ಬೊಕ್ಕ ತಲೆ ಹುಡುಗನನ್ನು ಮದುವೆಯಾಗಲಿದ್ದಾರೆ ನಟಿ ಯಾಮಿ ಗೌತಮ್​?

ಪತ್ರಕರ್ತರೊಬ್ಬರು ‘ನೀವು ನಿಜ ಜೀವನದಲ್ಲಿ ಬೊಕ್ಜತಲೆ ಇರುವ ವ್ಯಕ್ತಿಯನ್ನು ಮದುವೆಯಾಗುತ್ತೀರಾ?‘ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಯಾಮಿ ಗೌತಮ್​ ಹೌದು, ಯಾಕಾಗಬಾರದು? ನನ್ನ ದೃಷ್ಠಿಯಲ್ಲಿ ಬೊಕ್ಕತಲೆ ಇರುವ ವ್ಯಕ್ತಿಗಳು ತುಂಬಾ ಕೂಲ್​ ಆಗಿ ಇರುತ್ತಾರೆ.

news18-kannada
Updated:November 15, 2019, 11:14 AM IST
ಬೊಕ್ಕ ತಲೆ ಹುಡುಗನನ್ನು ಮದುವೆಯಾಗಲಿದ್ದಾರೆ ನಟಿ ಯಾಮಿ ಗೌತಮ್​?
ಯಾಮಿ ಗೌತಮ್
  • Share this:
ಬಾಲಿವುಡ್​ ಬೆಡಗಿ ಯಾಮಿ ಗೌತಮ್​ ನಟಿಸಿರುವ 'ಬಾಲಾ' ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರ ರಿಲೀಸ್​ ಆಗಿ ನಾಲ್ಕು ದಿನಗಳಲ್ಲಿ 8.24 ಕೋಟಿ ಕಲೆಕ್ಷನ್​ ಮಾಡಿದ್ದು, ಒಂದು ವಾರದಲ್ಲಿ 52.21 ಕೋಟಿ ಗಿಟ್ಟಿಸಿಕೊಂಡಿದೆ. ಚಿತ್ರದ ಸಕ್ಸಸ್ ​ಮೀಟ್​ನಲ್ಲಿ ಭಾಗಿಯಾಗಿದ್ದ ಯಾಮಿ ತನ್ನ ರಿಯಲ್​ ಲೈಫ್​ ಹುಡುಗ ಹೇಗಿರಬೇಕು ಎಂದು ಹೆಳಿದ್ದಾರೆ.

ಪತ್ರಕರ್ತರೊಬ್ಬರು ‘ನೀವು ನಿಜ ಜೀವನದಲ್ಲಿ ಬೊಕ್ಜತಲೆ ಇರುವ ವ್ಯಕ್ತಿಯನ್ನು ಮದುವೆಯಾಗುತ್ತೀರಾ?‘ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಯಾಮಿ ಗೌತಮ್​ ಹೌದು, ಯಾಕಾಗಬಾರದು? ನನ್ನ ದೃಷ್ಠಿಯಲ್ಲಿ ಬೊಕ್ಕತಲೆ ಇರುವ ವ್ಯಕ್ತಿಗಳು ತುಂಬಾ ಕೂಲ್​ ಆಗಿ ಇರುತ್ತಾರೆ. ನಾನು ಈ ಸಿನಿಮಾವನ್ನು ತೆರೆಗೆ ತರಲು ಕಾರಣ, ಯಾರೇ ಆಗಲಿ ಮೊದಲು ತಮ್ಮನ್ನು ತಾವು ಪ್ರೀತಿಸಬೇಕು. ಆನಂತರ ಬೇರೆಯವರಿಂದ ಪ್ರೀತಿಯನ್ನು ನಿರೀಕ್ಷಿಸಬೇಕು ಎಂದಿದ್ದಾರೆ.

ಅನೇಕರು ಸಿನಿಮಾ ನೋಡಿ ನನಗೆ ಕರೆ, ಸಂದೇಶವನ್ನು ಮಾಡಿ ಅಭಿನಂದಿಸುತ್ತಿದ್ದಾರೆ. ನನ್ನ ವೃತ್ತಿ ಬದುಕಿನಲ್ಲಿ ಭಿನ್ನವಾದ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದರು

'ಬಾಲಾ' ಚಿತ್ರದಲ್ಲಿ ಯಾಮಿ ಗೌತಮ್​ ಟಿಕ್​ಟಾಕ್​ ಸ್ಟಾರ್​ ಆಗಿ ಕಾಣಿಸಿಕೊಂಡಿದ್ದಾರೆ. ಅಂತೆಯೇ, ಆಯುಷ್ಮಾನ್​ ಖುರಾನಾ ಬೊಕ್ಕತಲೆ ಸಮಸ್ಯೆಯಿಂದ ಬಳಲುತ್ತಿರುವ ಪಾತ್ರವನ್ನು ಮಾಡಿದ್ದಾರೆ. ಅಮರ್​ ಕೌಶಿಕ್​​ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'ಬಾಲಾ' ಚಿತ್ರದಲ್ಲಿ ನಾಯಕಿ ಭೂಮಿ ಪಡ್ನೇಕರ್​ ಗಮನಾರ್ಹ ಪಾತ್ರದಲ್ಲಿ ಕಾನಿಸಿಕೊಂಡಿದ್ದಾರೆ.

ಇದನ್ನೂ ಓದಿ: Facebook: ಎರಡು ತಿಂಗಳಿನಲ್ಲಿ 350 ಕೋಟಿ​ ನಕಲಿ ಖಾತೆಗಳು ಪತ್ತೆ!; ಎಚ್ಚೆಂತ್ತುಕೊಂಡ ಫೇಸ್​ಬುಕ್​

ಇದನ್ನೂ ಓದಿ:  facebook pay: ಬಂದಿದೆ ಫೇಸ್​ಬುಕ್​ ಪೇ; ಏನಿದರ ವಿಶೇಷತೆ ಗೊತ್ತಾ?

 
First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ