Cheating Case: ಅರುಣಾ ಕುಮಾರಿ ನನಗೂ ಮೋಸ ಮಾಡಿದ್ದರು: ಸುದ್ದಿಗೋಷ್ಠಿಯಲ್ಲಿ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಹೇಳಿದ್ದೇನು ಗೊತ್ತಾ..?

Darshan-Umapathy: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್​ ಅವರು ಮೂರು ದಿನಗಳಿಂದ ಹಣಕಾಸು ಹಗರಣದ ಬಗ್ಗೆ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ ಎಂದು ಮಾತು ಆರಂಭಿಸಿದ್ದಾರೆ. ನನಗೂ ಅದಕ್ಕೂ ಸಂಬಂಧ ಇಲ್ಲ. ಆದರೆ ನನ್ನ ಸ್ನೇಹಿತರಿಗೆ ಆಕೆಯಿಂದ ಮೋಸ ಆಗಿದೆ ಎಂದಿದ್ದಾರೆ. 

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆ ಸುದ್ದಿಗೋಷ್ಠಿ

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆ ಸುದ್ದಿಗೋಷ್ಠಿ

  • Share this:
ದರ್ಶನ್ ಅವರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿರುವ ವಂಚನೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಒಂದು ಕಡೆ ನಟ ದರ್ಶನ್​ ಅವರು ಹಾಗೂ ಮತ್ತೊಂದು ಕಡೆ ನಿರ್ಮಾಪಕ ಉಮಾಪತಿ ಅವರು ಪ್ರತ್ಯೇಕವಾಗಿ ಸುದ್ದಿಗೋಷ್ಠಿಗಳಲ್ಲಿ ಮಾತನಾಡುತ್ತಿದ್ದಾರೆ. ಹೀಗಿರುವಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ಆಗಿದೆ. ಅದು ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್​ ಅವರು ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯೊಂದನ್ನು ಕರೆದಿದ್ದು, ಅದರಲ್ಲಿ ಈ ಪ್ರಕರಣದಲ್ಲಿ ಅರುಣಾ ಕುಮಾರಿ ಅವರ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌದು, ವಿ.ನಾಗೇಂದ್ರಪ್ರಸಾದ್ ಜೊತೆ ಉದ್ಯಮಿ ನಾಗವರ್ಧನ್ ಅವರೂ ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್​ ಅವರು ಮೂರು ದಿನಗಳಿಂದ ಹಣಕಾಸು ಹಗರಣದ ಬಗ್ಗೆ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ ಎಂದು ಮಾತು ಆರಂಭಿಸಿದ್ದಾರೆ. ನನಗೂ ಅದಕ್ಕೂ ಸಂಬಂಧ ಇಲ್ಲ. ಆದರೆ ನನ್ನ ಸ್ನೇಹಿತರಿಗೆ ಆಕೆಯಿಂದ ಮೋಸ ಆಗಿದೆ ಎಂದಿದ್ದಾರೆ.

Aruna Kumari, Darshan, Umapathy Srinivas Gowda, v Nagendra Prasad, Writer V Nagendra Prasad commented on cheating case related to Darshan and Umapathy ae
ಸುದ್ದಿಗೋಷ್ಠಿಯಲ್ಲಿ ವಿ ನಾಗೇಂದ್ರ ಪ್ರಸಾದ್​ ಹಾಗೂ ನಾಗವರ್ಧನ್​


ಸುದ್ದಿಗೋಷ್ಠಿಯಲ್ಲಿ ವಿ. ನಾಗೇಂದ್ರ ಪ್ರಸಾದ್​ ಅವರ ಜೊತೆಗಿದ್ದ ನಾಗವರ್ಧನ್ ಅವರು ಐದು ವರ್ಷ ಹಿಂದೆ ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. 2015ರಲ್ಲಿ ಅರುಣಾ ‌ಕುಮಾರಿ ಜೊತೆ ಮಾತುಕತೆ ನಡೆದಿತ್ತು. ಇಂದಿನ ಘಟನೆ ನೋಡಿ ನಾಗವರ್ಧನ್ ಅವರು ನನಗೆ ಕರೆ ಮಾಡಿದ್ದರು. ಇಂತಹದ್ದೇ ಘಟನೆ ನನ್ನ ಜೊತೆ ನಡೆದಿದೆ ಎಂದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: Vijay: ರೀಲ್​ ಹೀರೋಗಳು ತೆರಿಗೆ ಕಟ್ಟಲು ಹಿಂಜರಿಯುತ್ತಾರೆ ಎಂದು ತಲಪತಿ ವಿಜಯ್​ಗೆ ಛೀಮಾರಿ ಹಾಕಿದ ಮದ್ರಾಸ್​ ಹೈ ಕೋರ್ಟ್​

ನಾಗವರ್ಧನ್ ಅವರು ಮಾತನಾಡಿ,  ದರ್ಶನ್ ಹಾಗೂ ಉಮಾಪತಿ ವಿಚಾರದಲ್ಲಿ ಈ ಮಹಿಳೆ ವಂಚನೆ ಮಾಡಿದ್ದಾರೆ. 2015ರಲ್ಲಿ ನನಗೂ ಇದೇ ರೀತಿ‌‌ ಮೋಸ ಆಗಿತ್ತು. ಫೇಸ್​ಬುಕ್​ ಮೂಲಕ ಪರಿಚಯ ಮಾಡಿಕೊಂಡರು. ಹೈ ಫ್ರೊಫೈಲ್ ಇದ್ದೇನೆ ಎಂದು ಹೇಳಿದ್ದರು.
10-12ಕೋಟಿ‌ ಮೊತ್ತದ ಪ್ರಾಜೆಕ್ಟ್ ತೋರಿಸಿದ್ದರು. ಲ್ಯಾಂಡ್ ತೋರಿಸಿ ನಿರ್ಮಾಣ ಕಾರ್ಯಕ್ಕೆ ಬಂದರು. ಮೊದಲು ಸಿನಿಮಾ ಮಾಡುವುದಾಗಿ ಪರಿಚಯ ಮಾಡಿಕೊಂಡರು. ಅರುಣಾ ಕುಮಾರಿ ಅವರ ಮೂಲಕ ಹೆಸರು ನಂದಿತಾ ಎಂದು. ನನ್ನ‌ ಜೀವನದಲ್ಲೂ ಮೋಸ ಮಾಡಿದ್ದಾರೆ. ಹೀಗೆ ಬಿಟ್ಟರೆ ಇನ್ನು ಎಷ್ಟು ಮೋಸ ನಡೆಯುತ್ತೋ ಏನೋ ಎಂದು ನಾನು ನಾಗೇಂದ್ರಪ್ರಸಾದ್ ಅವರ ಗಮನಕ್ಕೆ‌ ತಂದೆ ಎಂದು ವಿವರಿಸಿದ್ದಾರೆ.

ನನ್ನ ಸ್ನೇಹಿತರು, ಸಂಬಂಧಿಕರನ್ನು ದೂರ ಮಾಡುತ್ತ ಬಂದರು. ಸ್ನೇಹಿತರ‌ ಮಧ್ಯೆ ಈಗ ಗೊಂದಲ ಸೃಷ್ಟಿ‌ಮಾಡಿದ್ದಾರೆ. ಇದೇ ರೀತಿ ನನಗೂ ಸ್ನೇಹಿತರ ಮಧ್ಯೆ ತಂದಿಟ್ಟು ತಮಾಷೆ ನೋಡುತ್ತಾರೆ ಅರುಣಾ ಕುಮಾರಿ. ನಾನು ಹಾಗೂ ನಾಗೇಂದ್ರಪ್ರಸಾದ್ ಅವರು ಮಾತು ಬಿಡಲು ಇವರೇ ಕಾರಣ. ಸಿನಿಮಾ ಮಾಡುತ್ತೇನೆ ಎಂದು ಪರಿಚಯ ಮಾಡಿಕೊಂಡು, ನಂತರ 6ಲಕ್ಷದವರೆಗೆ ದುಡ್ಡು ಪಡೆದರು. ಚಿನ್ನ ಪಡೆದುಕೊಂಡು ಮೋಸ ಮಾಡಿದರು.
ನಾನೇ ಅವರಿಗೆ ಅವರ ಕುಟುಂಬದಿಂದ ಸಮಸ್ಯೆ ಇದ್ದ ಕಾರಣಕ್ಕೆ  3 ತಿಂಗಳು ರಕ್ಷಣೆ ನೀಡಿದ್ದೆ. ಆಗಲೇ ಈಕೆಯ ವಿರುದ್ಧ ನನ್ನ ಪತ್ನಿಯೇ ದೂರು ನೀಡಿದ್ದರು. 2016ರಲ್ಲಿ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ನು ಮುಂದೆ ಬೇರೆ ಯಾರಿಗೂ ಮೋಸ ಮಾಡಬಾರದೆಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದೇನೆ. ಜೊತೆಗೆ ಆಕೆಯ ವಿರುದ್ಧ ಕಾನೂನು ಹೋರಾಟ ಮುಂದುವರೆಸಲಿದ್ದೇನೆ ಎಂದು ಹೇಳಿದ್ದಾರೆ ನಾಗವರ್ಧನ್.​

ಇದನ್ನೂ ಓದಿ: ನಟ ಅನಂತ್​ ನಾಗ್​ಗೆ ಪದ್ಮ ಪ್ರಶಸ್ತಿ ನೀಡಿ ಅಭಿಯಾನ: ಕೈ ಜೋಡಿಸಿದ ರಿಷಭ್​-ರಕ್ಷಿತ್ ಶೆಟ್ಟಿ

ಕೇವಲ ಮೂರು ತಿಂಗಳು ಅಷ್ಟೆ ನನ್ನ ಹಾಗೂ ಅರುಣಾ ಅವರ ಪರಿಚಯ. ಸಿನಿಮಾ ಹೀರೊ ಮಾಡ್ತೀನಿ ಅಂತ ಆಸೆ ಹುಟ್ಟಿಸಿದ್ದರು. ಹನಿ ಟ್ರ್ಯಾಪ್​ಗೆ ಬಳಸಿಕೊಂಡಿಲ್ಲ. ನನ್ನ ಬಳಿ ಫೋಟೋಸ್ ಯಾವುದೇ ಇಲ್ಲ. 2016 ಫೆಬ್ರವರಿ ಅಂತ್ಯದಲ್ಲಿ ಇವರ ನಾಟಕಗಳು ಗೊತ್ತಾಯ್ತು. 6 ಲಕ್ಷ ಹಾಗೂ ಚಿನ್ನ ತೆಗೆದುಕೊಂಡು ಮೋಸ ಮಾಡಿದ್ದಾರೆ. ನಾನು ಚಿತ್ರರಂಗಕ್ಕೆ ಹೊಸಬ. ನಿರ್ಮಾಪಕರು ಎಂದು ಅವರನ್ನು ನಂಬಿದ್ದೆ. ಪಂಚತಾರಾ ಹೋಟೆಲ್‌ಗಳಲ್ಲಿ ಊಟ ಮಾಡುತ್ತಿದ್ದರು. ಹೀಗಾಗಿ ನಾನು ನಂಬಿ ಮೋಸ ಹೋಗಿ ಬಿಟ್ಟೆ ಎಂದು ನಾಗವರ್ಧನ್​ ಬೇಸರ ವ್ಯಕ್ತಪಡಿಸಿದ್ದಾರೆ.
Published by:Anitha E
First published: