• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Pathaan: ಪಠಾಣ್​ನಲ್ಲಿ ಶಾರುಖ್ ಭರ್ಜರಿ ಲುಕ್! ಕಿಂಗ್ ಖಾನ್ ಫಿಟ್ನೆಸ್ ಟ್ರೈನರ್ ಏನಂತಾರೆ?

Pathaan: ಪಠಾಣ್​ನಲ್ಲಿ ಶಾರುಖ್ ಭರ್ಜರಿ ಲುಕ್! ಕಿಂಗ್ ಖಾನ್ ಫಿಟ್ನೆಸ್ ಟ್ರೈನರ್ ಏನಂತಾರೆ?

ಪಠಾಣ್

ಪಠಾಣ್

ಕಳೆದ ಕೆಲವು ವರ್ಷಗಳಲ್ಲಿ, ಶಾರುಖ್ ಸಾಕಷ್ಟು ಬಾರಿ ಗಾಯಗೊಂಡಿದ್ದು, ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಅವರು ಹೆಚ್ಚು ಜಾಗರೂಕರಾಗಿದ್ದಾರೆ ಕೂಡ.

 • Trending Desk
 • 5-MIN READ
 • Last Updated :
 • Bangalore, India
 • Share this:

ಪಠಾಣ್ (Pathaan) ಚಿತ್ರದಲ್ಲಿ ಶಾರುಖ್ ಖಾನ್ (Shah Rukh Khan) ಅವರ ಫಿಸಿಕ್ ಮತ್ತು ಹೊಸ ಲುಕ್ ಅವರ ಅಭಿಮಾನಿಗಳು ಮತ್ತು ವಿಮರ್ಶಕರಿಂದ ತುಂಬಾನೇ ಮೆಚ್ಚುಗೆ ಪಡೆದಿದೆ. ಒಳ್ಳೆ ಜಿಮ್​ಗೆ ಹೋಗೋ ಯುವಕನ ದೇಹದಂತೆ (Body) ತಮ್ಮ ಫಿಸಿಕ್ ಅನ್ನು ರೆಡಿ ಮಾಡಿಕೊಂಡಿರುವುದು ನಿಜಕ್ಕೂ ಅನೇಕರಿಗೆ ಅಚ್ಚರಿ ತಂದಿದೆ. ಪಠಾಣ್ ಚಿತ್ರದಲ್ಲಿ 57 ವರ್ಷದ ನಟ ಗೂಢಚಾರನ ಪಾತ್ರ ಮಾಡಿದ್ದಾರೆ. ಶಾರುಖ್ ಖಾನ್ ತಮ್ಮ ಫಿಸಿಕ್ (Physic) ಅನ್ನು ಹೀಗೆ ಬದಲಾಯಿಸಿಕೊಂಡಿದ್ದು ಮೊದಲೇನಲ್ಲ. ಈ ಹಿಂದೆ 2007 ರಲ್ಲಿ, ಅವರು ‘ಓಂ ಶಾಂತಿ ಓಂ’ ಗಾಗಿ ಸಿಕ್ಸ್ ಪ್ಯಾಕ್ ಮಾಡಿ ಕೊಂಡಿದ್ದರು.


ಶಾರುಖ್ ಖಾನ್ ಇಂತಹ ಫಿಸಿಕ್ ರೆಡಿ ಮಾಡಿಕೊಳ್ಳಲು ಏನೆಲ್ಲಾ ಕಸರತ್ತು ಮಾಡಿದ್ದಾರೆ ಗೊತ್ತೇ? ಬನ್ನಿ ಹಾಗಾದರೆ ಇದೆಲ್ಲದರ ಬಗ್ಗೆ ಕಳೆದ 23 ವರ್ಷಗಳಿಂದ ನಟನೊಂದಿಗೆ ಕೆಲಸ ಮಾಡುತ್ತಿರುವ ಅವರ ಫಿಟ್ನೆಸ್ ತರಬೇತುದಾರರಾದ ಪ್ರಶಾಂತ್ ಸಾವಂತ್ ಏನ್ ಹೇಳ್ತಾರೆ ನೋಡೋಣ.


ಶಾರುಖ್ ಫಿಟ್ನೆಸ್ ಬಗ್ಗೆ ಟ್ರೈನರ್ ಪ್ರಶಾಂತ್ ಹೇಳಿದ್ದೇನು?


ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಸಾವಂತ್ ಅವರು ಶಾರುಖ್ ಅವರ ಫಿಟ್ನೆಸ್, ಜೀವನಶೈಲಿ ಅಭ್ಯಾಸಗಳು ಮತ್ತು ಅವರೊಂದಿಗೆ ಕೆಲಸ ಮಾಡುವುದು ಹೇಗಿರುತ್ತದೆ ಎಂಬುದರ ಬಗ್ಗೆ ಮಾತನಾಡಿದರು.


ಶಾರುಖ್ ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿ 23 ವರ್ಷಗಳಾಗಿವೆಯಂತೆ


ಪ್ರಶಾಂತ್ ಅವರು ಶಾರುಖ್ ಜೊತೆಗೆ ಕೆಲಸ ಮಾಡಲು ಶುರು ಮಾಡಿ 23 ವರ್ಷಗಳಾಗಿವೆಯಂತೆ. ಈ ವರ್ಷಗಳಲ್ಲಿ ಶಾರುಖ್ ಅವರ ಫಿಟ್ನೆಸ್ ಹೇಗೆ ವಿಕಸನಗೊಂಡಿದೆ ಅಂತ ಕೇಳಿದ ಪ್ರಶ್ನೆಗೆ ಪ್ರಶಾಂತ್ ಅವರು ಶಾರುಖ್ ಖಾನ್ ಅವರ ಫಿಟ್ನೆಸ್ ತುಂಬಾನೇ ಬದಲಾಗಿದೆ ಎಂದಿದ್ದಾರೆ.


ಅವರು ವಯಸ್ಸಾದಂತೆ ಹೆಚ್ಚು ಬಲಶಾಲಿ ಮತ್ತು ಫಿಟ್ ಆಗಿದ್ದಾರೆ. ನಾನು ಅವರಿಗೆ ತರಬೇತಿ ನೀಡಲು ಆರಂಭಿಸಿ 23 ವರ್ಷಗಳಾಗಿವೆ. ಅವರ ಏಕೈಕ ಪ್ರಮುಖ ಮಂತ್ರವೆಂದರೆ ಅದು 'ಸ್ಥಿರತೆ’ ಅಂತ ಹೇಳಬಹುದು.
ಕಳೆದ ಕೆಲವು ವರ್ಷಗಳಲ್ಲಿ, ಶಾರುಖ್ ಸಾಕಷ್ಟು ಬಾರಿ ಗಾಯಗೊಂಡಿದ್ದು, ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಅವರು ಹೆಚ್ಚು ಜಾಗರೂಕರಾಗಿದ್ದಾರೆ ಕೂಡ. ಅವರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ತಾಳ್ಮೆ ಹೊಂದಿದ್ದಾರೆ. ತಮ್ಮ ಫಿಟ್ನೆಸ್ ಗಾಗಿ ಸಾಕಷ್ಟು ಸಂಶೋಧನೆ ಸಹ ಮಾಡುತ್ತಾರೆ ಎಂದು ಹೇಳಿದರು.


ಶಾರುಖ್ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವವಂತೆ!


ಶಾರುಖ್ ಅವರ ಜೊತೆ ಕೆಲಸ ಮಾಡುವುದು ಹೇಗಿತ್ತು ಅಂತ ಕೇಳಿದ ಪ್ರಶ್ನೆಗೆ, ಪ್ರಶಾಂತ್ ಅವರು ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವುದು ಒಂದು ಅದ್ಭುತವಾದ ಅನುಭವ ಎಂದಿದ್ದಾರೆ.


ಇದನ್ನೂ ಓದಿ: Kiara Advani-Sidharth Malhotra: ಸಿದ್ಧಾರ್ಥ್-ಕಿಯಾರ ಮದುವೆ! ಇವರ ಏಜ್ ಗ್ಯಾಪ್ ಎಷ್ಟು?


ಅವರನ್ನು ಕಂಟ್ರೋಲ್ ಮಾಡಲು ನನಗೆ ಅನುಮತಿಸುತ್ತಾರೆ. ಅದು ನನ್ನ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುತ್ತದೆ ಎಂದಿದ್ದಾರೆ.
ಅಲ್ಲದೆ, ಅವರು ತಮ್ಮ ವ್ಯಾಯಾಮಗಳನ್ನು ನಿಯಂತ್ರಿಸುವಲ್ಲಿ ನನಗೆ ಸಾಕಷ್ಟು ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ನೀಡುತ್ತಾರೆ. ಅವರೊಂದಿಗೆ ಕೆಲಸ ಮಾಡುವುದು ತುಂಬಾ ಸುಲಭ. ಅವರಿಗೆ ತರಬೇತಿ ನೀಡಲು ನನಗೆ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ತುಂಬಾನೇ ಬ್ಲೆಸ್ಡ್ ಅಂತ ಅನ್ನಿಸುತ್ತೆ ಎಂದು ಹೇಳಿದರು.


ಪಠಾಣ್ ಚಿತ್ರಕ್ಕೆ ಶಾರುಖ್ ಅವರ ಫಿಟ್ನೆಸ್ ದಿನಚರಿ ಹೇಗಿತ್ತು ಗೊತ್ತೇ?


“ನಾವು ಪಠಾಣ್’ ಚಿತ್ರಕ್ಕೆ ವಿಭಿನ್ನ ದಿನಚರಿಗಳನ್ನು ಅನುಸರಿಸಿದ್ದೇವೆ. ಆ ಪಾತ್ರಕ್ಕೆ ಅನುಗುಣವಾಗಿ ಶಾರುಖ್ ಅವರು ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಸಾಕಷ್ಟು ಪುಲ್-ಅಪ್ ಮತ್ತು ಪುಶ್-ಅಪ್ ಗಳನ್ನು ಮಾಡುತ್ತಿದ್ದರು.
ಚಿತ್ರದಲ್ಲಿ ತುಂಬಾನೇ ಆಕ್ಷನ್ ದೃಶ್ಯಗಳಿವೆ. ಆ ದೃಶ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವು ಮುಖ್ಯವಾಗಿತ್ತು. ಕೋವಿಡ್ ಬಂದಾಗಲೂ ಅವರ ತರಬೇತಿ ಬದ್ಧತೆ ತುಂಬಾನೇ ಚೆನ್ನಾಗಿತ್ತು. ಅವರು ಪ್ರತಿದಿನ ತರಬೇತಿ ಪಡೆಯುತ್ತಿದ್ದರು. ಅವರ ಟ್ರೈನಿಂಗ್ ನ ಫೋಟೋಗಳನ್ನು ಸಹ ನನಗೆ ಕಳುಹಿಸುತ್ತಿದ್ದರು ಎಂದು ಪ್ರಶಾಂತ್ ಹೇಳಿದರು.


ಫಿಟ್ನೆಸ್ ಗೆ ಮೂರು ವಿಷಯಗಳು ತುಂಬಾನೇ ಅತ್ಯಗತ್ಯವಂತೆ


ಫಿಟ್ನೆಸ್ ಗೆ ಮೂರು ವಿಷಯಗಳು ತುಂಬಾನೇ ಅತ್ಯಗತ್ಯ. ತರಬೇತಿ, ಪೋಷಣೆ ಮತ್ತು ಪೂರಕಗಳು ಅಂತ ಹೇಳಬಹುದು. ಶಾರುಖ್ ಖಾನ್ ಹೆಚ್ಚು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಸ್ನಾಯು ದ್ರವ್ಯರಾಶಿಯನ್ನು ನಿರ್ಮಿಸಲು ನಾವು ಅವರ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಸೇರಿಸಿದ್ದೇವೆ ಎಂದು ಪ್ರಶಾಂತ್ ಹೇಳುತ್ತಾರೆ.


ಫಿಟ್ ಆಗಲು ಬಯಸುವವರಿಗೆ ಪ್ರಶಾಂತ್ ಹೇಳಿದ ಫಿಟ್ನೆಸ್ ಮಂತ್ರವೇನು?


ಚೆನ್ನಾಗಿ ಮತ್ತು ಸ್ವಚ್ಛವಾದ ಆಹಾರ ತಿನ್ನಿ


 • ನಿಮ್ಮ ದೇಹವನ್ನು ಸದಾ ಹೈಡ್ರೇಟ್ ಆಗಿರಿಸಿ

 • ಸರಿಯಾಗಿ ನಿದ್ರೆ ಮಾಡಿ

 • ಫಿಟ್ನೆಸ್ ಕಾಪಾಡಿಕೊಳ್ಳಲು ಶಾರ್ಟ್ ಕಟ್ ಗಳನ್ನು ಆಯ್ಕೆ ಮಾಡಬೇಡಿ

 • ಪ್ರತಿದಿನ ತಾಲೀಮು ಮಾಡುವುದನ್ನು ಮರೆಯಬೇಡಿ.

Published by:Divya D
First published: