HOME » NEWS » Entertainment » WONDERFUL REPLY OF JAGGESH TO A FAN WHO SAID I HAVE NO PROPERTY I AM A BARBER VB

Jaggesh: ನನಗೆ ಆಸ್ತಿ ಇಲ್ಲ, ನಾನು ಕ್ಷೌರಿಕ ಎಂದ ಅಭಿಮಾನಿಗೆ ನವರಸನಾಯಕ ಜಗ್ಗೇಶ್ ಏನು ಹೇಳಿದ್ರು ಗೊತ್ತೇ?

ಜಗ್ಗೇಶ್ ಅಭಿಮಾನಿ ಆಗಿರುವ ಬಸವರಾಜ ಕಟ್ಟೀಮನಿ ಎಂಬವರು ತಮ್ಮ ಕಷ್ಟವನ್ನು ಟ್ವೀಟ್ ಮಾಡಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ತಮ್ಮ ಹಳೆಯ ಕಷ್ಟಕರ ದಿನಗಳ ಬಗ್ಗೆ ತಿಳಿಸಿ ಈ ಮಾತು ಪ್ರತಿಯೊಬ್ಬರ ಜೀವನಕ್ಕೂ ನೀತಿ ಹೇಳುತ್ತದೆ‌ ಎಂದಿದ್ದಾರೆ.

news18-kannada
Updated:July 3, 2020, 12:13 PM IST
Jaggesh: ನನಗೆ ಆಸ್ತಿ ಇಲ್ಲ, ನಾನು ಕ್ಷೌರಿಕ ಎಂದ ಅಭಿಮಾನಿಗೆ ನವರಸನಾಯಕ ಜಗ್ಗೇಶ್ ಏನು ಹೇಳಿದ್ರು ಗೊತ್ತೇ?
ನಟ ಜಗ್ಗೇಶ್
  • Share this:
ಕಾಯಕವೇ ಕೈಲಾಸ ಎಂಬ ಮಾತು ವಚನಕಾರರು ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಒಂದು ವೃತ್ತಿಯನ್ನು ಮಾಡಲೇಬೇಕು. ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬೇಕು. ಬಡಿದು ತಿನ್ನುವುದಕ್ಕಿಂತ ದುಡಿದು ತಿನ್ನುವುದು ಉತ್ತಮ. ಕೆಲಸ ಯಾವುದೇ ಆದರೇನು ಒಳ್ಳೆಯ ದಾರಿಯಲ್ಲಿದ್ದರೇ ಪ್ರತಿ ಕೆಲಸವು ದೈವತ್ವದ ಸಮಾನ. ಈ ನೀತಿಯುಳ್ಳ ಮಾತನ್ನು ನವರಸನಾಯಕ ಜಗ್ಗೇಶ ತಮ್ಮ ಅಭಿಮಾನಿಯೊಬ್ಬರಿಗೆ ಹೇಳಿ ಟ್ಟೀಟ್ ಮಾಡಿದ್ದಾರೆ. ಅಷ್ಟಕ್ಕೂ ಜಗ್ಗೇಶ್ ಅವರು ಈ ಮಾತನ್ನು ಏಕೆ ಹೇಳಿದರು?. ಈ ಸ್ಟೋರಿ ಓದಿ.

ಜಗ್ಗೇಶ್ ಅವರು ಅಭಿನಯ ಮಾತ್ರವಲ್ಲದೆ ತಮ್ಮ ನೇರ ನುಡಿಯಿಂದ ಜನರ ಮನಸ್ಸು ಗೆದ್ದವರು. ಯಾರಾದರೂ ಕಷ್ಟದಲ್ಲಿದ್ದಾರೆ ಎಂದರೆ ಸಾಕು ಕೈಲಾದಷ್ಟು ಸಹಾಯ ಮಾಡುವ ಹೆಂಗರಳು ಅವರದ್ದು. ಹೀಗಾಗಿಯೇ ಜಗ್ಗೇಶ್ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಜಗ್ಗೇಶ್ ತಮ್ಮ ಟ್ವಿಟರ್ ಪೇಜ್​ನಲ್ಲಿ ಅಭಿಮಾನಿಗಳ ಸಮಸ್ಯೆಗೆ ಸ್ಪಂದಿಸುತ್ತಿರುತ್ತಾರೆ.

KGF Chapter 2: ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ನೆಟ್ಟಿಗರಿಗೆ ಕೆಲಸ ಕೊಟ್ಟ ಪ್ರಶಾಂತ್​ ನೀಲ್..!

ಅಂತೆಯೆ ಜಗ್ಗೇಶ್ ಅಭಿಮಾನಿ ಆಗಿರುವ ಬಸವರಾಜ ಕಟ್ಟೀಮನಿ ಎಂಬವರು ತಮ್ಮ ಕಷ್ಟವನ್ನು ಟ್ವೀಟ್ ಮಾಡಿ ತಿಳಿಸಿದ್ದರು. "ನನಗೆ ಆಸ್ತಿ ಇಲ್ಲ, ನಾನು ಕ್ಷೌರಿಕ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿ ವಿಫಲನಾಗಿದ್ದೇನೆ. ಹಾಗಾಗಿ ನನ್ನ ಹೆಂಡತಿ ಮನೆಯವರು ನಮ್ಮ ಮನೆಗೆ ಬರುತ್ತಿಲ್ಲಾ. ನಾನು ಚಿಂತೆಯಲ್ಲಿದ್ದೇನೆ" ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಇದಕ್ಕೆ ಟ್ವೀಟ್ ಮಾಡಿದ ಜಗ್ಗೇಶ್ ತಮ್ಮ ಹಳೆಯ ಕಷ್ಟಕರ ದಿನಗಳ ಬಗ್ಗೆ ಹೇಳಿ, "ಕಾಯಕ ಯಾವುದಾದರೇನು ಕೈಲಾಸ ಕಾಣಿ! ಸ್ವಾಭಿಮಾನ ಮುಖ್ಯ. ಬದುಕಿಗೆ ಪ್ರತಿಷ್ಠೆ ಬೇಡ, ದುಡ್ಡಿದ್ದರೆ ಈಗ ದುನಿಯಾ!" ಎಂದು ಸಮಾಧಾನದ ಮಾತನ್ನು ಹೇಳಿದ್ದಾರೆ. ಈ ಮಾತು ಪ್ರತಿಯೊಬ್ಬರ ಜೀವನಕ್ಕೂ ನೀತಿ ಹೇಳುತ್ತದೆ‌.

 Saroj Khan Passes Away: ಬಾಲಿವುಡ್​ನ 71 ವರ್ಷದ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್​ ವಿಧಿವಶ..!

ಇದರ ಜೊತೆಗೆ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿರುವ ಜಗ್ಗೇಶ್, "ನಾನು ನನ್ನಆರಂಭದ ದಿನದಲ್ಲಿ ಮೈಸೂರು ಕ್ವಾಲಿಟಿಬಾರ್​ನಲ್ಲಿ ಹಾಗು ಚಾಮುಂಡೇಶ್ವರಿಯ ಚಿತ್ರ ಮಂದಿರ ಪಕ್ಕದ ಮಾಡ್ರನ್ ಕೆಫೆಯಲ್ಲಿ ಸಪ್ಲೈಯರ್ ಆಗಿ ಹಾಗೂ ಪೂನ ಕುದುರೆ ಲಾಯದಲ್ಲಿ ಕೆಲಸಮಾಡಿದ್ದೆ. ಇದಕ್ಕೆ ಕಾರಣ ಸ್ವಾಭಿಮಾನ. ಹೆಣ ಹೋರುವವಗೆ ಹಿಂದಾಗಲಿ ಮುಂದಾಗಲಿ ಕಾರಣವೇಕೆ ಹೊರಬೇಕು" ಎಂದು ಅಭಿಮಾನಿಗೆ ನೀತಿಯುಳ್ಳ ಮಾತು ಹೇಳಿದ್ದಾರೆ.
First published: July 3, 2020, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories