Akhanda: ಹೋಮ್​ ಲೋನ್​-ಕಾರ್​ ಲೋನ್​ ಬಾಲಯ್ಯ `ಸೈಕ್ಲೋನ್​’, ಏನ್​ ಮಸ್ತ್​ ಡೈಲಾಗ್ಸ್​ ಹೊಡಿತಾರಪ್ಪ ಈ ಆಂಟಿ!

ಬಾಲಯ್ಯ ಅವರ ಸಿನಿ ಕೆರಿಯರ್​ನಲ್ಲೇ ಈ ಸಿನಿಮಾ ದೊಡ್ಡ ದಾಖಲೆ(Records) ಬರೆದಿದೆ. ಇದೀಗ ಮಹಿಳೆಯೊಬ್ಬರು ಬಾಲಯ್ಯ ಅವರ ಬಗ್ಗೆ ಡೈಲಾಗ್(Dialogue)​ ಹೊಡೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ

ಬಾಲಯ್ಯ, ಡೈಲಾಗ್​ ಹೇಳಿದ ಮಹಿಳೆ

ಬಾಲಯ್ಯ, ಡೈಲಾಗ್​ ಹೇಳಿದ ಮಹಿಳೆ

  • Share this:
ನಂದಮೂರಿ ಬಾಲಕೃಷ್ಣ(Nandamuri Balakrishna) ಅಂದರೆ ಸಾಕು, ಊಹೆಗೂ ನಿಲುಕದ ಫೈಟ್​ ಸೀನ್ಸ್(Fight Scene)​.. ತೊಡೆ ತಟ್ಟಿ ವೇಗದಿಂದ ಬರುತ್ತಿರುವ ರೈಲು ನಿಲ್ಲುಸುವ ತಾಕತ್ತು ಇರುವುದು ಬಾಲಯ್ಯ ಅವರಿಗೆ ಮಾತ್ರ. ಇನ್ನೂ ಇವರ ಡೈಲಾಗ್​ಗೆ ಎದುರಲ್ಲಿರುವವರ ಕಿವಿಯಲ್ಲಿ ರಕ್ತ ಬರುವುದು ಕಾಮನ್​. ಇವರ ಸಿನಿಮಾ ರಿಲೀಸ್​ ಆಯ್ತು ಅಂದರೆ, ಅಲ್ಲಿ ಹಬ್ಬದ ವಾತಾವರಣ, ನಟರಾಜನೇ ನಾಚಿಕೊಳ್ಳುವಂತಹ ನೃತ್ಯ ಮಾಡುವುದು ಅಂದರೆ, ಅದು ಬಾಲಯ್ಯ(Balayya) ಅವರಿಂದ ಮಾತ್ರ ಸಾಧ್ಯ. ಇವರ ಸಿನಿಮಾ ಮನರಂಜನೆಗೆ ಎಂದು ಮೋಸ ಮಾಡಿಲ್ಲ. ಓವರ್​ ಬಿಲ್ಡಪ್(Over Buildup)​ ಫೈಟ್ಸ್​, ಡೈಲಾಗ್ಸ್​ ಇದ್ರೂ ಸಿನಿಮಾ ರಸಿಕರಿಗೆ ಮಜಾ ಕೊಡುವುದರಲ್ಲಿ ಮೋಸ ಮಾಡುವುದಿಲ್ಲ. ಚಿತ್ರಮಂದಿರಗಳಲ್ಲಿ ಇವರ ಡೈಲಾಗ್​ಗಳಿಗಿಂತ, ಇವರ ಅಭಿಮಾನಿಗಳ ಬಾಯಿಯಲ್ಲಿ ‘ಜೈ ಬಾಲಯ್ಯ.. ಜೈ ಜೈ ಬಾಲಯ್ಯ’ ಎಂಬ ಡೈಲಾಗ್​ ಸದ್ದು ಕೇಳಿಸಿತ್ತೆ. ಅಷ್ಟರ ಮಟ್ಟಿಗೆ ಮೋಡಿ ಮಾಡಿದ್ದಾರೆ ನಂದಮೂರಿ ಬಾಲಕೃಷ್ಣ. ಇತ್ತೀಚೆಗೆ ತೆರೆಕಂಡ ಇವರ ಅಖಂಡ(Akhanda) ಸಿನಿಮಾ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿತು. ಬಾಲಯ್ಯ ಅವರ ಸಿನಿ ಕೆರಿಯರ್​ನಲ್ಲೇ ಈ ಸಿನಿಮಾ ದೊಡ್ಡ ದಾಖಲೆ(Records) ಬರೆದಿದೆ. ಇದೀಗ ಮಹಿಳೆಯೊಬ್ಬರು ಬಾಲಯ್ಯ ಅವರ ಬಗ್ಗೆ ಡೈಲಾಗ್(Dialogue)​ ಹೊಡೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. 

ಬಾಲಯ್ಯನ ಬಗ್ಗೆ ಹಾಡಿ ಹೊಗಳಿದ ಮಹಿಳೆ!

ಮಹಿಳೆಯೊಬ್ಬರಯ ಕಾರಿನಲ್ಲಿ ಕುಳಿತು ಬಾಲಯ್ಯ ಅವರ ಬಗ್ಗೆ ಮಾತನಾಡಿದ್ದಾರೆ. ಅಖಂಡ ಸಿನಿಮಾಗೆ ಸಿಕ್ಕ ಯಶಸ್ಸಿನ ಬಗ್ಗೆ ಹೇಳಿದ್ದಾರೆ. ಬಾಲಯ್ಯ ಅವರಂತೆ ಡೈಲಾಗ್ ಹೊಡೆದಿದ್ದಾರೆ. ಹೋಮ್​ ಲೋನ್​ ಕಾರ್​ ಲೋನ್ ಬಾಲಯ್ಯ ಸೈಕ್ಲೋನ್​, ಕೋಕೋ ಕೋಲಾ ಪೆಪ್ಸಿ.. ಬಾಲಯ್ಯಗಾರು ಸೆಕ್ಸಿ’ ಈ ರೀತಿಯ ಡೈಲಾಗ್​​ಗಳನ್ನು ಈ ಮಹಿಳೆ ಹೇಳಿದ್ದಾರೆ. ಈ ವಿಡಿಯೋ ಎಲ್ಲಿನದು ಎಂದು ತಿಳಿದುಬಂದಿಲ್ಲ, ಆದರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಬಾಲಯ್ಯನ ಅಭಿಮಾನಿಗಳು ಈ ವಿಡಿಯೋವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: ಬಾಲಯ್ಯನ ‘ಅಖಂಡ’ ದಾಖಲೆ; 50ನೇ ದಿನಕ್ಕೆ 103 ಥಿಯೇಟರ್​​​ಗಳಲ್ಲಿ ಅಬ್ಬರ

150 ಕೋಟಿ ಕ್ಲಬ್​ ಸೇರಿದ ಬಾಲಯ್ಯನ ಸಿನಿಮಾ!


Published by:Vasudeva M
First published: