ್ಮ್ ಸಂಸ್ಥಾಪಕ ಮಧು ಮಂಟೆನಾ ಮತ್ತು ಪ್ರೈಂ ಫೋಕಸ್‌ ಸ್ಟುಡಿಯೋ ಸಂಸ್ಥಾಪಕ ನಮಿತ್‌ ಮಲ್ಹೋತ್ರಾ ಹೆಸರು ಕೇಳಿ ಬಂದಿತ್ತು.ಇದನ್ನೂ ಓದಿ: Rashmika Mandanna: ತಮ್ಮ ಮುದ್ದಾದ ಮಗುವಿನ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ..!

ಬಿಗ್ ಬಜೆಟ್ ಸಿನಿಮಾ ಎಂದೇ ಹೇಳಲಾಗುತ್ತಿರುವ ರಾಮಾಯಣ ಮೂರು ಭಾಗಗಳಲ್ಲಿ ನಿರ್ಮಾಣವಾಗಲಿದೆಯಂತೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸಿನಿಮಾ ಸಿದ್ಧವಾಗಲಿದೆಯಂತೆ. ಸದ್ಯಕ್ಕೆ ಈ ಚಿತ್ರ ಇನ್ನೂ ಪ್ರೀ-ಪ್ರೊಡಕ್ಷನ್​ ಹಂತದಲ್ಲೇ ಇದೆ.

ಸಂಭಾವನೆ ಹೆಚ್ಚಿಸಿಕೊಂಡ ಕರೀನಾ ಕಪೂರ್​

ಎರಡನೇ ಮಗುವಾದ ನಾಲ್ಕೇ ತಿಂಗಳಿಗೆ ಮತ್ತೆ ಮೊದಲಿನಂತಾದ ಕರೀನಾ ಕಪೂರ್​ ಅವರ ಫೋಟೋ ಇತ್ತೀಚೆಗಷ್ಟೆ ವೈರಲ್​ ಆಗಿತ್ತು. ಫಿಟ್ನೆಸ್ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿರುವ ಕರೀನಾ ಕಪೂರ್​ ಈಗ ಮತ್ತೆ ಮೊದಲಿನಂತೆ ಬಳುಕುವ ಬಳ್ಳಿಯಂತಾಗಿದ್ದಾರೆ. ಇದರ ಜೊತೆಗೆ ಕರೀನಾ ಕಪೂರ್​ಗೆ ಸಿನಿಮಾ ಅವಕಾಶಗಳೂ ಅರಸಿ ಬರುತ್ತಿವೆ. ಸೀತೆಯ ಪಾತ್ರದಲ್ಲಿ ನಟಿಸೋಕೆ ಕರೀನಾ ಇತ್ತೀಚೆಗೆ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ಕರೀನಾ ಕಪೂರ್ ಅವರಿಗೆ ಎರಡು ಮಕ್ಕಳಾದರೂ ಇನ್ನೂ ಬಾಲಿವುಡ್​ನಲ್ಲಿ ಬೇಡಿಕೆ ಕಡಿಮೆಯಾಗಿಲ್ಲ. ಇನ್ನು ಕರೀನಾ ಕಪೂರ್​ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಅಮೀರ್ ಖಾನ್ ಜತೆ ನಟಿಸಿರುವ ಲಾಲ್ ಸಿಂಗ್ ಚಡ್ಡಾ ರಿಲೀಸ್​ ಆಗಬೇಕಿದೆ. ಜೊತೆಗೆ ಕರಣ್​ ಜೋಹರ್ ಅವರ ತಕ್ತ್​ ಸಿನಿಮಾದಲ್ಲೂ ಕರೀನಾ ಅಭಿನಯಿಸುತ್ತಿದ್ದಾರೆ.
Published by: Anitha E
First published: June 10, 2021, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories