Priya Varrier: ‘ಶಟ್ ಅಪ್ ಬೆಂಡ್ ಓವರ್’ ಎನ್ನುತ್ತಿದ್ದಾರೆ ‘ಕಣ್ಣು ಹೊಡೆಯುವ' ಚೆಲುವೆ ಪ್ರಿಯಾ ವಾರಿಯರ್..!

Priya Prakash Varrier: 21 ವರ್ಷ ವಯಸ್ಸಿನ ಪ್ರಿಯಾ ವಾರಿಯರ್‌ಗೆ ಇನ್‍ಸ್ಟಾಗ್ರಾಂನಲ್ಲಿ 7 ಮಿಲಿಯನ್‍ಗಿಂತಲೂ ಹೆಚ್ಚು ಹಿಂಬಾಲಕರಿದ್ದಾರೆ. ಇತ್ತೀಚಿನ ಅವರ ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪ್ರಿಯಾ, ವೈರಲ್ ಟ್ರೆಂಡ್ ವಿಡಿಯೋ ರೀಲ್ ಒಂದರಲ್ಲಿ ಭಾಗವಹಿಸಿದ್ದಾರೆ.

ಪ್ರಿಯಾ ವಾರಿಯರ್​.

ಪ್ರಿಯಾ ವಾರಿಯರ್​.

  • Share this:

    ‘ಕಣ್ಣು ಮಿಟುಕಿಸುವ’ ವಿಡಿಯೋ ಮೂಲಕ ಜನಪ್ರಿಯರಾಗಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ನೆನಪಿದ್ದಾರೆಯೇ..? ನೆನಪಿಲ್ಲದೆ ಇರುತ್ತಾರೆಯೇ. . . . ‘ಕಣ್ಣು ಹೊಡೆಯುವ’ ಮೂಲಕ ಲಕ್ಷಾಂತರ ಜನರ ಮನಗೆದ್ದು, ದೇಶದೆಲ್ಲೆಡೆ ಅಭಿಮಾನಿ ಬಳಗ ಗಳಿಸಿದ ನಟಿ ಅವರು. ಸಾಮಾಜಿಕ ಮಾಧ್ಯಮದಲ್ಲಂತೂ ಅವರಿಗೆ ಜಗತ್ತಿನ ಲೆಕ್ಕವಿಲ್ಲದಷ್ಟು ಅಭಿಮಾನಿಗಳು ಇದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿನ ನಟಿಯಾಗಿದ್ದರೂ ಎಲ್ಲೆಡೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 21 ವರ್ಷ ವಯಸ್ಸಿನ ಪ್ರಿಯಾ ವಾರಿಯರ್‌ಗೆ ಇನ್‍ಸ್ಟಾಗ್ರಾಂನಲ್ಲಿ 7 ಮಿಲಿಯನ್‍ಗಿಂತಲೂ ಹೆಚ್ಚು ಹಿಂಬಾಲಕರಿದ್ದಾರೆ. ಇತ್ತೀಚಿನ ಅವರ ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪ್ರಿಯಾ, ವೈರಲ್ ಟ್ರೆಂಡ್ ವಿಡಿಯೋ ರೀಲ್ ಒಂದರಲ್ಲಿ ಭಾಗವಹಿಸಿದ್ದಾರೆ. ಪ್ರಿಯಾ ವಾರಿಯರ್, ಗಾಯಕ ಕಿಡಿ ಅವರ “ಟಚ್ ಇಟ್ “ ಎಂಬ ಇಂಗ್ಲೀಷ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.


    ಈ ವೈರಲ್ ಟ್ರೆಂಡ್ ಒಂದು ಇನ್ಸ್ಟಾ ರೀಲ್ ಆಗಿದ್ದು, 10-15 ನಿಮಿಷಗಳ ಅವಧಿ ಹೊಂದಿದೆ. ಅದರಲ್ಲಿ ನೆಟ್ಟಿಗರು “ಶಟ್ ಅಪ್ ಅಂಡ್ ಬೆಂಡ್” ಹಾಡಿಗೆ ತಕ್ಕಂತೆ ಕೊಂಚ ಬಾಗಿ, ತಮ್ಮ ಹಿಂಭಾಗವನ್ನು ಕುಲುಕಿಸುತ್ತಾ ನರ್ತಿಸಬೇಕು. ಪ್ರಿಯಾ ಈ ರೀಲ್‍ನಲ್ಲಿ ಅದ್ಭುತವಾಗಿ “ಶಟ್ ಅಪ್ ಅಂಡ್ ಬೆಂಡ್”ಗೆ ಹೆಜ್ಜೆ ಹಾಕುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಮನ ಗೆದ್ದಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ ಈ ರೀಲ್‍ನಲ್ಲಿ ಒಂದು ಪಿಂಕ್ ಕ್ರಾಪ್ ಟಾಪ್ ಟಿ ಶರ್ಟ್ ಮತ್ತು ಕಪ್ಪು ಲೆಗ್ಗಿಂಗ್ಸ್ ಧರಿಸಿ ಎಂದಿನಂತೆ ಸುಂದರವಾಗಿ ಕಂಗೊಳಿಸುತ್ತಿದ್ದಾರೆ.


    ಇದುವರೆಗೆ ಈ ವಿಡಿಯೋ ಸುಮಾರು 1.4 ಮಿಲಿಯನ್‍ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪ್ರಿಯಾ ಅಭಿಮಾನಿಗಳ ಪ್ರೀತಿ ಮತ್ತು ಮೆಚ್ಚುಗೆಗಳುಳ್ಳ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಿಯಾ ವಾರಿಯರ್ ಇನ್‍ಸ್ಟಾ ಹಿಂಬಾಲಕರಂತೂ ಈ ರೀಲ್‍ಗೆ ಹೃದಯ ಮತ್ತು ಬೆಂಕಿ ಇಮೋಜಿಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಪೋಸ್ಟ್‌ಗೆ 2 ಲಕ್ಷಕ್ಕಿಂತಲೂ ಹೆಚ್ಚಿನ ಮೆಚ್ಚುಗೆಗಳು ಲಭಿಸಿವೆ ಮತ್ತು ಇದುವರೆಗೆ ಸಿಕ್ಕಿರುವ ಪ್ರತಿಕ್ರಿಯೆಗಳ ಸಂಖ್ಯೆ 1,200ಕ್ಕೂ ಅಧಿಕ.


    2018ರಲ್ಲಿ ಪ್ರಿಯಾ ವಾರಿಯರ್ ಅಭಿನಯದ ಮಲಯಾಳಂ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ “ಒರು ಅಡಾರ್ ಲವ್” ನ ದೃಶ್ಯದ ತುಣುಕೊಂದು ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾದಾಗ ಪ್ರಿಯಾಗೂ ಭರ್ಜರಿ ಜನಪ್ರಿಯತೆ ಸಿಕ್ಕಿತು. ಆ ವಿಡಿಯೋ ತುಣುಕಿನಲ್ಲಿ, ವಿದ್ಯಾರ್ಥಿನಿಯ ಪಾತ್ರದಲ್ಲಿ ತರಗತಿ ಒಳಗೆ ಇರುವ ಪ್ರಿಯಾ ವಾರಿಯರ್ ವಿದ್ಯಾರ್ಥಿ ಒಬ್ಬನಿಗೆ ಕಣ್ಣು ಹೊಡೆಯುವ ದೃಶ್ಯವಿದೆ. 21 ವರ್ಷದ ಪ್ರಿಯಾ ಆಗಿನಿಂದಲೂ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಖ್ಯಾತಿಯನ್ನು ಬಳಸಿಕೊಳ್ಳುತ್ತಿದ್ದಾರೆ.


    ಅವರು ಆಗಾಗ ತಮ್ಮ ಜೀವನ ಶೈಲಿಯ ಕುರಿತ ರೀಲ್‍ಗಳನ್ನು ಮತ್ತು ಪೋಸ್ಟ್‌ಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕುತ್ತಲೇ ಇರುತ್ತಾರೆ. ಅವರು ದಕ್ಷಿಣ ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.


    ಇದನ್ನೂ ಓದಿ: ನಿಮ್ಮ ಗ್ರಾಹಕರ ವ್ಯಾಕ್ಸಿನೇಷನ್ ಸ್ಥಿತಿಯನ್ನು ತಿಳಿಯಿರಿ ಎಂಬ ಹೊಸ API ಪ್ರಾರಂಭಿಸಿದ COWIN: ಅದರ ಕೆಲಸ ಹೇಗೆ?

    ಒರು ಅಡಾರ್ ಲವ್ ಪ್ರಿಯಾ ಪ್ರಕಾಶ್ ವಾರಿಯರ್ ಮೊದಲ ಪ್ರಮುಖ ಸಿನಿಮಾ ಆಗಿತ್ತು. ಅದಾದ ಬಳಿಕ ಅವರು,ಚೆಕ್ ಮತ್ತು ಇಶ್ಕ್ ಎಂಬ ಎರಡು ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀದೇವಿ ಬಂಗ್ಲೋ ಎಂಬ ಹಿಂದಿ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಪ್ರಶಾಂತ್ ಮುಂಬುಳ್ಳಿ ನಿರ್ದೇಶಿಸಿದ್ದಾರೆ.

    First published: